ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯು ನೇಮಕಾತಿ (KSHD Recruitment 2023) ಅಧಿಕೃತ ಅಧಿಸೂಚನೆ ಮೇ 2023 ಮೂಲಕ ಸಹಾಯಕ ತೋಟಗಾರಿಕಾ ಅಧಿಕಾರಿ, ತೋಟಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ (KSHD)
ಹುದ್ದೆಗಳ ಸಂಖ್ಯೆ : 5465 ಹುದ್ದೆಗಳು
ಉದ್ಯೋಗ ಸ್ಥಳ : ಕರ್ನಾಟಕ
ಹುದ್ದೆಯ ಹೆಸರು : ಸಹಾಯಕ ತೋಟಗಾರಿಕಾ ಅಧಿಕಾರಿ, ತೋಟಗಾರ
ವೇತನ : ರೂ.17000-104600/- ಪ್ರತಿ ತಿಂಗಳು
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿವರ :
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : 256 ಹುದ್ದೆಗಳು
- ಸಹಾಯಕ ತೋಟಗಾರಿಕೆ ನಿರ್ದೇಶಕರು : 475 ಹುದ್ದೆಗಳು
- ಸಹಾಯಕ ತೋಟಗಾರಿಕೆ ಅಧಿಕಾರಿ : 1136 ಹುದ್ದೆಗಳು
- ತೋಟಗಾರಿಕೆ ಸಹಾಯಕ : 926 ಹುದ್ದೆಗಳು
- ಪ್ರಥಮ ದರ್ಜೆ ಸಹಾಯಕರು : 311 ಹುದ್ದೆಗಳು
- ಸ್ಟೆನೋಗ್ರಾಫರ್ : 11 ಹುದ್ದೆಗಳು
- ಎರಡನೇ ದರ್ಜೆ ಸಹಾಯಕರು (SDA) : 271 ಹುದ್ದೆಗಳು
- ಡೇಟಾ ಎಂಟ್ರಿ ಸಹಾಯಕ : 58 ಹುದ್ದೆಗಳು
- ವಾಹನ ಚಾಲಕರು : 87 ಹುದ್ದೆಗಳು
- ಲ್ಯಾಬ್ ಸಹಾಯಕ : 13 ಹುದ್ದೆಗಳು
- ಜೇನುಸಾಕಣೆ ಸಹಾಯಕರು : 20 ಹುದ್ದೆಗಳು
- ಪ್ಯೂನ್ : 98 ಹುದ್ದೆಗಳು
- ತೋಟಗಾರ : 1774 ಹುದ್ದೆಗಳು
- ಕಾವಲುಗಾರ : 29 ಹುದ್ದೆಗಳು
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿದ್ಯಾರ್ಹತೆ ವಿವರ :
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ : ಬಿ.ಎಸ್ಸಿ, ಸ್ನಾತಕೋತ್ತರ ಪದವಿ
- ಸಹಾಯಕ ತೋಟಗಾರಿಕೆ ನಿರ್ದೇಶಕರು : ಬಿ.ಎಸ್ಸಿ, ಸ್ನಾತಕೋತ್ತರ ಪದವಿ
- ಸಹಾಯಕ ತೋಟಗಾರಿಕೆ ಅಧಿಕಾರಿ ಬಿ : ಬಿ.ಎಸ್ಸಿ, ಸ್ನಾತಕೋತ್ತರ ಪದವಿ
- ತೋಟಗಾರಿಕೆ ಸಹಾಯಕ : ಬಿ.ಎಸ್ಸಿ, ಸ್ನಾತಕೋತ್ತರ ಪದವಿ
- ಪ್ರಥಮ ದರ್ಜೆ ಸಹಾಯಕರ : ಪದವಿ
- ಸ್ಟೆನೋಗ್ರಾಫರ್ : ಪಿಯುಸಿ
- ದ್ವಿತೀಯ ದರ್ಜೆ ಸಹಾಯಕರು (ಎಸ್ ಡಿಎ) : ಎಸ್ ಎಸ್ ಎಲ್ ಸಿ, ಪಿಯುಸಿ
- ಡೇಟಾ ಎಂಟ್ರಿ ಸಹಾಯಕ : ಪಿಯುಸಿ, ಡಿಪ್ಲೊಮಾ
- ವಾಹನ ಚಾಲಕರು : 10 ನೇ ತರಗತಿ
