Bank Recruitment 2022: ಪದವಿ ಮುಗಿಸಿದವರಿಗೆ ಬಂಪರ್; 78,230 ರೂ.ರವರೆಗೆ ಸಂಬಳದ ಆಫರ್ ಇರುವ ಉದ್ಯೋಗ

ನೀವು ಪದವಿ ಶಿಕ್ಷಣವನ್ನು ಕಂಪ್ಲೀಟ್ ಮಾಡಿದ್ದರೆ ಒಂದೊಳ್ಳೆ ಉದ್ಯೋಗವೊಂದು (BOM Recruitment 2022) ನಿಮ್ಮನ್ನೇ ಹುಡುಕಿಕೊಂಡು ಬಂದಿದೆ. ಅದೂ ಬ್ಯಾಂಕ್‌ನಲ್ಲಿ ಉದ್ಯೋಗ, ಸಂಬಳ ಕಡಿಮೆಯಲ್ಲ, ರೂಪಾಯಿ 78230ವರೆಗೂ ಸಂಬಳವನ್ನು ಪಡೆಯುವ ಭರ್ಜರಿ ಆಫರ್‌ನ ಬ್ಯಾಂಕ್ ಉದ್ಯೋಗವೊಂದಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ (Bank Of Maharashtra- BOM) 500 ಖಾಲಿ ಹುದ್ದೆಗಳಿಗೆ ಅರ್ಜಿ ಕರೆದಿರುವುದು. ಹಾಗಾದರೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಪದವಿ ಮುಗಿದರೆ ಸಾಕೇ? ಇನ್ನೂ ಏನೆಲ್ಲ ಅರ್ಹತೆಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಸ್ಟೋರಿಯನ್ನು ಕಂಪ್ಲೀಟ್‌ ಅಗಿ ಓದಿ.

ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ?
ಒಟ್ಟು 500 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಸಾಮಾನ್ಯ ಅಧಿಕಾರಿ ಸ್ಕೇಲ್ 2 : 400 500 ಹುದ್ದೆಗಳು ಸಾಮಾನ್ಯ ಅಧಿಕಾರಿ ಸ್ಕೇಲ್ 3 : 100 ಹುದ್ದೆಗಳನ್ನು ಇದು ಒಳಗೊಂಡಿದೆ. ಸಾಮಾನ್ಯ ಅಧಿಕಾರಿ ಸ್ಕೇಲ್ 2 ಅಧಿಕಾರಿಗೆ 48,170 ರಿಂದ 69810 ರವರೆಗೆ ಸಂಬಳ ದೊರೆಯಲಿದೆ. ಸಾಮಾನ್ಯ ಅಧಿಕಾರಿ ಸ್ಕೇಲ್ 3 ಅಧಿಕಾರಿಗೆ 63840 ರಿಂದ 78230 ಸಂಬಳ ದೊರೆಯಲಿದೆ.

ಅಂದಹಾಗೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿಯಲ್ಲಿ ಉತ್ತೀರ್ನರಾಗಿರಬೇಕು. SC/ST/OBC/PwBD ಅಭ್ಯರ್ಥಿಗಳಾದಲ್ಲಿಎಲ್ಲಾ ಸೆಮಿಸ್ಟರ್ ಅಥವಾ ವರ್ಷಗಳ ಶೇಕಡಾ 55ರಷ್ಟು ಅಂಕ ಪಡೆದಿರಬೇಕು. ಇಲ್ಲವೇ CA/CMA/CFA ಅಭ್ಯರ್ಥಿಗಳಾದಲ್ಲಿ ಕನಿಷ್ಠ 60% ಅಂಕ ಗಳಿಸಿ ಪದವಿಯಲ್ಲಿ ಯಾವುದೇ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.

ಈ ಉದ್ಯೋಗಕ್ಕೆ ನೀವು ಅರ್ಜಿ ಹಾಕಲು ಆನ್‌ಲೈನ್ ವಿಧಾನದ ಮುಲಕ ಅರ್ಜಿ ಹಾಕಬಹುದು. ಅರ್ಜಿ ಹಾಕುವುದಿದ್ದಲ್ಲಿ 5 ಫೆಬ್ರವರಿ 2022 ರಿಂದಲೇ ಈ ಆಪ್ಶನ್ ಓಪನ್ ಆಗಿದೆ. 22 ಫೆಬ್ರವರಿ 2022 ರೊಳಗೆ ಅರ್ಜಿ ಸಲ್ಲಿಸಬೇಕು ಮತ್ತು 12 ಮಾರ್ಚ್ 2022ರಂದು ಪರೀಕ್ಷೆ ನಡೆಯಲಿದೆ. ಪರೀಕ್ಷೆ ಆನ್‌ಲೈನ್‌ನಲ್ಲಿ ನಡೆಯಲಿದ್ದು ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನದ ಮುಲಕ ಮತ್ತೊಮ್ಮೆ ಆಯ್ಕೆ ಮಾಡಲಾಗುತ್ತದೆ.

ಪದವಿ ವ್ಯಾಸಂಗ ಮಾಡಿದವರು ಬ್ಯಾಂಕ್ ಆಫ್ ಮಹಾರಾಷ್ಟ್ರದ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವಿರಾದಲ್ಲಿ ತಡ ಮಾಡದೇ ಈಗಲೆ ಅರ್ಜಿ ಸಲ್ಲಿಸಿ. ಈ ಉದ್ಯೋಗದ ಕುರಿತ ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ವೆಬ್‌ಸೈಟ್ ಆದ http://bankofmaharashtra.in/ವನ್ನು ಸಂಪರ್ಕಿಸಿ.

ನಿಮ್ಮ ವೃತ್ತಿ ಜೀವನವು ಸದಾ ಸುಖಕರವಾಗಿರಲಿ. ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ ಸದಾ ನ್ಯೂಸ್‌ನೆಕ್ಸ್‌ಲೈವ್ ಕನ್ನಡವನ್ನು ಓದುತ್ತಿರಿ.

ಇದನ್ನೂ ಓದಿ: Job News: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ; ಜವಾಬ್ದಾರಿ, ಸಂಬಳದ ವಿವರ ಇಲ್ಲಿದೆ

(Bank Recruitment 2022 Bank Of Maharashtra called for 500 vacancies)

Comments are closed.