Human Sacrifice: ಉತ್ತರ ಪ್ರದೇಶದಲ್ಲಿ ರುಂಡವಿಲ್ಲದ ಮೃತದೇಹ ಪತ್ತೆ: ನರಬಲಿಗಾಗಿ ನಡೆಯಿತೇ 3 ವರ್ಷದ ಬಾಲಕನ ಭೀಕರ ಹತ್ಯೆ..?

ಉತ್ತರ ಪ್ರದೇಶ: Human Sacrifice: ಯೋಗಿ ನಾಡು ಉತ್ತರಪ್ರದೇಶದಲ್ಲಿ ಮೂಢನಂಬಿಕೆಗಳಿಗೆ ಹಲವಾರು ಜೀವಗಳು ಬಲಿಯಾಗುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ರುಂಡವಿಲ್ಲದ ಬಾಲಕನ ಮೃತದೇಹವೊಂದು ಪತ್ತೆಯಾಗಿದ್ದು, ನರಬಲಿ ಪ್ರಕರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನವೆಂಬರ್ 30ರಂದು 3 ವರ್ಷದ ಬಾಲಕನನ್ನು ಪ್ರೀತ್ ವಿಹಾರ್ ನಲ್ಲಿರುವ ಆತನ ಮನೆಯಿಂದ ಅಪಹರಿಸಲಾಗಿದೆ ಬಳಿಕ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೀರತ್ ನ ಹೊಲವೊಂದರಲ್ಲಿ ರುಂಡವಿಲ್ಲದ ಬಾಲಕನ ಶವ ಪತ್ತೆಯಾಗಿತ್ತು. ನರಬಲಿಗಾಗಿಯೇ ಆತನನ್ನು ಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಚೋರಿ ಠಾಣಾ ವ್ಯಾಪ್ತಿಯ ನಂಗ್ಲಿಶಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Bengaluru Crime: ಬೆಂಗಳೂರು : ಯುವಕನ ಕತ್ತು ಸೀಳಿ ಬರ್ಬರ ಹತ್ಯೆ

ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೆ ಪ್ರಕರಣದಲ್ಲಿ ಬಾಲಕನ ನೆರೆಮನೆಯ ವ್ಯಕ್ತಿಯದ್ದೇ ಕೈವಾಡವಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ ಜಗತ್ಪುರಿ ನಿವಾಸಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಬಾಲಕನನ್ನು ಕೊಲೆಗೈದು ಮೀರತ್ ನ ಕಬ್ಬಿನ ಗದ್ದೆಯೊಂದರಲ್ಲಿ ಮೃತದೇಹವನ್ನು ಎಸೆದಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಸದ್ಯ ಮೀರತ್ ಗದ್ದೆಯಲ್ಲಿ ರುಂಡ, ಕೈ-ಕಾಲು ಇಲ್ಲದ ದೇಹವನ್ನು ಸ್ಥಳೀಯ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನು ಅಲ್ಲೇ ಸಮೀಪದಲ್ಲಿ ತಲೆಯ ಭಾಗ ಕೂಡಾ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಆ ಮೃತದೇಹಕ್ಕಿದ್ದ ಬಟ್ಟೆಗಳ ಆಧಾರದ ಮೇಲೆ, ಮೃತದೇಹವು ಪ್ರೀತ್ ವಿಹಾರ್ ನಲ್ಲಿ ಕಾಣೆಯಾಗಿದ್ದ ಬಾಲಕನದ್ದು ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಮೀರತ್ ಪೊಲೀಸರು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ: M-K border dispute: ಮಹಾರಾಷ್ಟ್ರದಲ್ಲಿ ಬಣ ಬಡಿದಾಟ: ಕರ್ನಾಟಕದ ಗಡಿ ಭಾಗದ ಜನರು ಹೈರಾಣು

ಅತ್ತ ಬಾಲಕನ ಭೀಕರ ಹತ್ಯೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆತನ ಕುಟುಂಬಸ್ಥರು ಹಾಗೂ ಸ್ಥಳೀಯ ಜನರು ಪ್ರೀತ್ ವಿಹಾರ್ ಪ್ರದೇಶದಲ್ಲಿ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಬಾಲಕನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆಯಿತು.

Human Sacrifice: Headless body of 3-year-old found in UP’s Meerut and police suspected human sacrifice

Comments are closed.