India No1 in ODI: ಕಿವೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಟೀಮ್ ಇಂಡಿಯಾ ವರ್ಲ್ಡ್ ನಂ.1

ಹೈದರಾಬಾದ್: India No1 in ODI : ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ (India Vs New Zealand ODI series) ನಾಳೆ (ಬುಧವಾರ, ಜನವರಿ 18) ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. 2 ಹಾಗೂ 3ನೇ ಪಂದ್ಯಗಳು ಜನವರಿ 21ರಂದು ರಾಯ್ಪುರ ಹಾಗೂ ಜನವರಿ 24ರಂದು ಇಂದೋರ್’ನಲ್ಲಿ ನಡೆಯಲಿವೆ.

ಕಿವೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದರೆ ಐಸಿಸಿ ಏಕದಿನ rankingನಲ್ಲಿ ನಂ.1 ಸ್ಥಾನಕ್ಕೇರಲಿದೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಸದ್ಯ ಐಸಿಸಿ rankingನಲ್ಲಿ 110 ರೇಟಿಂಗ್ ಪಾಯಿಂಟ್’ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ವಿಶ್ವಚಾಂಪಿಯನ್ ಇಂಗ್ಲೆಂಡ್(113) ಮತ್ತು ಆಸ್ಟ್ರೇಲಿಯಾ (112) ಮೊದಲೆರಡು ಸ್ಥಾನಗಳಲ್ಲಿವೆ.

India No1 in ODI : ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳಾಪಟ್ಟಿ

ಮೊದಲ ಏಕದಿನ: ಜನವರಿ 18 (ಹೈದರಾಬಾದ್)
2ನೇ ಏಕದಿನ: ಜನವರಿ 21 (ರಾಯ್ಪುರ)
3ನೇ ಏಕದಿನ: ಜನವರಿ 24 (ಇಂದೋರ್)

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ವೇಳಾಪಟ್ಟಿ

ಮೊದಲ ಟಿ20: ಜನವರಿ 27 (ರಾಂಚಿ)
2ನೇ ಟಿ20: ಜನವರಿ 29 (ಲಕ್ನೋ)
3ನೇ ಟಿ20: ಫೆಬ್ರವರಿ 01 (ಅಹ್ಮದಾಬಾದ್)

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ (India’s ODI squad against New Zealand)

ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ಉಪನಾಯಕ), ಸೂರ್ಯಕುಮಾರ್ ಯಾದವ್, ಕೆ.ಎಸ್ ಭರತ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ (India’s T20I squad against New Zealand):
ಹಾರ್ದಿಕ್ ಪಾಂಡ್ಯ(ನಾಯಕ), ಸೂರ್ಯಕುಮಾರ್ ಯಾದವ್(ಉಪನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಪೃಥ್ವಿ ಶಾ, ಮುಕೇಶ್ ಕುಮಾರ್.

ಇದನ್ನೂ ಓದಿ : KL Rahul flies to Mumbai : ಮದುವೆ ತಯಾರಿಗೆ ಕೇರಳದಿಂದ ಮುಂಬೈಗೆ ಹಾರಿದ ರಾಹುಲ್, ಮುಂದಿನ ಸೋಮವಾರ ಪೀ ಪೀ ಡುಂ ಡುಂ

ಇದನ್ನೂ ಓದಿ : ಭಾರತೀಯ ಕ್ರಿಕೆಟಿಗರ ಪುತ್ರಿಯರ ಬಗ್ಗೆ ಅಶ್ಲೀಲ ಕಾಮೆಂಟ್‌ : ಆರೋಪಿಗಳ ಮೇಲೆ ಎಫ್‌ಐಆರ್‌ ದಾಖಲಿಸಿದ ದೆಹಲಿ ಪೋಲಿಸರು

India No1 in ODI after win after New Zealand series India ODI and India t20 squad

Comments are closed.