ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ IBPS ಕ್ಲರ್ಕ್ ನೇಮಕಾತಿ (IBPS Clerk Notification 2023) ಅಧಿಕೃತ ಅಧಿಸೂಚನೆ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಖಾಲಿರುವ ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆಯು ಜುಲೈ 1 ರಂದು ಪ್ರಾರಂಭವಾಗುತ್ತದೆ ಮತ್ತು ಜುಲೈ 21, 2023 ರಂದು ಕೊನೆಗೊಳ್ಳುತ್ತದೆ. ಅಭ್ಯರ್ಥಿಗಳು IBPS ನ ಅಧಿಕೃತ ಸೈಟ್ ಆದ ibps.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಇಲಾಖೆಯು 6030 ಹುದ್ದೆಗಳನ್ನು ಭರ್ತಿ ಮಾಡುತ್ತದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.
ಶೈಕ್ಷಣಿಕ ಅರ್ಹತೆ :
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ IBPS ಕ್ಲರ್ಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಭಾರತದ ಅಥವಾ ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆಐನ್ನು ಹೊಂದಿರಬೇಕು.
ವಯೋಮಿತಿ ವಿವರ :
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ IBPS ಕ್ಲರ್ಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು 20 ವರ್ಷದಿಂದ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ :
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ IBPS ಕ್ಲರ್ಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಆಯ್ಕೆ ಪ್ರಕ್ರಿಯೆಯು ಪ್ರಾಥಮಿಕ ಪರೀಕ್ಷೆಯ ನಂತರ ಮುಖ್ಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಕರೆ ಪತ್ರವು IBPS ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಅರ್ಜಿ ಶುಲ್ಕ :
ಎಲ್ಲಾ ಇತರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 850/- ಮತ್ತು SC/ST/PWBD/EXSM ಅಭ್ಯರ್ಥಿಗಳಿಗೆ ಅವರು ಅರ್ಜಿ ಶುಲ್ಕ ರೂ. 175/-. ಪಾವತಿಯನ್ನು ಆನ್‌ಲೈನ್ ಮೋಡ್ ಮೂಲಕ ಮಾಡಬೇಕು.
ಇದನ್ನೂ ಓದಿ : Karnataka Gramin Bank Recruitment 2023 : ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ
ಪ್ರಮುಖ ದಿನಾಂಕಗಳ ವಿವರ :
ಅರ್ಜಿಯ ಆರಂಭಿಕ ದಿನಾಂಕ: ಜುಲೈ 1, 2023
ಅಪ್ಲಿಕೇಶನ್‌ನ ಕೊನೆಯ ದಿನಾಂಕ: ಜುಲೈ 21, 2023
IBPS Clerk Notification 2023 : IBPS Clerk Posts, Opportunity for Graduates