List of District In-charge Ministers‌ : ಯಾವ ಜಿಲ್ಲೆ ಯಾರು ಉಸ್ತುವಾರಿ ಸಚಿವರು : ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಬೆಂಗಳೂರು : ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ (List of District In-charge Ministers) ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಈಗಾಗಲೇ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯೂ ಸಿದ್ದವಾಗಿದ್ದು, ಯಾವ ಸಚಿವರು ಯಾವ ಜಿಲ್ಲೆಗೆ ಉಸ್ತುವಾರಿ ಆಗಲಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ಪರಮಾಪ್ತ ಕೆಜೆ ಜಾರ್ಜ್‌ ಅವರಿಗೆ ವಹಿಸಿದ್ದಾರೆ. ಇನ್ನು ಗ್ರಾಮಾಂತರ ಜಿಲ್ಲೆಗೆ ಉಸ್ತುವಾರಿಯ ಹೊಣೆಯನ್ನು ರಾಮಲಿಂಗಾ ರೆಡ್ಡಿ, ರಾಮನಗರಕ್ಕೆ ಡಿಕೆ ಶಿವಕುಮಾರ್‌, ಸಿಎಂ ತವರು ಜಿಲ್ಲೆ ಹಾವೇ ಉಸ್ತುವಾರಿಯನ್ನು ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ವಹಿಸುವ ಸಾಧ್ಯತೆಯಿದೆ. ಹಾಗಾದ್ರೆ ಸಂಭಾವ್ಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ :

  • ಬೆಂಗಳೂರು ನಗರ= ಕೆಜೆ ಜಾರ್ಜ್
  • ಬೆಂಗಳೂರು ಗ್ರಾಮಾಂತರ= ರಾಮಲಿಂಗಾ ರೆಡ್ಡಿ
  • ಕೋಲಾರ =ಕೆ ಎಚ್ ಮುನಿಯಪ್ಪ
  • ಚಿಕ್ಕಬಳ್ಳಾಪುರ= ಡಾ ಎಮ್ ಸಿ ಸುಧಾಕರ
  • ರಾಮನಗರ= ಡಿಕೆ ಶಿವಕುಮಾರ
  • ಮಂಡ್ಯ= ಚೆಲುವರಾಯ ಸ್ವಾಮಿ
  • ಬೆಳಗಾವಿ= ಸತೀಶ್ ಜಾರಕಿಹೊಳಿ
  • ಬೀದರ್= ರಹೀಮ್ ಖಾನ್
  • ಕಲಬುರ್ಗಿ= ಶರಣ ಪ್ರಕಾಶ್ ಪಾಟೀಲ್
  • ವಿಜಯಪುರ= ಎಮ್ ಬಿ ಪಾಟೀಲ್
  • ಬಳ್ಳಾರಿ= ನಾಗೇಂದ್ರ
  • ಗದಗ= ಎಚ್ ಕೆ ಪಾಟೀಲ್
  • ಹಾವೇರಿ= ಬಿ ಝಡ್ ಝಮೀರ್ ಅಹ್ಮದ್ ಖಾನ್
  • ಕೊಪ್ಪಳ= ಶಿವರಾಜ್ ತಂಗಡಗಿ
  • ಯಾದಗಿರಿ= ಶರಣಪ್ಪಬಸಪ್ಪ ದರ್ಶಣಾಪುರ
  • ಬಾಗಲಕೋಟೆ= ಶೀವನಾಂದ ಪಾಟೀಲ್
  • ವಿಜಯನಗರ= ಲಕ್ಷ್ಮೀ ಹೆಬ್ಬಲ್ಕರ್
  • ತುಮಕೂರು= ಕೆ ಎನ್ ರಾಜಣ್ಣ
  • ಚಿತ್ರದುರ್ಗ= ಡಿ ಸುಧಾಕರ
  • ಶಿವಮೊಗ್ಗ= ಮಧು ಬಂಗಾರಪ್ಪ
  • ಹಾಸನ= ಈಶ್ವರ್ ಖಂಡ್ರೆ
  • ಚಿಕ್ಕಮಗಳೂರು= ಪ್ರಿಯಾಂಕ್ ಖರ್ಗೆ
  • ದಾವಣಗೆರೆ= ಎಸ್ ಎಸ್ ಮಲ್ಲಿಕಾರ್ಜುನ
  • ರಾಯಚೂರು= ಎನ್ ಎಸ್  ಬೋಸ್ ರಾಜು
  • ಮೈಸೂರು= ಡಾ.ಎಚ್ ಸಿ ಮಹದೇವಪ್ಪ
  • ಚಾಮರಾಜನಗರ= ದಿನೇಶ್ ಗುಂಡೂರಾವ್
  • ಕೊಡಗು= ವೆಂಕಟೇಶ್
  • ದಕ್ಷಿಣಕನ್ನಡ= ಕೃಷ್ಣ ಬೈರೇಗೌಡ
  • ಉಡುಪಿ= ಡಾ ಜಿ ಪರಮೇಶ್ವರ
  • ಉತ್ತರ ಕನ್ನಡ= ಮಂಕಾಲ್ ವೈದ್ಯ
  • ಧಾರವಾಡ= ಸಂತೋಷ್ ಲಾಡ್

ಇದನ್ನೂ ಓದಿ : Gruhalakshmi Scheme : ಗೃಹಲಕ್ಷೀ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನ : ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ

List of District In-charge Ministers: Which district is the minister in charge: Here is the list of potential ministers

Comments are closed.