Monkey’s Funeral : ಕೋತಿಯ ಅಂತ್ಯಕ್ರಿಯೆ ನೆರವೇರಿಸಿದ ಗ್ರಾಮಸ್ಥರು

ವಿಜಯಪುರ : ಕೆಲವೊಮ್ಮೆ ಮನುಷ್ಯರು ಸಾವನ್ನಪ್ಪಿದ್ರೆ ಅಂತ್ಯಕ್ರೀಯೆ ನೆರವೇರಿಸದೇ ಇರುವ ಜನರು ಇರುವ ಇಂದಿನ ಕಾಲದಲ್ಲಿ, ಇಲ್ಲಿನ ಗ್ರಾಮಸ್ಥರು ಕೋತಿಯ ಮೃತದೇಹವನ್ನು ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ (Monkey’s Funeral) ನೆರವೇರಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಅಲ್ಲದೇ ಶಾರ್ಟ್‌ ಸರ್ಕ್ಯೂಟ್‌ನಿಂದ ಮೃತಪಟ್ಟ ಕೋತಿಗಾಗಿ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ಇರುವ ನ್ಯೂ ಹೈಸ್ಕೂಲ್‌ ಬಳಿ ವಿದ್ಯುತ್‌ ಪರಿವರ್ತಕ ಸ್ಪರ್ಶಿಸಿದ್ದು, ಇದ್ದರಿಂದಾಗಿ ಮರದ ಮೇಲೆ ಕುಳಿತಿದ್ದ ಕೋತಿ ಮೃತಪಟ್ಟಿದೆ. ಅದನ್ನು ನೋಡಿದವರು ಊರಿನ ಜನರಿಗೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸೇರಿ ಮಂಗವನ್ನು ಮರದಿಂದ ತೆಗೆದಿದ್ದಾರೆ. ಆ ಸಮಯದಲ್ಲಿ ಮತ್ತೆ ಉಳಿದ ಇತರೆ ಮಂಗಗಳು ಅಲ್ಲೇ ಕಾವಲು ಕಾಯುತ್ತಿದ್ದು, ಸತ್ತಿರುವ ಮಂಗನನ್ನು ತೆಗೆಯಲು ಕೂಡ ಅವುಗಳು ಬಿಡುತ್ತಿರಲಿಲ್ಲ. ಕೊನೆಯಲ್ಲಿ ಗ್ರಾಮಸ್ಥರು ಸಾಕಷ್ಟು ಪ್ರಯತ್ನಪಟ್ಟು ಕೋತಿ ಮೃತದೇಹವನ್ನು ತೆಗೆದಿದ್ದಾರೆ.

ಮಂಗನ ಮೃತದೇಹವನ್ನು ಮರದಿಂದ ಕೆಳಗೆ ತೆಗೆದ ಗ್ರಾಮಸ್ಥರು ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಾರೆ. ಕೋತಿ ಎನ್ನುವುದು ಹನುಮಂತನ ಸ್ವರೂಪ ಎಂದು ನಂಬಿಕೆ ಇಟ್ಟಿದ್ದು, ಹಾಗಾಗಿ ಸಕಲ ವಿಧಿ ವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ಮಾಡಿಬೇಕೆಂದು ನಿರ್ಧರಿಸಿದ ಹಳ್ಳಿ ಜನರು ಆ ಕೋತಿಯ ಮೃತದೇಹಕ್ಕೆ ಶರ್ಟ್‌ ಪ್ಯಾಂಟ್‌, ಟೋಪಿ ತೊಡಿಸಿದ್ದಾರೆ. ನಂತರ ಒಂದು ಕುರ್ಚಿ ಮೇಲೆ ಕುರಿಸಿ, ಹಾರ, ಕೇಸರಿ ಶಾಲನ್ನೂ ಹಾಕಿದ್ದಾರೆ.

ಇದನ್ನೂ ಓದಿ : Male Mahadeshwara Temple : ಮಲೆ ಮಹದೇಶ್ವರಸ್ವಾಮಿ ದೇವಳದ ಆನೆಗೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆ

ಅಷ್ಟೇ ಅಲ್ಲದೇ ಆ ಕೋತಿಯ ಮೃತದೇಹವನ್ನು ವಾಹನದ ಮೇಲಿಟ್ಟು ವಾದ್ಯ ತಮಟೆಗಳೊಂದಿಗೆ ಮೆರವಣಿಗೆಯ ಮೂಲಕ ಭಜರಂಗದಳದ ಧ್ವಜವನ್ನು ಹಾರಿಸಿದ್ದಾರೆ. ನಿನ್ನೆ ರಾಥ್ರಿಯಡೀ ಮಂಗನ ಮೃತದೇಹದೊಂದಿಗೆ ಜಾಗರಣೆ ಮಾಡಿರುವ ಕಣಕಾಲ ಗ್ರಾಮಸ್ಥರು ಇಂದು ಗ್ರಾಮದ ಪತ್ರಿ ಮಠದ ಬಳಿ ಕೋತಿಗೆ ಸಮಾಧಿ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಮಧ್ಯಾಹ್ನದ ವೇಳೆಗೆ ಅಂತ್ಯ ಸಂಸ್ಕಾರ ಮುಕ್ತಾಯಗೊಳಿಸಿದ್ದಾರೆ.

Monkey’s Funeral: The villagers performed the monkey’s funeral

Comments are closed.