ಪಿಎಂ ಕಿಸಾನ್‌ ಯೋಜನೆಯ 4 ನಿಯಮಗಳಲ್ಲಿ ಬದಲಾವಣೆ : ಶೀಘ್ರದಲ್ಲೇ ಕೈ ಸೇರಲಿದೆ 13 ನೇ ಕಂತಿನ ಹಣ

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (pm kisan samman nidhi) 13 ನೇ ಕಂತಿಗಾಗಿ ದೇಶದಾದ್ಯಂತ ಕೋಟಿಗಟ್ಟಲೆ ರೈತರು ಕೆಲವು ತಿಂಗಳುಗಳಿಂದ ಕಾಯುತ್ತಿದ್ದಾರೆ. ಈ ಸರಕಾರಿ ಯೋಜನೆಗೆ ನೀವು ಸಹ ಅರ್ಜಿ ಸಲ್ಲಿಸಿದ್ದರೆ, ಈ ತಿಂಗಳಲ್ಲೇ ನಿಮ್ಮ ಖಾತೆಗೆ ಹಣ (PM Kisan Scheme 13th Installment) ಬರಲಿದೆ. ಆದರೆ ಅದಕ್ಕೂ ಮೊದಲು ಕೃಷಿ ಸಚಿವಾಲಯವು ಈ ಯೋಜನೆಯಲ್ಲಿ ಕೆಲವು ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಹೀಗಾಗಿ ಈ ಯೋಜನೆಯ ಫಲಾನುಭಾವಿಗಳು ತಪ್ಪದೇ ಈ ನಿಯಮಗಳ ಬದಲಾವಣೆಗಳನ್ನು ಪಾಲಿಸಬೇಕಾಗಿದೆ.

ಸರಕಾರ ಹೊರಡಿಸಿದ ಸೂಚನೆಗಳ ವಿವರ :
ಯುಪಿ ಸರಕಾರ ನೀಡಿದ ಮಾಹಿತಿಯ ಪ್ರಕಾರ, ಪಿಎಂ ಕಿಸಾನ್‌ನ 13 ನೇ ಕಂತಿನ ಹಣವನ್ನು ಕೆಲವೇ ಫಲಾನುಭವಿಗಳು ಪಡೆಯುತ್ತಾರೆ. ಈ 4 ನಿಯಮಗಳನ್ನು ಯಾವ ರೈತರಿ ಪೂರೈಸುತ್ತಾರೋ ಅವರ ಖಾತೆಗೆ ಮಾತ್ರ ಹಣ ಬರುತ್ತದೆ ಎಂದು ಯುಪಿ ಸರಕಾರ ಹೇಳಿದೆ.

ಕಿಸಾನ್‌ ಯೋಜನೆಯ ಬದಲಾವಣೆಯಾದ 4 ನಿಯಮಗಳ ವಿವರ :

  • ರೈತನ ಭೂ ದಾಖಲೆಯಲ್ಲಿ ರೈತನೇ ಆ ಭೂಮಿಯ ಮಾಲೀಕ ಎಂದಿರಬೇಕು.
  • ಇದರ ಹೊರತಾಗಿ, ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಪೂರ್ಣಗೊಳಿಸಿರಬೇಕು.
  • ಇದಲ್ಲದೇ ರೈತರ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಆಧಾರ್‌ಗೆ ಲಿಂಕ್ ಮಾಡಿರಬೇಕು.
  • ಬ್ಯಾಂಕ್ ಖಾತೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಗೆ ಲಿಂಕ್ ಮಾಡಿರಬೇಕು.

ಯಾವುದೇ ರೈತರು ಈ ನಾಲ್ಕು ನಿಯಮಗಳನ್ನು ಪೂರೈಸಿದರೆ ಮಾತ್ರ ಅವರು ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು. ಇದಲ್ಲದೇ ವಿವರ ಪೂರ್ಣಗೊಳ್ಳದ ರೈತರ ಖಾತೆಗೆ ಹಣ ಬರುವುದಿಲ್ಲ. ಪಿಎಂ ಕಿಸಾನ್ ಯೋಜನೆಯ 11 ನೇ ಕಂತಾಗಿ ಸುಮಾರು 22,552 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇದೇ ವೇಳೆ ಸರಕಾರ 12ನೇ ಕಂತಾಗಿ 17,443 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಫಲಾನುಭವಿಗಳ ಸಂಖ್ಯೆಯಲ್ಲಿ ಸಾಕಷ್ಟು ಕುಸಿತ ಕಂಡುಬಂದಿದೆ. ಜನವರಿ 30 ರೊಳಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲಾ ಅರ್ಹ ರೈತರಿಗೆ 13 ನೇ ಕಂತಿನ ಪ್ರಯೋಜನವನ್ನು ಪಡೆಯುವಂತೆ ನೋಡಿಕೊಳ್ಳುತ್ತಿದೆ.

ಇದನ್ನೂ ಓದಿ : Arecanut Price Increase : ಮತ್ತೆ ಮಾರುಕಟ್ಟೆಯಲ್ಲಿ ಏರಿಕೆ ಕಂಡ ಅಡಿಕೆ ಬೆಲೆ : ಎಲ್ಲೆಲ್ಲಿ ಎಷ್ಟೆಷ್ಟು ಏರಿಕೆ ?

ಇದನ್ನೂ ಓದಿ : Tomato Price Down : 25 ಕೆ.ಜಿ ಟೊಮೊಟೊಗೆ ಕೇವಲ ರೂ.70

ಇದನ್ನೂ ಓದಿ : 13th installment of PM Kisan : ರೈತರಿಗೆ ಗುಡ್ ನ್ಯೂಸ್‌ : ಖಾತೆಗೆ ಜಮಾ ಆಗಲಿದೆ ಪಿಎಂ ಕಿಸಾನ್‌ ಯೋಜನೆಯ 13ನೇ ಕಂತು

ಪಿಎಂ ಕಿಸಾನ್ ಗೆ ಸಂಬಂಧಿಸಿದ ದೂರು ಇಲ್ಲಿ ಸಲ್ಲಿಸಿ :
ಈ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ನೀವು ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ ಈ ಸಂಖ್ಯೆ 011-23381092 ಅನ್ನು ಸಂಪರ್ಕಿಸಬಹುದು. ಇದಲ್ಲದೆ [email protected] ಇಮೇಲ್ ಐಡಿಗೆ ಮೇಲ್ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ನೀವು ತಿಳಿಸಬಹುದು.

PM Kisan Scheme 13th Installment: Change in 4 rules of PM Kisan Scheme: 13th installment money will be received soon

Comments are closed.