International Film Festival : ಅಂತಾರಾಷ್ಟ್ರೀಯ ಸಿನಿಮೋತ್ಸವ : “ಕೆಜಿಎಫ್‌” ಸಿನಿಮಾ ಹಾಡಿ ಹೊಗಳಿದ ರಾಣಾ ದಗ್ಗುಬಾಟಿ

ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವ (International Film Festival )ಬಹಳ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಟಾಲಿವುಡ್‌ ಖ್ಯಾತಿಯ ರಾಣ ದಗ್ಗುಬಾಟಿ ಭಾಗಿ ಆಗಿದ್ದರು. ಆ ವೇಳೆಯಲ್ಲಿ ಅವರು “ಕೆಜಿಎಫ್‌” ಸರಣಿ ಸಿನಿಮಾ ದಾಖಲೆ ಮಾಡಿದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

2022ನೇ ಸಾಲಿನ ಅಂತಾರಾಷ್ಟ್ರೀಯ ಸಿನಿಮೋತ್ಸವ ಗೋವಾದಲ್ಲಿ ನಡೆದಿದೆ. ಇದರ ಸಮಾರೋಪ ಸಮಾರಂಭ ನವೆಂಬರ್‌ 28ರಂದು ನೆರವೇರಿದೆ. ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗಿ ಆಗಿದ್ದ ರಾಣಾ ದಗ್ಗುಬಾಟಿ ” ಕೆಜಿಎಫ್‌” ಸರಣಿ ಸಿನಿಮಾ ಮಾಡಿದ ದಾಖಲೆ ಬಗ್ಗೆ ಮೆಚ್ಚುಗೆ ಸೂಚಿಸಿ ಹಾಡಿ ಹೊಗಳಿದ್ದಾರೆ. ಈ ಮೊದಲು ಕೂಡ ಹಲವು ವೇದಿಕೆಗಳಲ್ಲಿ ಅವರು “ಕೆಜಿಎಫ್‌” ಸಿನಿಮಾದ ಬಗ್ಗೆ ಮಾತಾನಾಡಿದ್ದಾರೆ.

ಗೋವಾದಲ್ಲಿ ಆರಂಭವಾದ 53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ತೆಲುಗು ನಟ ಮೆಗಸ್ಟಾರ್‌ ಚಿರಂಜೀವಿ 2022ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಪಾಲ್ಗೊಂಡಿರಲಿಲ್ಲ. ಆದರೆ ಈ ಅತ್ಯುನ್ನತ ಪ್ರಶಸ್ತಿ ದೊರೆತಿರುವುದರಿಂದ ಚಿರಂಜೀವಿ ಅಭಿಮಾನಿಗಳು ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾಗೆ ಸಿನಿಗಣ್ಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಅವರಿಗೆ ಅಭಿನಂದಿಸಿದ್ದಾರೆ.

ಇದನ್ನೂ ಓದಿ : Actress Ramya Birthday : ಜಪಾನಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಮ್ಯಾ

ಇದನ್ನೂ ಓದಿ : Aditi Prabhudeva and Yashas: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅದಿತಿ ಪ್ರಭುದೇವ

ಇದನ್ನೂ ಓದಿ : Amrutha Prem: ನಾಯಕಿಯಾಗಿ ಪ್ರೇಮ್‌ ಪುತ್ರಿ ಅಮೃತಾ ಸ್ಯಾಂಡಲ್‌ ವುಡ್‌ ಗೆ ಎಂಟ್ರಿ

ಇದನ್ನೂ ಓದಿ : Sunny Leone in UI Movie : ಸದ್ದಿಲ್ಲದೇ ಉಪೇಂದ್ರ ಸಿನಿಮಾಕ್ಕೆ ಕಾಲಿಟ್ಟ ಹಾಟ್‌ ತಾರೆ ಸನ್ನಿ ಲಿಯೋನ್‌

ಇದನ್ನೂ ಓದಿ : Sapthami Gowda Abhishek Ambareesh : ಅಭಿಷೇಕ್‌ ಅಂಬರೀಶ್‌ ಕಾಳಿ ಸಿನಿಮಾಗೆ ಕಾಂತಾರ ಬೆಡಗಿ ಸಪ್ತಮಿ ನಾಯಕಿ

ಕನ್ನಡ ಸಿನಿಮಾರಂಗದಲ್ಲಿ ಇತ್ತೀಚೆಗೆ ಮೂಡಿ ಬರುತ್ತಿರುವ ಸಿನಿಮಾಗಳು ದೇಶ ವಿದೇಶಗಳಲ್ಲಿ ಮೆಚ್ಚುಗೆಯನ್ನು ಪಡೆಯುತ್ತಿದೆ. ಒಂದರ ಹಿಂದೆ ಮತ್ತೊಂದು ಎನ್ನುವಂತೆ ಉತ್ತಮ ಸಿನಿಮಾಗಳನ್ನು ಮೂಡಿಬಂದು ಪರಭಾಷೆ ಸಿನಿರಂಗದವರು ಕನ್ನಡ ಸಿನಿಮಾಗಳನ್ನು ಹಾಡಿ ಹೊಗಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

International Film Festival: Rana Daggubati praised the movie “KGF”.

Comments are closed.