Taali Sushmita sen:ಮಂಗಳಮುಖಿ ಪಾತ್ರದಲ್ಲಿ ವಿಶ್ವ ಸುಂದರಿ ಸುಶ್ಮಿತಾ ಸೆನ್‌ : ತಾಲಿ ಸೀರಿಸ್ ಫಸ್ಟ್ ಲುಕ್‌ ಬಿಡುಗಡೆ

(Taali Sushmita sen)ಬಾಲಿವುಡ್ ನಟಿ ಸುಶ್ಮಿತಾ ಸೆನ್‌ ತಮ್ಮ 19 ನೇ ವಯಸ್ಸಿನಲ್ಲಿ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದವರು. ವಿಶ್ವಸುಂದರಿಯಾದ ಬಳಿಕ ಬಾಲಿವುಡ್ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆಯಾಗದೆ ಇಬ್ಬರು ಮಕ್ಕಳನ್ನು ಸಾಕಿ ಸಲಹಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಸುಶ್ಮಿತಾ ಸೇನ್ ಇದೀಗ ವಬ್ ಸೀರಿಸ್ ಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಸುಶ್ಮಿತಾ ಸೇನ್ ನಟನೆಯ ಆರ್ಯ ವೆಬ್ ಸಿರೀಸ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿತ್ತು. ಇದೀಗ ಮಂಗಳ ಮುಖಿಯ ಶ್ರೀಗೌರಿ ಸಾವಂತ್ ಪಾತ್ರದಲ್ಲಿ ಸುಶ್ಮಿತಾ ಸೇನ್ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ತಮ್ಮ ಪಾತ್ರದ ಬಗ್ಗೆ ಸುಶ್ಮಿತಾ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

(Taali Sushmita sen)”ಈ ಸುಂದರ ವ್ಯಕ್ತಿಯ ಸಿನಿಮಾವನ್ನು ಚಿತ್ರಿಸುವ ಮತ್ತು ಅವಳ ಕಥೆಯನ್ನು ಜಗತ್ತಿಗೆ ತಿಳಿಸುವುದರ ಬಗ್ಗೆ ನನಗೆ ಹೆಮ್ಮೆ ಇದೆ. ಎಲ್ಲರಿಗೂ ಕೂಡ ಬದುಕುವಂತಹ ಮತ್ತು ಘನತೆಯಿಂದ ಬಾಳ್ವೆ ಮಾಡುವಂತಹ ಹಕ್ಕಿದೆ ಎಂದು ತಮ್ಮಇನ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ತಾಲಿ ವೆಬ್‌ ಸೀರಿಸ್‌ ನ ಪಸ್ಟ್‌ ಲುಕ್‌ ನ ಪೋಸ್ಟರ್ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಶ್ರೀಗೌರಿ ಸಾವಂತ್‌ ಅವರು, ಎಚ್‌ಐವಿ/ಏಡ್ಸ್‌ ನಿಂದ ಬಳಲುತ್ತಿರುವ ಹಲವಾರು ಜನರಿಗೆ ಸಹಾಯವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಯಿ ಸಾವ್ಲಿ ಫೌಂಡೇಶನ್‌ ಟ್ರಸ್ಟ್‌ ನ ಟ್ರಸ್ಟಿ ಕೂಡ ಆಗಿದ್ದರು. ತಾಲಿ ವೆಬ್‌ ಸೀರಿಸ್‌ ಟ್ರಾನ್ಸ್‌ ಜೆಂಡರ್‌ ಶ್ರೀಗೌರಿ ಸಾವಂತ್‌ ಅವರ ಜೀವನ ಚರಿತ್ರೆಯಾಗಿದ್ದು. ಅವರ ಹಲವಾರು ನಿಸ್ವಾರ್ಥಸೇವೆ ವೆಬ್‌ ಸೀರಿಸ್‌ ನ ಮುಖಾಂತರ ಜನರ ಮುಂದೆ ಬರಲಿದೆ.ಆದರೆ ಯಾವಾಗ ಬಿಡುಗಡೆಯಾಗಲಿದೆ ಅನ್ನೋದು ಇನ್ನೂ ಖಚಿತವಾಗಿಲ್ಲ.

