ಸೋಮವಾರ, ಏಪ್ರಿಲ್ 28, 2025
Homejob NewsGESCOM Recruitment 2022 : ವಿದ್ಯುತ್ ಸರಬರಾಜು ಕಂಪನಿಯಲ್ಲಿ ಉದ್ಯೋಗಾವಕಾಶ

GESCOM Recruitment 2022 : ವಿದ್ಯುತ್ ಸರಬರಾಜು ಕಂಪನಿಯಲ್ಲಿ ಉದ್ಯೋಗಾವಕಾಶ

- Advertisement -

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ನಲ್ಲಿ (GESCOM Recruitment 2022) ಖಾಲಿ ಇರುವ ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಲಬುರಗಿ – ಕರ್ನಾಟಕದಲ್ಲಿ ಮೆಸ್ಕಾಂನಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್‌ 08, 2022 ರ ಮೊದಲು ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳನ್ನು ಪೋಸ್ಟ್‌ ಮೂಲಕ ಕಳುಹಿಸಬೇಕಾಗಿದೆ.

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ (GESCOM)ನಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (GESCOM)
ಹುದ್ದೆಗಳ ಸಂಖ್ಯೆ : 135
ಉದ್ಯೋಗ ಸ್ಥಳ : ಕಲಬುರಗಿ – ಕರ್ನಾಟಕ
ಹುದ್ದೆಯ ಹೆಸರು : ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್
ಸ್ಟೈಪೆಂಡ್ : ರೂ.8000-9000/- ಪ್ರತಿ ತಿಂಗಳು

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ (GESCOM)ನಲ್ಲಿ ಖಾಲಿ ಇರುವ ಹುದ್ದೆ ಹೆಸರು ಹಾಗೂ ಹುದ್ದೆಗಳ ಸಂಖ್ಯೆ ವಿವರ :
ಗ್ರಾಜುಯೇಟ್ ಅಪ್ರೆಂಟಿಸ್ : 100 ಹುದ್ದೆಗಳು
ಡಿಪ್ಲೊಮಾ ಅಪ್ರೆಂಟಿಸ್ : 35 ಹುದ್ದೆಗಳು

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ (GESCOM)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಸಾರವಾಗಿ ಬೇಕಾಗಿರುವ ವಿದ್ಯಾರ್ಹತೆ ವಿವರ :
ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಗ್ರಾಜುಯೇಟ್ ಅಪ್ರೆಂಟಿಸ್ : ಯಾವುದೇ ಪದವಿ ಪೂರ್ಣಗೊಳಿಸಿರಬೇಕು
ಡಿಪ್ಲೊಮಾ ಅಪ್ರೆಂಟಿಸ್ : ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್

ವಯೋಮಿತಿ ವಿವರ :
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ (GESCOM)ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸನ್ನು ಪೂರ್ಣಗೊಳಿಸರಬೇಕು.

ಆಯ್ಕೆ ಪ್ರಕ್ರಿಯೆ :
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ (GESCOM)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ಮೇಲೆ ಆಯ್ಕೆ ಮಾಡಲಾಗುತ್ತದೆ.

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ (GESCOM)ನಲ್ಲಿ ಖಾಲಿರುವ ಹುದ್ದೆಗಳಿಗೆ ಅನುಸಾರವಾಗಿ ವೇತನದ ವಿವರ :
ಪದವೀಧರ ಅಪ್ರೆಂಟಿಸ್ : ರೂ.9000/-
ಡಿಪ್ಲೋಮಾ ಅಪ್ರೆಂಟಿಸ್ : ರೂ.8000/-

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ (GESCOM)ನಲ್ಲಿ ಖಾಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ (GESCOM)ನಲ್ಲಿ ಖಾಲಿರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ(ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ, ಗುರುತಿನ ಚೀಟಿ, ವಯಸ್ಸು , ಶೈಕ್ಷಣಿಕ , ಅರ್ಹತೆ ,ಇತ್ಯಾದಿ ದಾಖಲೆ) ಜನರಲ್ ಮ್ಯಾನೇಜರ್ (A&HRD) ಕಾರ್ಪೊರೇಟ್ ಕಚೇರಿ, GESCOM, ಕಲಬುರಗಿ-585102, ಕರ್ನಾಟಕಕ್ಕೆ ಡಿಸೆಂಬರ್‌ 08, 2022 ರಂದು ಅಥವಾ ಮೊದಲು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಇತರ ಸೇವೆಯ ಮೂಲಕ ಕಳುಹಿಸಬೇಕಾಗುತ್ತದೆ.

ಇದನ್ನೂ ಓದಿ : HAL Recruitment 2022: ವೈದ್ಯಕೀಯ ‌ಕ್ಷೇತ್ರದಲ್ಲಿದೆ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : Gulbarga University Recruitment 2022 :ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 53 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : ESIC Recruitment 2022:ಜೀವವಿಮಾ ನಿಗಮದಲ್ಲಿ ಉದ್ಯೋಗ : 67 ಸಾವಿರ ರೂ. ವೇತನ

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 21-11-2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-12-2022

GESCOM Recruitment 2022 : Job Opportunity in Electricity Supply Company

RELATED ARTICLES

Most Popular