ಬಾಬಾ ಅಟೋಮಿಕ್ ರೆಸರ್ಚ್ ಸೆಂಟರ್ (BARC) ಪೆಥಾಲಜಿ ಟೆಕ್ನಿಷಿಯನ್, X-Ray ಟೆಕ್ನಿಷಿಯನ್ ಮತ್ತು ಮೆಡಿಕಲ್ ಆಫೀಸರ್ (ದಂತ ಮತ್ತು ಪೀಡಿಯಾಟ್ರಿಕ್ಸ್) ಸೇರಿದಂತೆ ವಿವಿಧ ಹುದ್ದೆಗಳಿಗೆ ವಾಕ್–ಇನ್ ಇಂಟರ್ವ್ಯೂ (BARC Recruitment 2022)ನಡೆಸಲು ಅರ್ಹ ಅಭ್ಯರ್ಥಗಳಿಂದ ಅರ್ಜಿ ಆಹ್ವಾನಿಸಿದೆ. ನಿಯಮಿತ /ಖಾಲಿ ಹುದ್ದೆಗಳಿಗೆ ತಾತ್ಕಾಲಿಕ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಸಂದರ್ಶನವನ್ನು ಅಕ್ಟೋಬರ್ 12 ಮತ್ತು 14 ರಂದು 10:30 ಕ್ಕೆ ನಡೆಸಲಿದೆ. ಹೆಚ್ಚಿನ ಮಾಹಿತಿಗಾಗಿ BARC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.
ವಿವಿಧ ಹುದ್ದೆಗಳ ವಿವರ :
ಹುದ್ದೆ : ಪೆಥಾಲಜಿ ಟೆಕ್ನಿಷಿಯನ್ (01 ಪೋಸ್ಟ್)
ಈ ಹುದ್ದೆಗಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಬಿ.ಎಸ್ಸಿ ಮತ್ತು 60% ನೊಂದಿಗೆ ಒಂದು ವರ್ಷದ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ ಓದಿರಬೇಕು. ಅಥವಾ ನೇರವಾಗಿ 60% ನೊಂದಿಗೆ ಬಿ.ಎಸ್ಸಿ ಇನ್ ಮೆಡಿಕಲ್ ಲ್ಯಾಬ್ ಟೆಕ್ ಪದವಿ ಪಡೆದಿರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಭ್ಯರ್ಥಿಯ ವಯೋಮಿತಿಯು 40 ವರ್ಷಕ್ಕಿಂತ ಹೆಚ್ಚಿರಬಾರದು.
ಸಂದರ್ಶನದ ಸಮಯ : 12 ಅಕ್ಟೋಬರ್ 2022 ರಂದು 10:30 ಕ್ಕೆ ಪ್ರಾರಂಭವಾಗುವುದು.
ಹುದ್ದೆ : X-Ray ಟೆಕ್ನಿಷಿಯನ್ (01 ಪೋಸ್ಟ್)
60% ಅಂಕಗಳೊಂದಿಗೆ HSC (Science) ಜೊತೆಗೆ ಒಂದು ವರ್ಷದ X-Ray ಟೆಕ್ನಿಕ್ಸ್ ಸರ್ಟಿಫಿಕೇಟ್ ಹೊಂದರಬೇಕು. ಆಸಕ್ತ ಅಭ್ಯರ್ಥಿಯ ವಯಸ್ಸು 40 ವರ್ಷಕ್ಕಿಂತ ಹೆಚ್ಚಿರಬಾರದು.
ಸಂದರ್ಶನದ ಸಮಯ : 12 ಅಕ್ಟೋಬರ್ 2022 ರಂದು 10:30 ಕ್ಕೆ ಪ್ರಾರಂಭವಾಗುವುದು.
ಹುದ್ದೆ : ಮೆಡಿಕಲ್ ಆಫೀಸರ್ (ಡೆಂಟಲ್)
ಖಾಲಿ ಹುದ್ದೆ ಸಂಖ್ಯೆ : 01
ಅರ್ಹತೆ : ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ M. D. S. ಪ್ರೊಸ್ಟೊಡಾಂಟಿಕ್ಸ್ ಪೂರ್ಣಗೊಳಿಸರಬೇಕು.
ವಯೋಮಿತ : 45 ವರ್ಷಗಳು
ಸಂದರ್ಶನದ ಸಮಯ : 14 ಅಕ್ಟೋಬರ್ 2022 ರಂದು 10:30 ಕ್ಕೆ ಪ್ರಾರಂಭವಾಗುವುದು.
ಹುದ್ದೆ : ಮೆಡಿಕಲ್ ಆಫೀಸರ್ (ಪಿಡಿಯಾಟ್ರಿಕ್ಸ್)
ಖಾಲಿ ಹುದ್ದೆ ಸಂಖ್ಯೆ : 01
ಅರ್ಹತೆ : ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ M. D/DNB(ಪಿಡಿಯಾಟ್ರಿಕ್ಸ್) ಅಥವಾ ತತ್ಸಮಾನ. ಅಥವಾ MBBS ಜೊತೆಗೆ ಸಂಬಂಧಿತ ವಿಷಯದಲ್ಲಿ ಪಿ.ಜಿ. ಡಿಪ್ಲೊಮಾ ಮತ್ತು 3 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ : 45ವರ್ಷಕ್ಕಿಂತ ಹೆಚ್ಚಿರಬಾರದು.
ಸಂದರ್ಶನದ ಸ್ಥಳ :
ಮೇಲಿನ ಎಲ್ಲಾ ಹುದ್ದೆಗಳ ಸಂದರ್ಶನವು ಕಾನ್ಫರೆನ್ಸ್ ರೂಂ ನಂ. 2, ಗ್ರೌಂಡ್ ಫ್ಲೋರ್, BARC ಹಾಸ್ಪಿಟಲ್, ಅಣುಶಕ್ತಿ ನಗರ, ಮುಂಬೈ – 400 094 ನಲ್ಲಿ ನಡೆಯಲಿದೆ.
ಇದನ್ನೂ ಓದಿ : Zomato Recruitment : ಮನೆಯಲ್ಲಿ ಕುಳಿತೇ ಸಂಪಾದಿಸಿ 2.94 ಲಕ್ಷ
ಇದನ್ನೂ ಓದಿ :Railway recruitment 2022 : 10ನೇ ತರಗತಿ, ITI ಓದಿದವರಿಗೆ ಸುವರ್ಣಾವಕಾಶ : ದಕ್ಷಿಣ ರೈಲ್ವೆ ಇಲಾಖೆಯಲ್ಲಿ 1343 ಅಪ್ರೆಂಟಿಸ್ ಹುದ್ದೆಗಳಿಗೆ ನೇರ ನೇಮಕಾತಿ
(BARC Recruitment 2022 has invited candidates for walk-in-interviews)