ದೇಶದ ಪ್ರಮುಖ ತೈಲ ಸರಬರಾಜು ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 1720 ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಟೆಕ್ನಿಷಿಯನ್ ಅಪ್ರೆಂಟಿಸ್ ಮತ್ತು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, 21 ರಿಂದ 27 ವರ್ಷ ವಯಸ್ಸಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯ ಮೂಲಕ 1720 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ.

ಐಒಸಿಎಲ್ ನೇಮಕಾತಿಗೆ ಅಕ್ಟೋಬರ್ 21, 2023 ರಂದು ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆನ್‌ಲೈನ್‌ನಲ್ಲಿ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 20, 2023 ಕೊನೆಯ ದಿನವಾಗಿದೆ. ಹೀಗಾಗಿ ಕೊನೆಯ ದಿನಾಂಕಕ್ಕೂ ಮೊದಲೇ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಹಾಗಾದ್ರೆ ಅರ್ಜಿ ಸಲ್ಲಿಸುವುದು ಹೇಗೆ ? ಯಾವೆಲ್ಲಾ ದಾಖಲೆಗಳು ಬೇಕು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ಪದವೀಧರರಿಗೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಉದ್ಯೋಗಾವಕಾಶ, 50 ಸಾವಿರಕ್ಕೂ ಅಧಿಕ ವೇತನ
IOCL ನೇಮಕಾತಿ 2023 : ಮಾನದಂಡಗಳು
IOCL ಅಪ್ರೆಂಟಿಸ್‌ಶಿಪ್‌ಗೆ ಅರ್ಹರಾಗಲು ಅಭ್ಯರ್ಥಿಗಳು ನಿರ್ದಿಷ್ಟ ವಯಸ್ಸು ಮತ್ತು ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 24 ವರ್ಷಗಳು.
IOCL ನೇಮಕಾತಿ 2023 : ಶೈಕ್ಷಣಿಕ ಅರ್ಹತೆ
ನೀವು ಅರ್ಜಿ ಸಲ್ಲಿಸುತ್ತಿರುವ ನಿರ್ದಿಷ್ಟ ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಬದಲಾಗುತ್ತದೆ. ವಿವರವಾದ ಅರ್ಹತಾ ಮಾನದಂಡಗಳಿಗಾಗಿ, ಅಧಿಕೃತ IOCL ಅಧಿಸೂಚನೆ PDF ಅನ್ನು ಓದಬಹುದು.
IOCL ಅಪ್ರೆಂಟಿಸ್‌ಶಿಪ್ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ : IOCL ಆಸಕ್ತ ತಂತ್ರಜ್ಞರು ಮತ್ತು ಟ್ರೇಡ್ ಅಪ್ರೆಂಟಿಸ್‌ಗಳಿಗಾಗಿ ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ.

IOCL ನೇಮಕಾತಿ 2023 : ಅರ್ಜಿ ಸಲ್ಲಿಸಲು ಕ್ರಮಗಳು:
ಹಂತ 1: ಅಧಿಕೃತ IOCL ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು “ಅಪ್ರೆಂಟಿಸ್ ಕಾಯಿದೆಯಡಿಯಲ್ಲಿ 1720 ಟ್ರೇಡ್ / ಟೆಕ್ನಿಷಿಯನ್ / ಅಪ್ರೆಂಟಿಸ್ ನೇಮಕಾತಿಗಾಗಿ ಅಧಿಸೂಚನೆ” ಲಿಂಕ್ ಅನ್ನು ಕ್ಲಿಕ್ ಮಾಡಿ.
ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ : 37900 ರೂ. ವೇತನ, ಇಂದೇ ಅರ್ಜಿ ಸಲ್ಲಿಸಿ
ಹಂತ 2: ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಪ್ರವೇಶಿಸಿ
ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆಯುತ್ತದೆ. ಇಲ್ಲಿ, “ಆನ್‌ಲೈನ್ ಅಪ್ಲಿಕೇಶನ್” ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯವಿರುವ ಎಲ್ಲಾ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
ಹಂತ 4: ನಿಮ್ಮ ಅರ್ಜಿಯನ್ನು ಪರಿಶೀಲಿಸಿ
IOCL ಅಪ್ರೆಂಟಿಸ್‌ಶಿಪ್ ಅರ್ಜಿಯನ್ನು ಸಲ್ಲಿಸುವ ಮೊದಲು, ದಯವಿಟ್ಟು ನೀವು ಒದಗಿಸಿದ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ಹಂತ 5: ನಂತರದಲ್ಲಿ ನಿಮ್ಮ ಅರ್ಜಿಯನ್ನು ಸೇವ್ ಮಾಡಿಕೊಂಡು, ನಂತರ ಡೌನ್‌ಲೋಡ್ ಮಾಡಿಕೊಳ್ಳಿ. ನಂತರದಲ್ಲಿ ನಿಮ್ಮ ಅಪ್ಲಿಕೇಶನ್‌ನ ಮುದ್ರಣವನ್ನು ತೆಗೆದುಕೊಳ್ಳಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಡೌನ್‌ಲೋಡ್ ಮಾಡಿ.
IOCL Recruitment 2023: Apply For 1720 Various Post Before Last Date