ಇದನ್ನೂ ಓದಿ:Actor Dhanush – Aishwarya Rajinikanth : ನಟ ಧನುಷ್‌ ಮತ್ತು ಐಶ್ವರ್ಯಾ ರಜನಿಕಾಂತ್‌ ಡಿವೋರ್ಸ್‌ ಕ್ಯಾನ್ಸಲ್‌ : ಮತ್ತೆ ಒಂದಾದ ದಂಪತಿಗಳು

ಇದನ್ನೂ ಓದಿ:Zomato Recruitment : ಮನೆಯಲ್ಲಿ ಕುಳಿತೇ ಸಂಪಾದಿಸಿ 2.94 ಲಕ್ಷ

ಇದನ್ನೂ ಓದಿ:World’s Most Expensive Sheep Sold : ಅಬ್ಬಬ್ಬಾ.. ಬರೋಬ್ಬರಿ 2 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ ಈ ಕುರಿ

ವೆಬ್ ಸೀರಿಸ್‌ ನ ಕಥೆಯನ್ನು ಕ್ಷಿತಿಜ್‌ ಪಟವರ್ಧನ್‌ ಬರೆದಿದ್ದು, ರವಿ ಜಾಧವ್‌ ನಿರ್ದೇಶಿಸಿದ್ದಾರೆ.ಇನ್ನು ಕಾರ್ಟ್ಕ್‌ ಡಿ ನಿಶಾಂದರ್‌, ಅರ್ಜುನ್‌ ಸಿಂಗ್‌ ಬರನ್‌ ಮತ್ತು ಆಫೀಫಾ ನಾಡಿಯಾಡ್ವಾಲಾ ಸೈಯದ್‌ ಈ ಸೀರಿಸ್‌ ಅನ್ನು ನಿರ್ಮಾಣ ಮಾಡುತ್ತಿದ್ದಾರೆ.ಈ ಕತೆಯು ತಾಯಿ- ಮಗಳ ಬಾಂಧವ್ಯದ ಮೇಲೆ ಆಧಾರಿಸಿದೆ.ಟ್ರಾನ್ಸ್ ಜೆಂಡರ್‌ ತಾಯಿಯಾಗಲು ಬಯಸಿದಾಗ ಸಮಾಜದಲ್ಲಿ ಆಗುವ ಅಡೆತಡೆಗಳು ಮತ್ತು ಅವರು ಎದುರಿಸುವ ಸಂಕಷ್ಟಗಳನ್ನು ಈ ವೆಬ್‌ ಸೀರಿಸ್‌ ನ ಕಥೆಯನ್ನು ಕೇಂದ್ರಿಕರಿಸಲಾಗಿದೆ. ಮುಂದಿನ ತಿಂಗಳು ಈ ಸೀರಿಸ್‌ ನ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದನ್ನೂ ಓದಿ:Assembly Election 2022 : ಕಾಂಗ್ರೆಸ್ ಎದುರಿಸೋದ್ರಲ್ಲಿ ಎಡವಿದ್ಯಾ ಸರ್ಕಾರ: ಕಾರ್ಯಕಾರಿಣಿ ಯಲ್ಲಿ ಮಹತ್ವದ ಚರ್ಚೆ‌

ಇತ್ತಿಚೀನ ದಿನಗಳಲ್ಲಿ ಮಂಗಳಮುಖಿಯರು ಎಲ್ಲಾ ರಂಗದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ. ಇದೀಗ ಮಂಗಳಮುಖಿಯೋರ್ವರ ಜೀವನ ಕಥೆಯಾಧಾರಿತ ಹಲವಾರು ಚಿತ್ರಗಳನ್ನು ಮಾಡಿದ್ದಾರೆ.

Miss World Sushmita Sen acting as transgender: Taali Series First Look Released

Comments are closed.