- ಲ್ಯಾಬ್ ಸಹಾಯಕ : ಪಿಯುಸಿ, ಡಿಪ್ಲೊಮಾ
- ಜೇನು ಕೃಷಿ ಸಹಾಯಕರು : ಎಸ್.ಎಸ್.ಎಲ್.ಸಿ
- ಪ್ಯೂನ್ : ಎಸ್.ಎಸ್.ಎಲ್.ಸಿ
- ತೋಟಗಾರ : ಎಸ್.ಎಸ್.ಎಲ್.ಸಿ
- ಕಾವಲುಗಾರ : ಎಸ್.ಎಸ್.ಎಲ್.ಸಿ
ವಯೋಮಿತಿ ವಿವರ :
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಗರಿಷ್ಠ ವಯಸ್ಸು KSHD ನೇಮಕಾತಿ ನಿಯಮಗಳ ಪ್ರಕಾರ ಹೊಂದಿರಬೇಕು.
ಅರ್ಜಿ ಶುಲ್ಕ:
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ಸಂಬಳ (ತಿಂಗಳಿಗೆ) ವಿವರ :
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : ರೂ.52650-97100/-
- ಸಹಾಯಕ ತೋಟಗಾರಿಕೆ ನಿರ್ದೇಶಕರು : ರೂ.43100-83900/-
- ಸಹಾಯಕ ತೋಟಗಾರಿಕೆ ಅಧಿಕಾರಿ : ರೂ.40900-78200/-
- ತೋಟಗಾರಿಕಾ ಸಹಾಯಕ : ರೂ.23500-47650/-
- ಪ್ರಥಮ ದರ್ಜೆ ಸಹಾಯಕರು : ರೂ.27650-52650/-
- ಸ್ಟೆನೋಗ್ರಾಫರ್ : ರೂ.27650-52650/-
- ಎರಡನೇ ದರ್ಜೆ ಸಹಾಯಕರು (SDA) : ರೂ.21400-42000/-
- ಡೇಟಾ ಎಂಟ್ರಿ ಸಹಾಯಕ : ರೂ.21400-42000/-
- ವಾಹನ ಚಾಲಕರು : ರೂ.21400-42000/-
- ಲ್ಯಾಬ್ ಸಹಾಯಕ : ರೂ.18600-32600/-
- ಜೇನುಸಾಕಣೆ ಸಹಾಯಕರು : ರೂ.18600-32600/-
- ಪ್ಯೂನ್ : ರೂ.17000-28950/-
- ತೋಟಗಾರ : ರೂ.17000-28950/-
- ಕಾವಲುಗಾರ : ರೂ.17000-28950/-
ಇದನ್ನೂ ಓದಿ : BEL ನೇಮಕಾತಿ 2023 : ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಉದ್ಯೋಗಾವಕಾಶ, 79000 ರೂ. ವೇತನ
ಇದನ್ನೂ ಓದಿ : Sahitya Academy Recruitment 2023 : ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವೀಧರಿಗೆ ಉದ್ಯೋಗಾವಕಾಶ, ತಿಂಗಳಿಗೆ 2 ಲಕ್ಷ ರೂ. ಅಧಿಕ ವೇತನ
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಶೀಘ್ರದಲ್ಲೇ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಶೀಘ್ರದಲ್ಲೇ
KSHD Recruitment 2023 : SSLC, PUC, Diploma, Job Opportunity for Graduates, Salary More than 1 Lakh