Kiss murder : ʼಮುತ್ತುʼ ಕೊಡಲು ಒಪ್ಪದ ಹುಡುಗನನ್ನು ಗುಂಡಿಟ್ಟು ಕೊಂದ ಮಹಿಳೆ

ಸಾಮಾನ್ಯವಾಗಿ ಹುಡುಗರು ಹುಡಿಗಿಯರ ಬಳಿ ಮುತ್ತು ಕೇಳಿ ಹೋಡೆಸಿಕೊಂಡ ಹಲವಾರು ಪ್ರಕರಣವನ್ನು ಕೇಳಿರುತ್ತೀರಿ. ಆದರೆ ಇಲ್ಲೊಬ್ಬಳು ಹುಡುಗಿ ಮುತ್ತುʼ ಕೊಡಲು ಒಪ್ಪದ ಹುಡುಗನನ್ನು ಗುಂಡಿಟ್ಟು ಕೊಂದಿದ್ದಾಳೆ. ರಾತ್ರಿ ಮಧ್ಯಪಾನ ಮಾಡುತಿದ್ದ ಸಮಯದಲ್ಲಿ ತನಗೆ ಮುತ್ತು ಕೊಡೆಂದು ಕೇಳಿದಾಗ ಒಪ್ಪದ ಹುಡುಗನನ್ನು 28 ವರ್ಷ ವಯಸ್ಸಿನ ಮಹಿಳೆ ಗುಂಡಿಟ್ಟು ಕೊಂದ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದ ಇಲಿನೋಯಿದಲ್ಲಿ ಕ್ಲಾಡಿಯಾ ರೆಸೆಂಡಿಜ಼್‌-ಫ್ಲೋರೆಸ್ ಹೆಸರಿನ ಈ ಮಹಿಳೆ ತನ್ನ ಇಬ್ಬರು ಗೆಳೆಯರೊಂದಿಗೆ ನೈಟ್‌ಔಟ್‌ ಗೆ ತೆರಳಿದ್ದಾಳೆ. ಆಗ ತಾನೇ ವಾಸಿಸಲು ಬಂದಿದ್ದ ಆಪಾರ್ಟ್ಮೆಂಟ್‌ನಲ್ಲಿದ್ದ ಜೋಡಿ ಈಕೆಯೊಂದಿಗೆ ಪಾರ್ಟಿ ಮಾಡಲು ಮುಂದೆ ಬಂದಿದೆ. ಈ ವೇಳೆ ಆ ಜೇಮ್ಸ್ ಜೋನ್ಸ್‌ಗೆ, ತನಗೊಂದು ಮುತ್ತು ನೀಡೆಂದು ರೆಸೆಂಡಿಜ಼್‌ ಕೇಳಿಕೊಂಡಿದ್ದಾಳೆ.

ಇದನ್ನೂ ಓದಿ: Online Class : ಪೋಷಕರೇ ಎಚ್ಚರ ! ಆನ್ ಲೈನ್ ಕ್ಲಾಸ್ ಗಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನಾ ಹುಷಾರ್

ಇದಕ್ಕೆ ಒಲ್ಲೆನೆಂದ ಜೇಮ್ಸ್‌ ತನ್ನ ಗರ್ಲ್‌ಫ್ರೆಂಡ್‌ಗೆ ಮುತ್ತು ಕೊಟ್ಟಿದ್ದಾನೆ. ಇದರಿಂದ ಹೊಟ್ಟೆ ಕಿಚ್ಚಿಗೆ ಬಿದ್ದ ರೆಸೆಂಡಿಜ಼್‌ ಆಕ್ರಮಣಶೀಲಳಾಗಿ ಮುತ್ತು ನೀಡಲು ಜೇಮ್ಸ್‌ನನ್ನು ಮತ್ತೊಮ್ಮೆ ಕೇಳಿದ್ದಾಳೆ. ಇದಕ್ಕೆ ಜೋನ್ಸ್ ಮತ್ತೊಮ್ಮೆ ಒಲ್ಲೆನೆಂದ ಕೂಡಲೇ ಕೌಚ್‌ ಕುಶನ್‌ಗಳ ನಡುವೆ ಇದ್ದ ಆತನ ಪಿಸ್ತೂಲ್ ಪಡೆದುಕೊಂಡು ಆತನಿಗೇ ಗುರಿಯಿಟ್ಟು ಶೂಟ್ ಮಾಡಿದ್ದಾಳೆ.

ರೆಸೆಂಡಿಜ಼್‌ ಶೂಟ್ ಮಾಡಿದ ಕೂಡಲೇ ಜೇಮ್ಸ್‌ ಗರ್ಲ್‌ಫ್ರೆಂಡ್ 911 ಸಹಾಯವಾಣಿಗೆ ಕರೆ ಮಾಡುತ್ತಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರೆಸೆಂಡೆಜ಼್‌ಳನ್ನು ಬಂಧಿಸಿದ್ದಾರೆ. ಆದರೆ ಅಷ್ಟರಲ್ಲಿ ಜೇಮ್ಸ್‌ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ಲೈಂಗಿಕ ಸಂಭೋಗದ ವೇಳೆ ಕಾಂಡೋಮ್ ತೆಗೆಯುವುದು ಅಪರಾಧ !

(Woman shot dead boy who refused to give ʼKissʼ)

Comments are closed.