Zombie Virus: ಜಗತ್ತಿಗೆ ಹೊಸ ಕಂಟಕ: ರಷ್ಯಾದಲ್ಲಿ ಮಂಜುಗಡ್ಡೆಯಲ್ಲಿ ಹೂತಿದ್ದ 48,500 ವರ್ಷಗಳಷ್ಟು ಹಳೆಯ ವೈರಸ್ ಗೆ ಪುನರ್ಜನ್ಮ

ರಷ್ಯಾ: ರಷ್ಯಾದಲ್ಲಿ ಹೆಪ್ಪುಗಟ್ಟಿದ್ದ ಸರೋವರದ ಅಡಿಯಲ್ಲಿ ಹೂತುಹೋಗಿದ್ದ ಬರೋಬ್ಬರಿ 48,500 ವರ್ಷಗಳಷ್ಟು ಹಳೆಯದು ಎನ್ನಲಾದ ಜೋಂಬಿ ವೈರಸ್ (Zombie Virus) ಪುನರ್ಜನ್ಮ ತಾಳಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಫ್ರೆಂಚ್ ವಿಜ್ಞಾನಿಗಳು ಜೋಂಬಿ ವೈರಸ್ ಗೆ ಮರುಜೀವ ನೀಡಿದ್ದು, ಈ ವೈರಸ್ ಇಡೀ ವಿಶ್ವಕ್ಕೆ ಕಂಟಕ ತಂದಿಡುವ ಆತಂಕ ಎದುರಾಗಿದೆ.

ಜೋಂಬಿ ವೈರಸ್ ಗಳು ಎಂದು ಕರೆಯಲ್ಪಡುವ 13 ಹೊಸ ರೋಗಕಾರಕಗಳನ್ನು ಯುರೋಪಿಯನ್ ಸಂಶೋಧಕರು ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಪುನರುಜ್ಜೀವನಗೊಳಿಸಿದ್ದಾರೆ. ಈ ವೈರಸ್ ಗಳು ಹೆಪ್ಪುಗಟ್ಟಿದ್ದ ನೆಲದಲ್ಲಿ ಸಾವಿರಾರು ವರ್ಷಗಳನ್ನು ಕಳೆದರೂ ಸಾಂಕ್ರಾಮಿಕವಾಗಿಯೇ ಉಳಿದಿವೆ ಅಂದರೆ ಇನ್ನೂ ರೋಗವನ್ನು ಹರಡುವ ಸಾಮಥ್ರ್ಯವನ್ನು ಉಳಿಸಿಕೊಂಡಿವೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಅಪಾಯವನ್ನು ತಂದೊಡ್ಡುವ ಮುನ್ಸೂಚನೆ ಲಭಿಸಿದೆ.

