Job News ( ನ್ಯೂಸ್ ನೆಕ್ಸ್ಟ್ ಉದ್ಯೋಗ ) : ಸರ್ಕಾರಿ ಹುದ್ದೆ ಸಿಗುತ್ತೆ ಅಂದ್ರೆ ಬೇಡ ಎನ್ನುವವರು ಯಾರೂ ಇಲ್ಲ. ಅದರಲ್ಲೂ 10ನೇ ತರಗತಿ ಉತ್ತೀರ್ಣ ರಾದವರಿಗೆ ಕೇಂದ್ರ ಸರ್ಕಾರದ ಹುದ್ದೆ ಸಿಗುತ್ತೆ ಅಂದ್ರೆ ಇದಕ್ಕಿಂತ ಜಾಕ್ಪಾಟ್ ಇನ್ನೊಂದು ಏನಿದೆ ಅಲ್ವಾ..? ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಕೇಂದ್ರ ಗುಪ್ತಚರ ಇಲಾಖೆಯು (Central intelligence bureau) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಇದೇ ತಿಂಗಳ 13ನೇ ತಾರೀಖು ಕೊನೆಯ ದಿನಾಂಕವಾಗಿದೆ. ಕೇಂದ್ರ ಇಂಟೆಲಿಜೆನ್ಸ್ ಬ್ಯುರೋದಿಂದ ಎಸ್ಎಸ್ಎಲ್ಸಿ ಪಾಸಾದವರಿಗೆ ಭದ್ರತಾ ಸಹಾಯಕ, ಮೋಟಾರ್ ಟ್ರಾನ್ಸ್ಪೋರ್ಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಸದಾವಕಾಶವನ್ನು ಬಳಸಿಕೊಂಡು ಈ ಹುದ್ದೆಗಿಟ್ಟಿಸಿಕೊಳ್ಳಬಹುದಾಗಿದೆ.

ಕೇಂದ್ರ ಗುಪ್ತಚರ ಇಲಾಖೆಯು ಒಟ್ಟು 677 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇಂದ್ರ ಗುಪ್ತಚರ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಧಿಕೃತ ವೆಬ್‌ಸೈಟ್ mha.gov.in ಅಥವಾ www.ncs.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?
ಇನ್ನು ಕೇಂದ್ರ ಗುಪ್ತಚರ ಇಲಾಖೆ ಆಹ್ವಾನಿಸಿರುವ ಹುದ್ದೆಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಭದ್ರತಾ ಸಹಾಯಕ ಅಥವಾ ಮೋಟಾರ್ ಸಾರಿಗೆ : ಈ ವಿಭಾಗದಲ್ಲಿ ಕೇಂದ್ರ ಗುಪ್ತಚರ ಇಲಾಖೆಯು ಒಟ್ಟು 362 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್ಎಸ್ಎಲ್ಸಿ ಪಾಸಾದವರು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಮಲ್ಟಿ ಟಾಸ್ಕಿಂಗ್ ಸ್ಟಾಫ್ / ಜನರಲ್ : ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಒಟ್ಟೂ 315 ಮಲ್ಟಿ ಟಾಸ್ಕಿಂಗ್ ಸ್ಟಾಫ್/ಜನರಲ್ ಹುದ್ದೆ ಖಾಲಿ ಇದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇದರ ಲಾಭವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ : ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ನೇಮಕಾತಿ : 1720 ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು ?
ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ ಪಾಸ್ ಆಗಿರುವ ಬಗ್ಗೆ ಅಂಕಪಟ್ಟಿಯನ್ನು ಸಲ್ಲಿಸಬೇಕು. ಈ ಅಂಕಪಟ್ಟಿಯು ಮಾನ್ಯತೆ ಪಡೆದ ಮಂಡಳಿಯಿಂದಲೇ ನೀಡಿದ್ದಾಗಿರಬೇಕು. ಇದಕ್ಕೆ ತತ್ಸಮಾನ ವ್ಯಾಸಂಗ ಮಾಡಿದವರೂ ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹರಾಗಿರುತ್ತಾರೆ.

ಇನ್ನುಳಿದಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ತನ್ನ ವಾಸ ಸ್ಥಳದ ಪ್ರಮಾಣಪತ್ರವನ್ನೂ ಸಹ ಸಲ್ಲಿಸಬೇಕು. ಅಭ್ಯರ್ಥಿಗೆ ಮೋಟಾರ್ ಮೆಕ್ಯಾನಿಸಂ ಬಗ್ಗೆ ಕನಿಷ್ಠ ಜ್ಞಾನ ಇರಬೇಕು. ಜೊತೆಯಲ್ಲಿ ಚಾಲನಾ ಪರವಾನಿಗೆ ಹೊಂದಿರಬೇಕು ಹಾಗೂ 1 ವರ್ಷಗಳ ಕಾಲ ವಾಹನ ಚಾಲನೆ ಮಾಡಿದ ಅನುಭವ ಹೊಂದಿರಬೇಕು.
ಇದನ್ನೂ ಓದಿ : ಬಡವರಿಗೆ ಮನೆಗಳನ್ನು ನಿರ್ಮಿಸಿ ಮಾದರಿ ಆಯ್ತು ಬೈರಂಪಳ್ಳಿಯ ಶ್ರಮಿಕ ತರುಣರ ತಂಡದ ಕಾರ್ಯ
ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 50 ರೂಪಾಯಿ ಪರೀಕ್ಷಾ ಶುಲ್ಕ ಪಾವತಿ ಮಾಡಬೇಕು. ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ಶುಲ್ಕ 450 ರೂಪಾಯಿ ಆಗಿರುತ್ತದೆ ಎಂದು ಕೇಂದ್ರ ಗುಪ್ತಚರ ಇಲಾಖೆ ತಿಳಿಸಿದೆ.ಇಂಟರ್ನೆಟ್ ಬ್ಯಾಂಕಿಂಗ್ , ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿ ಮಾಡಬಹುದು.
intelligence bureau jobs hiring more than 600 post just qualify sslc