Pramod Muthalik contest in Udupi : ಯುಪಿ‌ ಮಾದರಿ ಆಡಳಿತ; ಉಡುಪಿಯಿಂದ ಚುನಾವಣಾ ಕಣಕ್ಕೆ ಪ್ರಮೋದ್ ಮುತಾಲಿಕ್ ?

ಉಡುಪಿ : Pramod Muthalik contest in Udupi : ರಾಜ್ಯದಲ್ಲಿ ಕಟ್ಟಾ ಹಿಂದುತ್ವವಾದಿಯಾಗಿ ಹಿಂದೂಪರ ಹೋರಾಟಗಳ ಮೂಲಕವೇ ಗುರುತಿಸಿಕೊಂಡ ಶ್ರೀರಾಮಸೇನೆ ಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ‌. ಇದಕ್ಕೆ ಪೂರಕ ಎಂಬಂತೆ ಪ್ರಮೋದ್ ಮುತಾಲಿಕ ಸದ್ಯ ಉಡುಪಿ ಪ್ರವಾಸದಲ್ಲಿದ್ದು, ಚುನಾವಣೆಗೆ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಆ ಮೂಲಕ ತಮಗೂ ರಾಜಕೀಯದಲ್ಲಿ ಆಸಕ್ತಿ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸದ್ಯ ಉಡುಪಿ ಪ್ರವಾಸದಲ್ಲಿರೋ ಪ್ರಮೋದ್ ಮುತಾಲಿಕ್ ತಮ್ಮ ರಾಜಕೀಯ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಉಡುಪಿ ಭಾಗದ ಕಾರ್ಯಕರ್ತರು ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡ್ತಿದ್ದಾರೆ. ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿ ಹಿಂದುತ್ವಕ್ಕೆ ರಕ್ಷಣೆ ಬೇಕು. ಆ ಕಾರಣಕ್ಕೆ ನೀವು ಚುನಾವಣೆಗೆ ಸ್ಪರ್ಧಿಸಿ ಎನ್ನುತ್ತಿದ್ದಾರೆ. ನಾನು ಇದುವರೆಗೂ ಈ ಬಗ್ಗೆ ಏನು ಯೋಚನೆ ಮಾಡಿರಲಿಲ್ಲ. ಈಗ ಕಾರ್ಯಕರ್ತರ ಒತ್ತಾಯದಿಂದ ಖುಷಿಯಾಗುತ್ತಿದೆ.

ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಮಾದರಿಯ ಆಡಳಿತ ಬೇಕೆಂಬ ಕಾರಣಕ್ಕೆ ಒತ್ತಡ ವ್ಯಕ್ತವಾಗುತ್ತಿದೆ. ಪ್ರಬಲ ಹಿಂದೂತ್ವಕ್ಕಾಗಿ ನೀವು ಸ್ಪರ್ಧಿಸಿ. ನಮಗೊಬ್ಬ ಕಟ್ಟಾ ಹಿಂದುತ್ವವಾದಿ ನಾಯಕ ಬೇಕೆಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಯೋಚಿಸುತ್ತಿದ್ದೇನೆ ಎನ್ನುವ ಮೂಲಕ ಪ್ರಮೋದ್‌ ಮುತಾಲಿಕ್ ಚುನಾವಣೆ ಗೆ ಸ್ಪರ್ಧಿಸುವ ಮುನ್ಸೂಚನೆ ನೀಡಿದ್ದಾರೆ.

