WWE Wrestler Sara Lee Dies : ಸೂಪರ್‌ ಸ್ಟಾರ್‌ ಸಾರಾ ಲೀ ನಿಧನ : ಬೆಚ್ಚಿಬಿತ್ತು ಕುಸ್ತಿ ಜಗತ್ತು

ವಾಷಿಂಗ್ಟನ್‌ : ( WWE Wrestler Sara Lee Dies ) ಮಾಜಿ ವಿಶ್ವಕುಸ್ತಿ ಪಟು. ಸಾರಾ ಲೀ ಬಾರದ ಲೋಕಕ್ಕೆ ಪಯಣಿಸಿದ್ದಾರೆ.ಕೇವಲ 30 ವರ್ಷಕ್ಕೆ ಸಾರಾ ಲೀ ಬದುಕಿನ ಪಯಣ ಮುಗಿಸಿದ್ದಾರೆ. ಸಾರಾ ಲೀ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಕುಸ್ತಿ ಜಗತ್ತು ಬೆಚ್ಚಿ ಬಿದ್ದಿದೆ. 2015ರ ವರ್ಲ್ಡ್‌ ವ್ರೆಸ್ಲಿಂಗ್‌ ಎಂಟರ್‌ಟೈನ್ ಮೆಂಟ್‌ (WWE)ಸೂಪರ್‌ ಸ್ಟಾರ್‌ ಆಗಿ ಹೊರ ಹೊಮ್ಮಿದ್ದರು.

ಸಾರಾ ಲೀ ಅವರ ಸಾವಿ( WWE Wrestler Sara Lee Dies ) ನ ಸುದ್ದಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.2017 ರಿಂದ ಡಬ್ಲ್ಯೂ ಡಬ್ಲ್ಯೂಇ ಇಂದ ಹೊರಬಂದ ಸಾರಾ ಲೀ , 2015 ಮತ್ತು 2017 ರ ಸಾಲಿನಲ್ಲಿ WWE ವ್ರೆಸ್ಲಿಂಗ್‌ ನಲ್ಲಿ ಮಿಂಚು ಹರಿಸಿದ್ದರು. 2015 ರ ವರ್ಲ್ಡ್‌ ವ್ರೆಸ್ಲಿಂಗ್‌ ಎಂಟರ್‌ ಟಥನ್‌ ಮೆಂಟ್‌ ನಲ್ಲಿ ವಿನ್ನರ್‌ ಆಗಿದ್ದ ಸಾರಾ ಲೀ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Jabbar Khan Honnalli : ಮಾಜಿ ಸಿಎಂ SM ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದ ಜಬ್ಬಾರ್‌ ಖಾನ್‌ ಹೊನ್ನಳ್ಳಿ ನಿಧನ

ಇದನ್ನೂ ಓದಿ : Assembly Election 2022 : ಕಾಂಗ್ರೆಸ್ ಎದುರಿಸೋದ್ರಲ್ಲಿ ಎಡವಿದ್ಯಾ ಸರ್ಕಾರ: ಕಾರ್ಯಕಾರಿಣಿ ಯಲ್ಲಿ ಮಹತ್ವದ ಚರ್ಚೆ‌

ಇದನ್ನೂ ಓದಿ : World’s Most Expensive Sheep Sold : ಅಬ್ಬಬ್ಬಾ.. ಬರೋಬ್ಬರಿ 2 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ ಈ ಕುರಿ

ನಿಗೂಢವಾಗಿ ಸಾವನ್ನಪ್ಪಿರುವ ಸಾರಾ ಲೀ ಸಾವಿನ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಡಬ್ಲ್ಯೂ ಡಬ್ಲ್ಯೂಇ ನಿವ್ರತ್ತಿಯ ನಂತರ ಸಾರಾ ಲೀ ಮೂಗಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದೀಗ ಸಾರಾ ಲೀ ಸಾವಿನ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಸಾರಾ ಲೀ ಅವರು ವ್ರೆಸ್ಲಿಂಗ್‌ ತಾರೆ ವೆಸ್ಟಿನ್‌ ಬ್ಲೇಕ್‌ ಅವರನ್ನು ವಿವಾಹವಾಗಿದ್ದರು . ಸಾರಾ ಲೀ ದಂಪತಿಗಳಿಗೆ ಮೂವರು ಮಕ್ಕಳಿದ್ದು , ಇದೀಗ ಮೂವರು ಮಕ್ಕಳು ತಾಯಿಯನ್ನು ಅಗಲಿದ್ದಾರೆ. ಸಾರಾ ಲೀ ಸಾವಿನ ಸುದ್ಧಿಯನ್ನು ತಿಳಿದ ಡಬ್ಲ್ಯೂ ಡಬ್ಲ್ಯೂಇ ಸಂಯೋಜಕರು ಹಾಗೂ ಗಣ್ಯರು ಆಕೆಯ ಸಾವಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

(WWE Wrestler Sara Lee Dies) Former world wrestler. Sara Lee has traveled to the world. At only 30 years old, Sara Lee has completed the journey of her life. The wrestling world is shocked to hear the news of Sara Lee’s death. He emerged as the World Wrestling Entertainment (WWE) Superstar of 2015.

Comments are closed.