Saudi Arabia: ಸೌದಿಯಲ್ಲಿ ತಗ್ಗಿದ ಕೋವಿಡ್ ಅಬ್ಬರ : 24 ಗಂಟೆಯಲ್ಲಿ ಕೇವಲ 69 ಕೋವಿಡ್‌ ಪ್ರಕರಣಗಳು

ರಿಯಾದ್ : ಅರಬ್‌ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಇಳಿಕೆಯನ್ನು ಕಾಣುತ್ತಿದೆ. ಅದರಲ್ಲೂ ಸೌದಿ ಅರೇಬಿಯಾದಲ್ಲಿ ಕಳೆದ 24 ಗಂಟೆಯಲ್ಲಿ ಕೇವಲ 69 ಕೋವಿಡ್‌ ಪ್ರಕರಣಗಳು ದಾಖಲಾಗಿದೆ ಎಂದು ಸೌರಿ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೌದಿ ಅರೇಬಿಯಾದಲ್ಲಿ ಇದುವರೆಗೆ ಒಟ್ಟು 5,46,681 ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು, ಅಲ್ಲದೇ 5,35,650 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 8,671 ಜನರನ್ನು ಕೋವಿಡ್‌ ಹೆಮ್ಮಾರಿ ಬಲಿ ಪಡೆದಿದೆ. ಸದ್ಯ 2,359 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಈ ಪೈಕಿ 317 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದೆ.

ಸೌದಿ ಅರೇಬಿಯಾದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ. 98ರಷ್ಟಿದ್ದು, ಮರಣ ಪ್ರಮಾಣ 1.6 ರಷ್ಟಿದೆ. ಜನಸಂಖ್ಯೆಯನ್ನು ಹೊಂದಿದೆ. ಇದುವರೆಗೆ ಒಟ್ಟು 4,10,33,322 ಕೋವಿಡ್ ವಾಕ್ಸಿನ್ ಸೌದಿ ಅರೇಬಿಯಾದಲ್ಲಿ ಪೂರೈಕೆ ಮಾಡಲಾಗಿದೆ. ಅಲ್ಲದೇ ಕಳೆದ 24 ಗಂಟೆಗಳ ಅವಧಿಯಲ್ಲಿ 55,495 ಆರ್‌ಟಿ ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಅಂಡರ್‌ವೇರ್‌ ಜೇಬಿನಲ್ಲಿತ್ತು 9 ಕೆಜಿ ಚಿನ್ನ ! ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದ ಪೊಲೀಸರು

ಇದನ್ನೂ ಓದಿ :  ಉಚಿತವಾಗಿ ಕುಟುಂಬ ಸ್ನೇಹಿತರ ಜೊತೆಗೆ ಅಬುದಾಬಿಗೆ ತೆರಳಲು ಇಲ್ಲಿದೆ ಸುವರ್ಣಾವಕಾಶ

(Reduced Covid infection in Saudi, 69 covid cases found in 24 hours )

Comments are closed.