ಫೆಡರಲ್ ಬ್ಯಾಂಕ್ ನೇಮಕಾತಿ 2023 : ಸ್ನಾತಕೋತ್ತರ ಪದವೀಧರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

ಫೆಡರಲ್ ಬ್ಯಾಂಕ್ ನೇಮಕಾತಿ (Federal Bank Recruitment 2023) ಏಪ್ರಿಲ್ 2023 ರ ಅಧಿಕೃತ ಅಧಿಸೂಚನೆಯ ಮೂಲಕ ಹಣಕಾಸು ಅಪರಾಧ ಅನುಸರಣೆ ಸ್ಪೆಷಲಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.‌

ಫೆಡರಲ್ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಬ್ಯಾಂಕ್ ಹೆಸರು : ಫೆಡರಲ್ ಬ್ಯಾಂಕ್
ಪೋಸ್ಟ್‌ಗಳ ಸಂಖ್ಯೆ : ನಿರ್ದಿಷ್ಟಪಡಿಸಲಾಗಿಲ್ಲ
ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಯ ಹೆಸರು : ಹಣಕಾಸು ಅಪರಾಧ ಅನುಸರಣೆ ತಜ್ಞ
ವೇತನ : ರೂ.27500/- ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ :
ಫೆಡರಲ್ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಕಾನೂನಿನಲ್ಲಿ ಸ್ನಾತಕೋತ್ತರ ಪದವಿ, MBA ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ :
ಫೆಡರಲ್ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಏಪ್ರಿಲ್‌ 01,2023 ರಂತೆ ಗರಿಷ್ಠ 27 ವರ್ಷ ವಯಸ್ಸುನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ :
SC/ST ಅಭ್ಯರ್ಥಿಗಳು : 05 ವರ್ಷಗಳು

ಅರ್ಜಿ ಶುಲ್ಕ :
SC/ST ಅಭ್ಯರ್ಥಿಗಳು : ರೂ.100/-
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳು : ರೂ.500/-

ಪಾವತಿ ವಿಧಾನ:
ಫೆಡರಲ್ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಬೇಕಾಗಿದೆ.

ಆಯ್ಕೆ ಪ್ರಕ್ರಿಯೆ :
ಫೆಡರಲ್ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳು ಮಾಕ್ ಅಸೆಸ್‌ಮೆಂಟ್, ಆಪ್ಟಿಟ್ಯೂಡ್ ಅಸೆಸ್‌ಮೆಂಟ್, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ : ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನೇಮಕಾತಿ 2023 : ಪಿಯುಸಿ ಉತ್ತೀರ್ಣರಾದವರಿಗೆ ಉದ್ಯೋಗಾವಕಾಶ, 81100 ರೂ. ವೇತನ .

ಇದನ್ನೂ ಓದಿ : union bank recruitment 2023 : ಪದವೀಧರರಿಗೆ ಉದ್ಯೋಗಾವಕಾಶ, 47920 ರೂಪಾಯಿ ವೇತನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 13 ಏಪ್ರಿಲ್‌ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27 ಏಪ್ರಿಲ್ 2023
ಅಣಕು ಮೌಲ್ಯಮಾಪನದ ಪ್ರಸ್ತಾವಿತ ದಿನಾಂಕ : 03, 04ನೇ ಮೇ 2023
ಆನ್‌ಲೈನ್ ಆಪ್ಟಿಟ್ಯೂಡ್ ಮೌಲ್ಯಮಾಪನದ ಪ್ರಸ್ತಾವಿತ ದಿನಾಂಕ : 07 ಮೇ 2023

Federal Bank Recruitment 2023 : Job Opening for Post Graduates, Apply Immediately

Comments are closed.