ಯುವ ವೃತ್ತಿಪರರಿಗೆ ಹೊಸ ಅವಕಾಶ ದೊರೆಯಲಿದೆ. ಭಾರತ ಮತ್ತು ಬ್ರಿಟನ್ ಯುವ ವೃತ್ತಿಪರರಿಗಾಗಿ ಯೋಜನೆಯೊಂದನ್ನು ಪ್ರಾರಂಭಿಸಲು ಸಿದ್ಧವಾಗಿದೆ. 18 ರಿಂದ 30 ವರ್ಷದ ಒಳಗಿನ ಭಾರತೀಯ ಪ್ರಜೆಗಳಿಗೆ ಬ್ರಿಟನ್‌ನಲ್ಲಿ ಎರಡು ವರ್ಷಗಳವರೆಗೆ ಅಧ್ಯಯನ ಮತ್ತು ಕೆಲಸ ಮಾಡುವ ಸಲುವಾಗಿ ಈ ಯೋಜನೆಯನ್ನು ಪ್ರಾರಂಭಿಸಲು ಮುಂದಾಗಿದೆ. ಈ ಯೋಜನೆಯು (Young Professionals Scheme) ಅಭ್ಯರ್ಥಿಗಳಿಗೆ ವಾಸ ಮತ್ತು ಕೆಲಸ ಮಾಡಲು ಅನುವು ಮಾಡಿಕೊಡಲಿದೆ. ದೆಹಲಿಯಲ್ಲಿ ನಡೆದ 15ನೇ ಭಾರತ–ಯುಕೆ ವಿದೇಶಾಂಗ ಕಚೇರಿ ಸಮಾಲೋಚನೆ (India-UK Foreign Office Consultation(FOC)) ಯಲ್ಲಿ ಈ ವಿಷಯವನ್ನು ಚರ್ಚಿಸಿದೆ. ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs (MEA)) ಹೊರಡಿಸಿದ ಹೇಳಿಕೆ ಪ್ರಕಾರ ಈ ಯೋಜನೆಯನ್ನು ಫೆಬ್ರವರಿ 28ರಂದು ಪ್ರಾರಂಭಿಸಲಾಗುವುದು.
ಹೈಕಮೀಷನರ್ ವಿಕ್ರಮ್ ದೊರೈಸ್ವಾಮಿ ಅವರ ಪ್ರಕಾರ, ಈ ಯೋಜನೆಯು 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಮಾರ್ಚ್ 2023 ರಿಂದ ಜಾರಿಗೆ ಬರಲಿದೆ. ಭಾರತ ಮತ್ತು ಬ್ರಿಟನ್‌ನ ನಾಗರಿಕರು ಎರಡು ವರ್ಷಗಳವರೆಗೆ ಭೇಟಿ ನೀಡಲು, ಅಧ್ಯಯನ ಮಾಡಲು ಅಥವಾ ಕೆಲಸ ಮಾಡಲು ಈ ಎರಡೂ ದೇಶಕ್ಕೆ ಪ್ರಯಾಣಿಸಬಹುದು. ಎರಡೂ ದೇಶಗಳು 3,000 ಅಭ್ಯರ್ಥಿಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಇದರ ಸಲುವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಉದ್ಯೋಗಾವಕಾಶದ ಅಗತ್ಯವಿಲ್ಲ ಎಂದು ವಿಕ್ರಮ್ ದೊರೈಸ್ವಾಮಿ ಹೇಳಿದ್ದಾರೆ.
ಭಾರತ–ಯುಕೆ ನಡುವಿನ ಯುವ ವೃತಿಪರರ ಯೋಜನೆ (Young Professionals Scheme) ಪ್ರಮುಖ ಅಂಶಗಳು :
- ಈ ಯೋಜನೆಯು ಭಾರತದ 18 ರಿಂದ 30 ವರ್ಷದ ಒಳಗಿನ 3,000 ಡಿಗ್ರಿ–ಹೋಲ್ಡರ್‌ಗಳು ಎರಡು ವರ್ಷಗಳ ಕಾಲ ಯುಕೆಯಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.
- ಯೋಜನೆಗೆ 18-30 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು.
- ಈ ಯೋಜನಾ ಕಾರ್ಯಕ್ರಮವು ಪರಸ್ಪರರದ್ದಾಗಿರುತ್ತದೆ. ಭಾರತೀಯರ ರೀತಿಯಲ್ಲೇ ಯುಕೆ ವೃತ್ತಿಪರರು ಸಹ ಭಾರತದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಮೂಲಕ ವೃತ್ತಿಪರ ವಿನಿಮಯದಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ.
- ಈ ಯೋಜನೆಯು ಮಾರ್ಚ್ 2023 ರಲ್ಲಿ ಪ್ರಾರಂಭವಾಗಲಿದೆ.
- ವೀಸಾಗೆ ಅರ್ಜಿ ಸಲ್ಲಿಸಲು ಜಾಬ್ ಆಫರ್‌ನ ಅಗತ್ಯವಿರುವುದಿಲ್ಲ.
ಇದನ್ನೂ ಓದಿ : SBI WhatsApp Banking : ನೀವು ಎಸ್‌ಬಿಐ ಗ್ರಾಹಕರೇ ? ಹಾಗಿದ್ದರೆ ನಿಮಗೆ ಸಿಗಲಿದೆ 9 ಉಚಿತ ಸೇವೆ
ಇದನ್ನೂ ಓದಿ : Kerala Mask mandatory: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ : ಕೇರಳದಲ್ಲಿ ಜಾರಿಯಾಯ್ತು ಕಠಿಣ ಮಾರ್ಗಸೂಚಿ
(Young Professionals Scheme live and work in UK for 2 years)