ಅಬಕಾರಿ ಇಲಾಖೆ ನೇಮಕಾತಿ 2023 : ಕಾನ್ಸ್ಟೇಬಲ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಕಾನ್ಸ್ಟೇಬಲ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ (Karnataka Excise Department Recruitment 2023) ಅರ್ಹ ಮತ್ತು ಆಸಕ್ತ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.

ಈ ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸಂಬಂಧಪಟ್ಟಂತೆ ಬೇಕಾಗುವ ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕಾಗಿದೆ.

ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿಯ ಸಂಪೂರ್ಣ ವಿವರ :
ಇಲಾಖೆ ಹೆಸರು : ಕರ್ನಾಟಕ ಅಬಕಾರಿ ಇಲಾಖೆ (Karnataka Excise Department)
ಪೋಸ್ಟ್‌ಗಳ ಸಂಖ್ಯೆ : 1100 ಹುದ್ದೆಗಳು
ಹುದ್ದೆಯ ಹೆಸರು : ಕಾನ್ಸ್ಟೇಬಲ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್

ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿವರ :
ಕಾನ್ಸ್ಟೇಬಲ್ : 1000 ಹುದ್ದೆಗಳು
ಸಬ್ ಇನ್ಸ್‌ಪೆಕ್ಟರ್ : 100 ಹುದ್ದೆಗಳು

ಶೈಕ್ಷಣಿಕ ಅರ್ಹತೆ ವಿವರ :
ಕರ್ನಾಟಕ ಅಬಕಾರಿ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ ಹಾಗೂ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.

ಸಂಬಳ ವಿವರ :
ಅಬಕಾರಿ ಪೇದೆ ಹುದ್ದೆಗೆ : ರೂ. 21400 – 42000/-
ಅಬಕಾರಿ ನಿರೀಕ್ಷಕರು ಹುದ್ದೆಗೆ : ರೂ. 37900 – 70850/-

ಕರ್ನಾಟಕ ರಾಜ್ಯ ಸರಕಾರವು ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1100 ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಕುರಿತು ಅಬಕಾರಿ ಇಲಾಖೆ ಸಚಿವ ಕೆ.ಗೋಪಾಲಯ್ಯ ಮಾಹಿತಿ ನೀಡಿದ್ದಾರೆ. ರಾಜ್ಯ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಂಡುವ ಅಬಕಾರಿ ಇಲಾಖೆಯ ಬಲವರ್ಧನೆ ಸರಕಾರ ಪ್ರಾಧ್ಯಾತೆ ನೀಡಿದೆ. ಈ ವರ್ಷ 29000 ಕೋಟಿ ರೂ ಆದಾಯ ಗುರಿ ನೀಡಿದ್ದು, ಈವರೆಗೆ 19897 ಕೋಟಿ ರೂ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 17225 ಕೋಟಿ ರೂ. ಸಂಗ್ರಹವಾಗಿತ್ತು ಎಂದು ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಹೊಸ ಮದ್ಯ ತಯಾರಿಕೆಗೆ ಉದ್ಯಮಿಗಳು ಮುಂದೆ ಬಂದರೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅನುಮೋದನೆ ನೀಡುತ್ತೇವೆ. ಇದ್ದರಿಂದ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ. ಹಳ್ಳಿಗಳ ಸಣ್ಣಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ದೂರುಗಳಿವೆ. ಕೆಲ ಶಾಕರು ಕೂಡ ಈ ವಿಷಯ ಗಮನ ತಂದಿದ್ದಾರೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು ರೈಲ್ವೆ ನೇಮಕಾತಿ : ಎಸ್‌ಎಸ್‌ಎಲ್‌ಸಿ ಪಾಸ್‌ ಆದವರಿಗೆ ಉದೋಗ್ಯಾವಕಾಶ

ಇದನ್ನೂ ಓದಿ : KMF Shimul Recruitment 2023 : ಕೆಎಮ್‌ಎಫ್‌ನಲ್ಲಿ ಉದ್ಯೋಗಾವಕಾಶ

ಇದನ್ನೂ ಓದಿ : ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ

Karnataka Excise Department Recruitment 2023 : Excise Department Recruitment 2023 : Applications invited for the posts of Constable, Sub Inspector

Comments are closed.