ಅದರಲ್ಲೂ ಪ್ರಸ್ತುತ ಕಟ್ಟಾ ಹಿಂದುತ್ವವಾದ ಹಾಗೂ ಬಿಜೆಪಿಯ ಗಟ್ಟಿ ನೆಲೆ ಎನ್ನಿಸಿರುವ ಉಡುಪಿ,‌ಮಂಗಳೂರು ಭಾಗದಿಂದಲೇ ಪ್ರಮೋದ್‌ ಮುತಾಲಿಕ್ ವಿಧಾನಸಭೆ ಪ್ರವೇಶಿಸುವ ಚಿಂತನೆಯಲ್ಲಿದ್ದಾರೆ. ನಮ್ಮ ಜಿಲ್ಲೆಯ ನಾಯಕರು ನಮ್ಮ ಭಾವನೆಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಉಡುಪಿ ಭಾಗದ ಬಿಜೆಪಿ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ಬಳಿ ಆಕ್ರೋಶ ತೋಡಿಕೊಂಡಿದ್ದಾರಂತೆ. ಹೀಗಾಗಿ ಪ್ರಮೋದ್ ಮುತಾಲಿಕ್ ಮತ್ತೊಮ್ಮೆ ಚುನಾವಣಾ ರಾಜಕೀಯದತ್ತ ಮುಖಮಾಡಲು ಸಿದ್ಧವಾಗುತ್ತಿದ್ದಾರೆ.

ಎಲ್ಲ ಪ್ರಮೋದ್ ಮುತಾಲಿಕ್ ಲೆಕ್ಕಾಚಾರದಂತೆ ಆಗಿದ್ದರೇ ಇಷ್ಟರಲ್ಲಾಗಲೇ ಪ್ರಮೋದ್ ಮುತಾಲಿಕ್ ಲೋಕಸಭೆಯಲ್ಲಿ ಕುಳಿತಿರಬೇಕಿತ್ತು. ಆದರೆ ಬಿಜೆಪಿ ಪ್ರಮೋದ್ ಮುತಾಲಿಕ್ ಬೇಡಿಕೆಗೆ ಬೆಲೆ ಕೊಡಲಿಲ್ಲ.ಹೀಗಾಗಿ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ಮುನಿಸಿಕೊಂಡು,ಆಗಾಗ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.ಬೆಳಗಾವಿ ಸಂಸದ ಹಾಗೂ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾದಾಗ ಕ್ಷೇತ್ರದ ಮೇಲೆ ಪ್ರಮೋದ್ ಮುತಾಲಿಕ್ ಕಣ್ಣೀಟ್ಟಿದ್ದರು.

ಅಲ್ಲದೇ ಬಿಜೆಪಿಯಿಂದ ಟಿಕೆಟ್ ಕೂಡ ಕೇಳಿದ್ದರು. ಸ್ವತಃ ತಾವೇ ಬಿಜೆಪಿಯ ಎಲ್ಲ ನಾಯಕರನ್ನು ಭೇಟಿ ಮಾಡಿ ತಮಗೊಂದು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅನುಕಂಪದ ಮತಗಳ ಮೇಲೆ ಕಣ್ಣಿಟ್ಟು ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿಯವರಿಗೆ ಟಿಕೇಟ್ ನೀಡಿತ್ತು. ಇದಾದ ಬಳಿಕ ಪ್ರಮೋದ್ ಮುತಾಲಿಕ್ ಮೌನವಾಗಿದ್ದರು. ಆದರೆ ಈಗ ಮತ್ತೊಮ್ಮೆ ಮತಕ್ಷೇತ್ರಕ್ಕೆ ಧುಮುಕಲು ಸಿದ್ಧವಾಗಿದ್ದು, ಮುತಾಲಿಕ್ ಬಿಜೆಪಿಯಿಂದ ಸ್ಪರ್ಧಿಸುತ್ತಾರಾ ಅಥವಾ ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರಾ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ : Bharat Jodo Yatra : ಮರಿ ಆನೆಗಾಗಿ ಮಿಡಿದ ರಾಹುಲ್ ಗಾಂಧಿ: ಚಿಕಿತ್ಸೆ ಕೊಡಿಸುವಂತೆ ಸಿಎಂ ಗೆ ಪತ್ರ

ಇದನ್ನೂ ಓದಿ : Assembly Election 2022 : ಕಾಂಗ್ರೆಸ್ ಎದುರಿಸೋದ್ರಲ್ಲಿ ಎಡವಿದ್ಯಾ ಸರ್ಕಾರ: ಕಾರ್ಯಕಾರಿಣಿ ಯಲ್ಲಿ ಮಹತ್ವದ ಚರ್ಚೆ‌

Assembly Election 2023: Pramod Muthalik contest in Udupi from this Constituency

Comments are closed.