(KIMS Hubballi Recruitment)ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುಬ್ಬಳ್ಳಿಯಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 12 , 2022 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
(KIMS Hubballi Recruitment)ಹುದ್ದೆಯ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು : ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ
ಹುದ್ದೆಯ ಹೆಸರು : ಕ್ಯಾಶುವಾಲಿಟಿ ಮೆಡಿಕಲ್ ಆಫೀಸರ್, ಜೂನಿಯರ್ ರಿಸರ್ಚ್ ಫೆಲೋ
ಹುದ್ದೆಯ ಸಂಖ್ಯೆ:12
ಉದ್ಯೋಗ ಸ್ಥಳ :ಹುಬ್ಬಳ್ಳಿ
ವೇತನ: 30000 ರಿಂದ 100000 ರೂ.ಪ್ರತಿ ತಿಂಗಳು
ಹುದ್ದೆಯ ವಿವರ:
ಪ್ರೊಫೆಸರ್: 1
ಅಸೋಸಿಯೇಟ್ ಪ್ರೊಫೆಸರ್ :1
ಸಹಾಯಕ ಪ್ರಾಧ್ಯಾಪಕ: 2
ಅಪಘಾತ ವೈದ್ಯಕೀಯ ಅಧಿಕಾರಿ/GDMO: 3
ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್: 2
ಶ್ರವಣಶಾಸ್ತ್ರಜ್ಞ :2
ಜೂನಿಯರ್ ರಿಸರ್ಚ್ ಫೆಲೋ :1
ವಿದ್ಯಾರ್ಹತೆ ವಿವರ:
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು B.Sc, M.Sc, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
ಆಯ್ಕೆ ವಿಧಾನ:
ಅರ್ಹ ಅಭ್ಯಥಿಗಳನ್ನು ಸಂದರ್ಶನ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು: 500 ರೂ.
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ತಮ್ಮ ಅರ್ಜಿಯ ನಿಗದಿತ ನಮೂನೆಯೊಂದಿಗೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಈ ಸಂಸ್ಥೆಯ ಇ-ಮೇಲ್ ಐಡಿ, drmanjud@gmail.com ಗೆ ದಿನಾಂಕ 10-12-2022 ಮೊದಲು ಕಳುಹಿಸಬೇಕು.
ಇಲ್ಲವಾದಲ್ಲಿ ಅರ್ಜಿದಾರರು ಅರ್ಜಿ ನಮೂನೆಯೊಂದಿಗೆ ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಡಾ. ಮಂಜುನಾಥ್ ಡಿ, ಕೊಠಡಿ 60-ಹೊರರೋಗಿ ವಿಭಾಗ, ಇಎನ್‌ಟಿ ವಿಭಾಗ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ – 580021 ಈ ಅಡ್ರೆಸ ಗೆ ರಿಜಿಸ್ಟರ್ ಪೋಸ್ಟ್ ಮೂಲಕ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿಯನ್ನು ಡಿಸೆಂಬರ್ 11,2022 ರ ಮೊದಲು ಕಳುಹಿಸಬೇಕು.
ಇದನ್ನೂ ಓದಿ:NITM Recruitment 2022:ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ
ಇದನ್ನೂ ಓದಿ:Recruitment 2022:ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್ ಐಡಿ, ಮೊಬೈಲ್ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ)ದಿನಾಂಕ 12-12- 2022 ರಂದು 10.30 ಗಂಟೆಗೆ ನಿರ್ದೇಶಕರ ಕಚೇರಿ, ಆಡಳಿತಾತ್ಮಕ ಬ್ಲಾಕ್, ಕಿಮ್ಸ್ ಹುಬ್ಬಳ್ಳಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಪ್ರಮುಖ ದಿನಾಂಕ:
ಇಮೇಲ್ ಐಡಿ ಮೂಲಕ ಅರ್ಜಿಯನ್ನು ಕಳುಹಿಸಲು ಕೊನೆಯ ದಿನಾಂಕ: 10-ಡಿಸೆಂಬರ್-2022
ಅರ್ಜಿಯ ಹಾರ್ಡ್ ಪ್ರತಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 11-ಡಿಸೆಂಬರ್-2022
ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗುವ ದಿನಾಂಕ:12-ಡಿಸೆಂಬರ್-2022
KIMS Hubballi Recruitment Job Vacancy at KIMS, Hubli : Direct Interview