ಇದನ್ನೂ ಓದಿ: ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಈ ವೈರಸ್ ಗಳು ಅಧಿಕ ತಾಪಮಾನದ ಪ್ರದೇಶದಲ್ಲಿ ಎಷ್ಟು ಅವಧಿಯವರೆಗೆ ರೋಗ ಹರಡುವ ಸಾಮಥ್ರ್ಯವನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಸರಿಯಾಗಿ ಅಂದಾಜು ಸಿಕ್ಕಿಲ್ಲ. ಆದರೆ ಜಾಗತಿಕ ತಾಪಮಾನ ಏರಿಕೆ ಆಗುತ್ತಿದ್ದಂತೆ ಹಿಮ ಕರಗಿ ನೀರಿನ ಮೂಲಗಳಲ್ಲಿ ಸೇರ್ಪಡೆ ಆಗುತ್ತಿದಂತೆ ಈ ವೈರಸ್ ಗಳು ಜಾಗೃತವಾಗಬಹುದು. ಅವುಗಳಲ್ಲಿ ಇನ್ನೂ ಸೋಂಕು ಹರಡುವ ಸಾಮಥ್ರ್ಯವಿದೆ. ಹೀಗಾಗಿ ಇದು ಪ್ರಾಣಿಗಳು ಮತ್ತು ಮನುಷ್ಯರಿಗೆ ಅಪಾಯ ತಂದೊಡ್ಡಬಲ್ಲದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸುಮಾರು 48,500 ವರ್ಷಗಳ ಹಿಂದೆ ಸರೋವರದಡಿಯಲ್ಲಿ ಹೂತು ಹೋಗಿದ್ದ ವೈರಸ್ ಇದಾಗಿದೆ. ವಾತಾವರಣದ ತಾಪಮಾನ ಏರಿಕೆಯಿಂದಾಗಿ ಪರ್ಮಾಫ್ರಾಸ್ಟ್ ಕರಗುವಿಕೆಯು ಈ ಹಿಂದೆ ಸಿಕ್ಕಿಬಿದ್ದಿರುವ ಮಿಥೇನ್ ನಂಥ ಹಸಿರುಮನೆ ಅನಿಲಗಳನ್ನು ಮುಕ್ತಗೊಳಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಇನ್ನಷ್ಟು ಹದಗೆಡಿಸುತ್ತಾ ಹೋಗುತ್ತಿವೆ. ಹೀಗಾಗಿಯೇ ಈ ವೈರಸ್ ದೀರ್ಘಕಾಲನ ತನಕ ಸಾಂಕ್ರಾಮಿಕವಾಗಿ ಉಳಿಯಬಹುದು. ಒಮ್ಮೆ ಈ ವೈರಸ್ ಗಳು ಹೊರಾಂಗಣ ಪರಿಸ್ಥಿತಿಗೆ ಹೊಂದಿಕಂಡರೆ ಯಾವ ಪ್ರಮಾಣದಲ್ಲಿ ಸೋಂಕು ಹರಡಬಲ್ಲದು ಮತ್ತು ಎಷ್ಟು ಪ್ರಮಾಣದಲ್ಲಿ ಅಪಾಯ ಬೀರಬಲ್ಲದು ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಆತಂಕ ಹೊರಹಾಕಿದ್ದಾರೆ.

ರಷ್ಯಾ, ಫ್ರಾನ್ಸ್, ಜರ್ಮನಿ ವಿಜ್ಞಾನಿಗಳ ಪ್ರಕಾರ, ಅಧ್ಯಯನ ಮಾಡಿದ ವೈರಸ್ ಗಳನ್ನು ಪುನಶ್ಚೇತನಗೊಳಿಸುವ ಜೈವಿಕ ಅಪಾಯವು ಅವರು ಗುರಿಪಡಿಸಿದ ತಳಿಗಳಿಂದ ಕಡಿಮೆ ಆಗಿದೆ, ಈ ವೈರಸ್ ಗಳು ಪ್ರಮುಖವಾಗಿ ಅಮೀಬಾದಂಥ ಸೂಕ್ಷ್ಮಾಣು ಜೀವಿಗಳಿಗೆ ಸೋಂಕು ತರುತ್ತದೆ. ಪ್ರಾಣಿಗಳು, ಮನುಷ್ಯರಿಗೆ ಸೋಂಕು ತಗಲಿಸುವ ವೈರಸ್ ನ ಸಂಭಾವ್ಯ ಪುನರುಜ್ಜೀವನವು ಹೆಚ್ಚು ಸಮಸ್ಯಾತ್ಮಕವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: Samantha treatment: ಮತ್ತಷ್ಟು ಬಿಗಡಾಯಿಸಿದೆಯಾ ನಟಿ ಸಮಂತಾ ಕಾಯಿಲೆ..? ಸೌತ್ ಕೊರಿಯಾದಲ್ಲಿ ಹೆಚ್ಚಿನ ಚಿಕಿತ್ಸೆ..

Zombie Virus: New thorn in the world: Rebirth of 48,500 year old virus buried in ice in Russia

Comments are closed.