ಕಾಬೂಲ್ : ಅಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಹೊಸ ಸರಕಾರವನ್ನು ರಚಿಸಿದ್ದಾರೆ. ಅಫ್ಘಾನಿಸ್ತಾನವನ್ನು ಅಫ್ಘನ್ ಇಸ್ಲಾಮಿಕ್ ದೇಶ ಎಂದು ಘೋಷಣೆ ಮಾಡಲಾಗಿದೆ. ಹಂಗಾಮಿ ಪ್ರಧಾನಿಯಾಗಿ ಮುಲ್ಲಾ ಮೊಹ್ಮದ್ ಹನಸ್ ನೇಮಕಗೊಂಡಿದ್ದಾನೆ.
ಜನರ ವಿರೋಧದ ನಡುವಲ್ಲೇ ತಾಲಿಬಾನ್ ಉಗ್ರರು ಇದೀಗ ಅಫ್ಘಾನಿಸ್ತಾನದಲ್ಲಿ ನೂತನ ಸರಕಾರವನ್ನು ರಚಿಸಿದ್ದಾರೆ. ಹಂಗಾಮಿ ಪ್ರಧಾನಿಯಾಗಿ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಮೊಹ್ಮದ್ ಹಸನ ನೇಮಕ ಗೊಂಡಿದ್ರೆ, ಮುಲ್ಲಾ ಬರಾದಾರ್ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವನಾಗಿ ನೇಮಕಗೊಂಡಿದ್ದಾನೆ. ರಕ್ಷಣಾ ಸಚವನಾಗಿ ಮುಲ್ಲಾ ಯಾಕೂಬ್, ಶಿಕ್ಷಣ ಸಚಿವನಾಗಿ ಶೇಖ್ ಮುನೀರ್ ಹಾಗೂ ಒಳಾಡಳಿತ ಸಚಿವನಾಗಿ ಸಿರಾಜುದ್ದೀನ್ ಹಕ್ಕಾನಿ ನೇಮಕಗೊಂಡಿದ್ದಾನೆ. ಅದ್ರಲ್ಲೂ ಸಿರಾಜುದ್ದೀನ್ ಹಕ್ಕಾನಿ ವಿಶ್ವಸಂಸ್ಥೆಯ ಘೋಷಿತ ಉಗ್ರನಾಗಿದ್ದಾನೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ವಿರುದ್ದ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಈ ನಡುವಲ್ಲೇ ಉಗ್ರರು ನೂತನ ಸರಕಾರವನ್ನು ಘೋಷಣೆ ಮಾಡಿದ್ದಾರೆ. ಅದ್ರಲ್ಲೂ ಈ ಹಿಂದೆ ಹಿಂಸೆಯ ಮೂಲಕ ಆಡಳಿತ ನಡೆಸಿದ್ದ ಉಗ್ರರು ಅದೇ ಹಾದಿಯಲ್ಲೇ ಸಾಗುತ್ತಾರೆ ಅನ್ನೋ ಆತಂಕ ಜನರನ್ನು ಕಾಡುತ್ತಿದೆ.
ಇದನ್ನೂ ಓದಿ : ತಾಲಿಬಾನ್ ಆಡಳಿತವನ್ನು ಮಾನ್ಯ ಮಾಡುವುದಕ್ಕೆ ಆತುರವೇನು ಇಲ್ಲ : ಅಮೇರಿಕ
ಇದನ್ನೂ ಓದಿ : ಅಮೇರಿಕಾ ಮೊಸ ಮಾಡಿದೆ ಎಂದ ಅಫ್ಘಾನಿಸ್ತಾನ : ದೊಡ್ಡಣ್ಣನಿಗೆ ಹಿಡಿಶಾಪ ಹಾಕಿದ್ದ ಅಫ್ಘಾನ್ ನಿವಾಸಿಗಳು
(Taliban announce new government: Afghan Islamic country)