Home Remedies For Toothache:ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಿರಾ? ಇಲ್ಲಿದೆ ಪರಿಹಾರ

(Home Remedies For Toothache)ಹಲ್ಲು ನೋವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ನಾವು ಸೇವಿಸುವಂತಹ ಆಹಾರ ಕ್ರಮ ಮತ್ತು ಆಹಾರವನ್ನು ಸೇವನೆ ಮಾಡಿದ ನಂತರ ಹಲ್ಲನ್ನು ಸ್ವಚ್ಚಗೊಳಿಸದೆ ಇರುವುದು ಇದಕ್ಕೆ ಕಾರಣವಾಗಿರಬಹುದು. ಚಿಕ್ಕ ಮಕ್ಕಳಲ್ಲಿ ಅತಿ ಹೆಚ್ಚು ಹಲ್ಲು ನೋವು ಕಾಣಿಸಿಕೊಳ್ಳುತ್ತದೆ. ಹಲ್ಲು ನೋವು ಬಂದಾಗ ತಕ್ಷಣ ದಂತ ವೈದ್ಯರ ಹತ್ತಿರ ಹೋಗುವ ಮೊದಲು ಮನೆಮದ್ದು ಮಾಡಿಕೊಂಡು ನಂತರ ದಂತ ವೈದ್ಯರ ಹತ್ತಿರ ತೆರಳಿದರೆ ಉತ್ತಮ. ಹಲ್ಲು ನೋವಿಗೆ ಮನೆಮದ್ದು ಹೇಗೆ ತಯಾರಿಸಿಕೊಳ್ಳಬೇಕು ಎಂಬ ಮಾಹಿತಿಯ ಕುರಿತು ಈ ಕೆಳಗೆ ತಿಳಿಸಲಾಗಿದೆ.

(Home Remedies For Toothache)ಬೇಕಾಗುವ ಸಾಮಾಗ್ರಿಗಳು:
ಶುಂಠಿ
ಉಪ್ಪು

ಮಾಡುವ ವಿಧಾನ:
ಕುಟ್ಟಣಿಗೆಯಲ್ಲಿ ಅರ್ಧ ಶುಠಿ ಹಾಕಿ ಜಜ್ಜಿಕೊಳ್ಳಬೇಕು ನಂತರ ಅದಕ್ಕೆ ಕಾಲು ಚಮಚ ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಹಲ್ಲಿನ ಸುತ್ತ ಹಚ್ಚಿಕೊಂಡರೆ ಹಲ್ಲು ನೋವು ಕಡಿಮೆ ಆಗುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಕಾಳು ಮೆಣಸಿನ ಪುಡಿ
ಲವಂಗದ ಎಣ್ಣೆ

ಮಾಡುವ ವಿಧಾನ:
ಬೌಲ್ ನಲ್ಲಿ ಕಾಳುಮೆಣಸಿನ ಪುಡಿ ಹಾಕಿಕೊಂಡು ಅದಕ್ಕೆ ಲವಂಗದ ಎಣ್ಣೆ ಬೆರೆಸಿಕೊಂಡು ಪೇಸ್ಟ್‌ ಮಾಡಿಳ್ಳಬೇಕು. ಈ ಪೇಸ್ಟ್‌ ಅನ್ನು ಹಲ್ಲು ನೋವಿರುವ ಕಡೆ ಹಚ್ಚಿಕೊಂಡರೆ ಹಲ್ಲು ನೋವು ಕಡಿಮೆ ಆಗುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಇಂಗು
ನಿಂಬೆ ಹಣ್ಣು

ಮಾಡುವ ವಿಧಾನ:
ಕುಟ್ಟಣಿಗೆಯಲ್ಲಿ ಇಂಗನ್ನು ಪುಡಿಮಾಡಿಕೊಂಡು ಬೌಲ್‌ ಗೆ ಹಾಕಿ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಬಿಸಿ ಮಾಡಿಕೊಳ್ಳಬೇಕು ನಂತರ ಇದು ತಣ್ಣಗಾದ ಮೇಲೆ ಹತ್ತಿಯನ್ನು ಮಿಶ್ರಣಕ್ಕೆ ಅದ್ದಿಕೊಂಡು ಹಲ್ಲು ನೋವಿರುವ ಕಡೆ ಹತ್ತಿಯನ್ನು ಇಟ್ಟುಕೊಂಡರೆ ಹಲ್ಲು ನೋವನ್ನು ಕಡಿಮೆ ಮಾಡುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಕೊಬ್ಬರಿ ಎಣ್ಣೆ
ಲವಂಗ

ಇದನ್ನೂ ಓದಿ:Boosting your Immunity:ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಕಷಾಯಪುಡಿ

ಇದನ್ನೂ ಓದಿ:Blocked Nose : ನಿಮಗೆ ಶೀತದಿಂದ ಮೂಗು ಕಟ್ಟಿದೆಯೇ; ಹಾಗಾದರೆ ಈ ವಿಧಾನಗಳನ್ನು ಅನುಸರಿಸಿ

ಮಾಡುವ ವಿದಾನ:
ಕುಟ್ಟಣಿಗೆಯಲ್ಲಿ ಲವಂಗವನ್ನು ಪುಡಿಮಾಡಿಕೊಂಡು ನಂತರ ಸೌಟಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಬಿಸಿ ಮಾಡಬೆಕು. ಅದಕ್ಕೆ ಲವಂಗ ಪುಡಿ ಬೇರೆಸಿಕೊಂಡು ಹಲ್ಲು ನೋವಿರುವ ಕಡೆ ಹಚ್ಚಿಕೊಂಡರೆ ಹಲ್ಲು ನೋವನ್ನು ಕಡಿಮೆ ಮಾಡುತ್ತದೆ. ಬರಿ ಲವಂಗವನ್ನು ನೋವಿರುವ ಹಲ್ಲಿನಲ್ಲಿ ಕಚ್ಚಿ ಹಿಡಿದಿಟ್ಟುಕೊಂಡರೆ ಹಲ್ಲು ನೋವನ್ನು ಕಡಿಮೆ ಮಾಡುತ್ತದೆ. ಲವಂಗದಲ್ಲಿ ಯುಜೆನಾಲ್‌ ಎನ್ನುವ ಅಂಶ ಇರುವುದರಿಂದ ಇದು ನಂಜುನಿರೋಧಕವಾಗಿ ಕೆಲಸ ಮಾಡುತ್ತದೆ . ಲವಂಗದ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿಕೊಂಡು ಹಲ್ಲು ನೋವಿರುವ ಭಾಗಕ್ಕೆ ಇಟ್ಟುಕೊಂಡರೆ ಹಲ್ಲು ನೋವು ಕಡಿಮೆ ಆಗುತ್ತದೆ.

Home Remedies For Toothache Suffering from toothache problem? Here is the solution

Comments are closed.