ಬೋಡು ತಲೆ ಇರುವವರಿಗೆ ಮಾತ್ರ ಬಾಲ್ಡ್‌ ಫೆಸ್ಟ್‌ಗೆ ಅವಕಾಶ !

ಅಮೇರಿಕಾ : ಹಲವರು ಬೋಡು (ಬೋಳು ) ತಲೆ ಅಂತ ಚಿಂತೆ ಮಾಡ್ತಾರೆ. ಆದ್ರೆ ಹಲವರು ಬೋಡು ತಲೆಯನ್ನೇ ಫ್ಯಾಷನ್‌ ಮಾಡಿಕೊಳ್ತಿದ್ದಾರೆ. ನಿಮಗೆ ಬೋಡು ತಲೆ ಇದ್ರೆ ಚಿಂತೆ ಬಿಡಿ. ಯಾಕೆಂದ್ರೆ ನಿಮಗಾಗಿಯೋ ವಿಶೇಷ ಫೆಸ್ಟ್‌ವೊಂದನ್ನು ಆಯೋಜಿಸಲಾಗುತ್ತಿದೆ. ಅಮೇರಿಕಾದ ರಾಪರ್ ರಾಮಿ ಈವನ್‌ ಐಶ್ ಬೋಳು ತಲೆಯವರಿಗಾಗಿ ಫ್ಯಾಷನ್ ಉತ್ಸವ ಪ್ರಾರಂಭಿಸಿದೆ.

ರಾಮಿ ಅವರು ನವ ಯಾರ್ಕ್ ಪೋಸ್ಟ್ ಗೆ ಸಂದರ್ಶನ ನೀಡುವ ವೇಳೆಯಲ್ಲಿ ಬಾಲ್ಡ್ ಫೆಸ್ಟ್ ಎಂಬ ಉತ್ಸವ ತಮ್ಮತನವನ್ನು ಆಚರಿಸಿಕೊಳ್ಳಲು ವೇದಿಕೆ ಆಗಲಿದೆ. ತಲೆಗೂದಲು ಕಳೆದುಕೊಳ್ಳುತ್ತಿರುವವರು, ಬೋಡು ತಲೆ ಹೊಂದಿರುವವರು ಈ ಉತ್ಸವದಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ: ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ

ಇದು ಫ್ಯಾಷನ್ ವೀಕ್ ಎಂಬ ಉತ್ಸವಕ್ಕೆ ವಿರೋಧವಾಗಿದ್ದು, ಜನರು ತಮ್ಮಲ್ಲಿ ಇರದುದನ್ನು ಆಚರಿಸಿಕೊಳ್ಳುವ ಉದ್ದೇಶವೇ ಈ ಉತ್ಸವ. ಉತ್ಸವವು ರೂಬುಲಾಡ್ ಕ್ಲಬ್ ನಲ್ಲಿ ನಡೆಯಲಿದ್ದು, ಟಿಕೆಟ್ ಬೆಲೆ 18 ಡಾಲರ್. ಟಿಕೇಟನ್ನು ಆನ್ಲೈನ್ ಅಥವಾ ಕ್ಲಬ್ ನಲ್ಲಿ ಪಡೆಯಬಹುದಾಗಿದೆ.

ಇದರಲ್ಲಿ ಪ್ರೇರಣೆ ನೀಡುವ ಮಾತುಗಾರರು ಮಾತ್ರವಲ್ಲ, ಮನರಂಜನೆಯಿಂದ ಕೂಡಿದ ಕಾರ್ಯಕ್ರಮ ಇದಾಗಲಿದೆ. ಬೋಡು ತಲೆಯವರನ್ನು ಒಂದೆಡೆ ಸೇರಿಸಿ, ಒಳ್ಳೆ ರೀತಿಯಲ್ಲಿ ಆಚರಿಸಲಾಗುತ್ತದೆ. ಬೋಡು ತಲೆಯ ಭಯ ಹೋಗಬೇಕಿದೆ.

ಇದನ್ನೂ ಓದಿ: ಅವಳಿ ಆನೆಮರಿಗಳಿಗೆ ಜನ್ಮ ನೀಡಿದ ಶ್ರೀಲಂಕಾದ ಸುರಂಗಿ

ಅಮೇರಿಕಾದಲ್ಲಿ ಬೋಡು ತಲೆಯ ಡಾಟಾ ಭಯ ತರಿಸುತ್ತದೆ ಎಂಬ ಅಭಿಪ್ರಾಯ ಆಯೋಜಕದ್ದು. ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಅಧ್ಯಯನದ ಪ್ರಕಾರ ಅಮೇರಿಕ ದೇಶದಲ್ಲಿ 50 ಮಿಲಿಯನ್ ಪುರುಷರು ಮತ್ತು 30 ಮಿಲಿಯನ್ ಮಹಿಳೆಯರು ಬೋಡಾಗಿದ್ದು ಅಥವಾ ಬೋಡಾಗುವ ಭೀತಿಯಲ್ಲಿದ್ದಾರೆ

(Only those with bald heads are allowed to be bald fest)

Comments are closed.