Volkswagen Tiguan : ಫೋಕ್ಸ್‌ವ್ಯಾಗನ್‌ ಎಕ್ಸ್‌ಕ್ಲೂಸಿವ್‌ ಎಡಿಷನ್‌ ಟಿಗಾನ್‌ ಅನಾವರಣ

ಆಟೋಮೊಬೈಲ್ ದೈತ್ಯ ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್‌ ಇಂಡಿಯಾ, ಭಾರತದಲ್ಲಿ ತನ್ನ ಟಿಗಾನ್ ಎಕ್ಸ್‌ಕ್ಲೂಸಿವ್ ಎಡಿಷನ್‌ (Volkswagen Tiguan) ಅನ್ನು ಬಿಡುಗಡೆ ಮಾಡಿದೆ. ಫೋಕ್ಸ್‌ವ್ಯಾಗನ್ ಇದನ್ನು 33.50 ಲಕ್ಷ ರೂ. (ಎಕ್ಸ್‌ ಶೋ ರೂಂ.) ಗೆ ಬಿಡುಗಡೆ ಮಾಡಿದೆ. ಇದು ಕಾರಿನ ಹೊರಗಡೆ ಮತ್ತು ಒಳಗಡೆ ಎರಡೂ ಕಡೆ ಕಾಸ್ಮೆಟಿಕ್‌ ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ಕಾರು ಓರಿಕ್ಸ್ ವೈಟ್ ಮತ್ತು ಪ್ಯೂರ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ದೊರಯಲಿದೆ. ಕಂಪನಿಯು ಟಿಗಾನ್‌ನ ಎಕ್ಸ್‌ಕ್ಲೂಸಿವ್‌ ಆವೃತ್ತಿಗೆ ಬುಕಿಂಗ್‌ ಅನ್ನು ತೆರೆದಿದೆ.

ಈಗ ಬಿಡುಗಡೆಯಾಗಿರು ಫೋಕ್ಸ್‌ವ್ಯಾಗನ್‌ ನ ಟಿಗಾನ್ 2.0-ಲೀಟರ್ ಸಾಮರ್ಥ್ಯದ ಟರ್ಬೋಚಾರ್ಜ್ಡ್ TSI ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 187 bhp ಮತ್ತು 320 Nm ಪೀಕ್ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಇದರ ಮೋಟಾರು 4MOTION ಆಲ್-ವೀಲ್ ಡ್ರೈವ್ ತಂತ್ರಜ್ಞಾನ ಹೊಂದಿದೆ. ಇದನ್ನುಸೆವನ್‌–ಸ್ಪೀಡ್‌ DSG ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ವಾಹನ ತಯಾರಕರ ಪ್ರಕಾರ, ಈ ಕಾರಿನ ಇಂಧನ ದಕ್ಷತೆಯು 12.65 kmpl (ARAI) ಆಗಿದೆ. ಈ SUV ಕಾರು ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ESC, ಆಂಟಿ-ಸ್ಲಿಪ್ ನಿಯಂತ್ರಣ, EDL, ಹಿಲ್ ಸ್ಟಾರ್ಟ್ ಅಸಿಸ್ಟ್, TPMS ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಇದರಲ್ಲಿ ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಇರುವ ಸೀಟ್‌ಬೆಲ್ಟ್‌ಗಳು ಮತ್ತು ಮಕ್ಕಳ ಆಸನಗಳಿಗೆ ISOFIX ಆಂಕಾರೇಜ್ ಮತ್ತು ಡ್ರೈವರ್ ಅಲರ್ಟ್ ಸಿಸ್ಟಮ್‌ಗಳನ್ನು ಜೋಡಿಸಲಾಗಿದೆ.

ಟೆಕ್-ಆಧಾರಿತ SUV ಕಾರು ಐಕ್ಯೂ ಜೊತೆಗೆ ಅಡಾಪ್ಟಿವ್ LED ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳೊಂದಿಗೆ ಬರುತ್ತದೆ. ಲೈಟ್‌ಗಳು, ಗೆಸ್ಚರ್ ಕಂಟ್ರೋಲ್‌, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಜೊತೆಗೆ ಇಲ್ಯುಮಿನೇಟೆಡ್ ಸ್ಕಫ್ ಪ್ಲೇಟ್‌ಗಳು, ಯುಎಸ್‌ಬಿ ಸಿ-ಪೋರ್ಟ್‌ಗಳು, ವಿಯೆನ್ನಾ ಲೆದರ್ ಸೀಟ್‌ಗಳು, ಸಾಫ್ಟ್ ಟಚ್ ಡ್ಯಾಶ್‌ಬೋರ್ಡ್, ಆಂಬಿಯೆಂಟ್ ಲೈಟಿಂಗ್, ಮೂರು ವಲಯದ ಕ್ಲೈಮ್ಯಾಟ್ರೋನಿಕ್ ಹವಾನಿಯಂತ್ರಣ ವ್ಯವಸ್ಥೆ ಮತ್ತು ಒಂದು ವಿಹಂಗಮ ಸನ್‌ರೂಫ್. 18-ಇಂಚಿನ ಸೆಬ್ರಿಂಗ್ ಸಿಲ್ವರ್ ಫಿನಿಶ್ಡ್ ಅಲಾಯ್ ಚಕ್ರಗಳು ಮತ್ತು ಇದು ಡೈನಾಮಿಕ್ ಹಬ್‌ಕ್ಯಾಪ್‌ಗಳು ಇದರಲ್ಲಿದೆ.

ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಫೋಕ್ಸ್‌ವ್ಯಾಗನ್ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಆಶಿಶ್ ಗುಪ್ತಾ, “ಫೋಕ್ಸ್‌ವ್ಯಾಗನ್ ಟಿಗಾನ್ ನಮ್ಮ ಜಾಗತಿಕ ಬೆಸ್ಟ್ ಸೆಲ್ಲರ್ ಆಗಿದ್ದು, ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ. ಟಿಗಾನ್‌ನಲ್ಲಿ ‘ಎಕ್ಸಕ್ಲೂಸಿವ್‌ ಎಡಿಷನ್‌’ ಅನ್ನು ಹೆಚ್ಚುವರಿ ವಿನ್ಯಾಸ ಮತ್ತು ಅಲ್ಟಿಮೇಟ್ರಿಯನ್ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲು ನಾವು ಸಂತೋಷಪಡುತ್ತೇವೆ, ಅದು ಕಾರಿನ ಪೀಲ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Honda Cars : ಹೊಂಡಾ ಕಾರು ಖರೀದಿಸುವವರಿಗೆ ಸಿಹಿ ಸುದ್ದಿ; 72,340 ರೂ.ಗಳ ವರಗೆ ಭಾರಿ ಡಿಸ್ಕೌಂಟ್‌ ಘೋಷಣೆ

ಇದನ್ನೂ ಓದಿ : Upcoming SUVs : ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ 6 SUV ಕಾರುಗಳು

(Volkswagen Tiguan exclusive edition launched in India)

Comments are closed.