ಫೆ. 26ರಂದು ದುಬೈ ಕನ್ನಡಿಗರಿಗೆ ಉದ್ಯೋಗ ಮೇಳ, ಕಾರ್ಯಗಾರ

ಅಬುಧಾಬಿ : ಬದುಕು ಕಟ್ಟಿಕೊಳ್ಳಲು ಯುಎಇ ಗೆ ಕೆಲಸ ಅರಸಿ ಬರುವ ಕನ್ನಡಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಮ್ಮೆಯ ಯುಎಇ ಕನ್ನಡಿಗರು ತಂಡ ದುಬೈ ಕನ್ನಡಿಗರಿಗಾಗಿ ಝೂಮ್ ಮೀಟ್ ಮೂಲಕ ಉದ್ಯೋಗ ಮೇಳ ಹಾಗು ಉಚಿತ ಇಂಟರ್ವ್ಯೂ ಕಾರ್ಯಾಗಾರ ಆಯೋಜಿಸಿದೆ.

ಫೆಬ್ರವರಿ 26ರಂದು ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಾಗಾರದಲ್ಲಿ ಯುಎಇಗೆ ಕೆಲಸ ಅರಸಿ ಬರುವವರಿಗೆ ಉದ್ಯೋಗ ಒದಗಿಸುವುದು, ಒಂದೊಮ್ಮೆ ಅರಬ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬೇರೊಂದು ಕೆಲಸಕ್ಕೆ ಸೂಕ್ತ ನಿರ್ದೇಶನ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೇ ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಸಂದರ್ಶನ ಹೇಗೆ ಎದುರಿಸಬೇಕು, ಯಾವ ಸ್ಥಳಗಳಲ್ಲಿ ಉದ್ಯೋಗ ಅರಸಬೇಕು, ಸಿವಿಯನ್ನು ಹೇಗೆ ಸಿದ್ದಪಡಿಸಬೇಕು ಅನ್ನುವ ಕುರಿತು ನುರಿತ ತಜ್ಞರಿಂದ ಮಾಹಿತಿಯನ್ನು ನೀಡಲಾಗುತ್ತದೆ.

ಯುಎಇಯಲ್ಲಿ ಉದ್ಯೋಗವನ್ನು ಪಡೆಯಲು ಆಸಕ್ತರಾದವರು ಉಚಿತವಾಗಿರುವ ಉದ್ಯೋಗ ಮೇಳ ಹಾಗೂ ಕಾರ್ಯಾಗಾರದಲ್ಲಿ ಭಾಗಿಯಾಗಬಹುದಾಗಿದೆ ಎಂದು ಹೆಮ್ಮೆಯ ಯುಎಇ ತಂಡದ ಅಧ್ಯಕ್ಷರಾದ ಮಮತಾ ಮೈಸೂರು, ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮುಖ್ಯ ಕಾರ್ಯದರ್ಶಿಗಳಾದ ಸೆಂಥಿಲ್ ಬೆಂಗಳೂರು, ಹಾಗೂ ಪ್ರಧಾನ ಸಂಚಾಲಕರಾದ ರಫೀಕಲಿ ಕೊಡಗು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವೃತ್ತಿ ಮಾರ್ಗದರ್ಶಕರಾಗಿ ಅಲ್ ಐನ್ ಜೂನಿಯರ್ ಸ್ಕೂಲ್ ವ್ಯಕ್ತಿತ್ವ ವಿಕಸನ ವಿಭಾಗದ ಮುಖ್ಯಸ್ಥರಾದ ಉಮ್ಮರ್ ಫಾರೂಕ್, ಪಾನ್ ವರ್ಲ್ಡ್ ಎಜುಕೇಶನ್ ನಿರ್ದೇಶಕರಾದ ರಾಘವೇಂದ್ರ, ವೃತ್ತಿ ಮಾರ್ಗದರ್ಶಕ ತಜ್ಞರು ಮೋಟಿವೇಷನಲ್ ಮಾತುಗಾರರು ಆದ ಗುರು ನಾಡಕರ್ಣಿ ಮತ್ತು ಎಚ್ ಆರ್ ಎಕ್ಸಿಕ್ಯೂಟಿವ್ ಶ್ರೀಮತಿ ರಾಧಾ ಜೀವನ್ ಅವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಜಾಬ್ ವಿಭಾಗದ ಸಂಚಾಲಕರಾದ ಶ್ರೀಯುತ ನವೀನ್ ಅವರು ನೆರವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂಡದ ಪ್ರಮುಖ ಸಮಿತಿ ಸದಸ್ಯರಾದ ಮಮತಾ ಶಾರ್ಜಾ , ಡಾಕ್ಟರ್ ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಪಲ್ಲವಿ ದಾವಣಗೆರೆ, ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ, ಅನಿತಾ ಬೆಂಗಳೂರು ಮತ್ತು ಉಪಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

Comments are closed.