ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ (Indian Coast Guard Recruitment 2023) ಅಧಿಕೃತ ಅಧಿಸೂಚನೆ ಆಗಸ್ಟ್ 2023 ರ ಮೂಲಕ ಇಂಜಿನ್ ಡ್ರೈವರ್, ಎಂಟಿಎಸ್, ಕಾರ್ಪೆಂಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡುವ ಮೊದಲು ಈ ಹುದ್ದೆಗಳಿಗೆ ಅಗತ್ಯವಿರುವ ವಯಸ್ಸಿನ ಮಿತಿ, ವಿದ್ಯಾರ್ಹತೆ ಮತ್ತು ಅನುಭವ ಸೇರಿದಂತೆ ಎಲ್ಲಾ ಅರ್ಹತಾ ಷರತ್ತುಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.
ಭಾರತೀಯ ಕೋಸ್ಟ್ ಗಾರ್ಡ್ ಹುದ್ದೆಯ ಅಧಿಸೂಚನೆಯ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು : ಭಾರತೀಯ ಕೋಸ್ಟ್ ಗಾರ್ಡ್
ಹುದ್ದೆಗಳ ಸಂಖ್ಯೆ : 20 ಹುದ್ದೆಗಳು
ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಯ ಹೆಸರು : ಇಂಜಿನ್ ಡ್ರೈವರ್, ಎಂಟಿಎಸ್, ಕಾರ್ಪೆಂಟರ್
ಸಂಬಳ : ಭಾರತೀಯ ಕೋಸ್ಟ್ ಗಾರ್ಡ್ ನಿಯಮಗಳ ಪ್ರಕಾರ
ವಿದ್ಯಾರ್ಹತೆ ವಿವರ :
ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಥವಾ ಐಟಿಐಯಲ್ಲಿ ಉರ್ತೀಣರಾಗಿರಬೇಕು.
ವಯೋಮಿತಿ ವಿವರ :
ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನಿಂದ ಗರಿಷ್ಠ 30 ವರ್ಷ ವಯಸ್ಸನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ :
OBC (NCL) ಅಭ್ಯರ್ಥಿಗಳು : 03 ವರ್ಷಗಳು
SC/ST ಅಭ್ಯರ್ಥಿಗಳು : 05 ವರ್ಷಗಳು
ಆಯ್ಕೆ ಪ್ರಕ್ರಿಯೆ :
ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳನ್ನು ಅರ್ಜಿಗಳ ಪರಿಶೀಲನೆ, ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಭಾರತೀಯ ಕೋಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ 18-Sep-2023 ರಂದು ಅಥವಾ ಮೊದಲು ಕೆಳಗಿನ ವಿಳಾಸಗಳಿಗೆ ಕಳುಹಿಸಬೇಕಾಗುತ್ತದೆ. ಇದನ್ನೂ ಓದಿ : KVK Gadag Recruitment 2023 : ಗದಗ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪದವೀಧರರಿಗೆ ಉದ್ಯೋಗಾವಕಾಶ, 1 ಲಕ್ಷ ರೂ. ವೇತನ
ಇಂಡಿಯನ್ ಕೋಸ್ಟ್ ಗಾರ್ಡ್ ಆಫ್‌ಲೈನ್ ವಿಳಾಸ ವಿವರ :
ಕೋಲ್ಕತ್ತಾ: ಪ್ರಧಾನ ಕಛೇರಿ, ಕೋಸ್ಟ್ ಗಾರ್ಡ್ ಪ್ರದೇಶ (NE), {CSO(P&A)}, ಸಿಂಥೆಸಿಸ್ ಬ್ಯುಸಿನೆಸ್ ಪಾರ್ಕ್, 6ನೇ ಮಹಡಿ, ಶ್ರಾಚಿ ಬಿಲ್ಡಿಂಗ್, ರಾಜರಹತ್, ನ್ಯೂ ಟೌನ್, ಕೋಲ್ಕತ್ತಾ – 700161
ಚೆನ್ನೈ: ಕಮಾಂಡರ್, ಕೋಸ್ಟ್ ಗಾರ್ಡ್ ಪ್ರದೇಶ (ಪೂರ್ವ), ನೇಪಿಯರ್ ಸೇತುವೆಯ ಹತ್ತಿರ, ಫೋರ್ಟ್ ಸೇಂಟ್ ಜಾರ್ಜ್ (PO), ಚೆನ್ನೈ-600009
ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25 ಜುಲೈ 2023
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18 ಸೆಪ್ಟೆಂಬರ್ 2023
Indian Coast Guard Recruitment 2023 : SSLC, PUC, ITI passers job opportunity, apply immediately