ವಿಜಯಪುರ ಜಿಲ್ಲಾ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಅಕೌಂಟೆಂಟ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು (Sainik School Bijapur Recruitment 2022)ಆಹ್ವಾನಿಸಲಾಗಿದೆ. ಅಕೌಂಟೆಂಟ್ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನವೆಂಬರ್ 22,2022 ರ ಮೊದಲು ಆಪ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
ವಿಜಯಪುರ ಜಿಲ್ಲಾ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ :
ಸಂಸ್ಥೆಉ ಹೆಸರು : ವಿಜಯಪುರ ಜಿಲ್ಲಾಸೈನಿಕ ಶಾಲೆ
ಹುದ್ದೆಗಳ ಹೆಸರು : ಅಕೌಂಟೆಂಟ್, ಬ್ಯಾಂಡ್‌ಮಾಸ್ಟರ್, ಕೌನ್ಸಿಲರ್
ಒಟ್ಟು ಹುದ್ದೆಗಳು : 3
ವೇತನ : ರೂ.18,000/- – ರೂ.1,12,400
ಅರ್ಜಿಸಲ್ಲಿಸುವ ವಿಧಾನ : ಆನ್‌ಲೈನ್
ವಿಜಯಪುರ ಜಿಲ್ಲಾ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ಹೆಸರು ಹಾಗೂ ಹುದ್ದೆಗಳ ಸಂಖ್ಯೆ ವಿವರ :
ಅಕೌಂಟೆಂಟ್ : 1 ಹುದ್ದೆ
ಬ್ಯಾಂಡ್‌ಮಾಸ್ಟರ್ : 1 ಹುದ್ದೆ
ಕೌನ್ಸಿಲರ್ : 1 ಹುದ್ದೆ
ವಿದ್ಯಾರ್ಹತೆ :
ವಿಜಯಪುರ ಜಿಲ್ಲಾ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕಾಗಿದೆ.
ವಯೋಮಿತಿ :
ವಿಜಯಪುರ ಜಿಲ್ಲಾ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 50 ವರ್ಷ ವಯಸ್ಸಾಗಿರಬೇಕು.
ವೇತನ ಶ್ರೇಣಿ :
ವಿಜಯಪುರ ಜಿಲ್ಲಾ ಸೈನಿಕ ಶಾಲೆಯ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಸಾರವಾಗಿ ಮಾಸಿಕ ರೂ.18,000/- ದಿಂದ ರೂ. 1,12,400 ವೇತನವನ್ನು ನಿಗದಿ ಪಡಿಸಲಾಗುತ್ತದೆ.
ಅರ್ಜಿ ಶುಲ್ಕ :
ವಿಜಯಪುರ ಜಿಲ್ಲಾ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳು ರೂ.500 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದೆ.
ಆಯ್ಕೆ ವಿಧಾನ :
ವಿಜಯಪುರ ಜಿಲ್ಲಾ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವಿಜಯಪುರ ಜಿಲ್ಲಾ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
ವಿಜಯಪುರ ಜಿಲ್ಲಾ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್ ಹಾಗೂ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ) ಪ್ರಿನ್ಸಿಪಾಲ್, ಸೈನಿಕ್ ಸ್ಕೂಲ್,ಬಿಜಾಪುರ-586108 ಗೆ ರಿಜಿಒಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರ ಯಾವುದೇ ಸೇವೆಯ ಮೂಲಕ ನವೆಂಬರ್22,2022ರ ಒಳಗೆ ಆಪ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.
ಇದನ್ನೂ ಓದಿ : BBMP Recruitment 2022 – 63 ವೈದ್ಯಕೀಯ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ
ಇದನ್ನೂ ಓದಿ : ASRB Recruitment 2022 : ಹಿರಿಯ ವಿಜ್ಞಾನಿ-ಮುಖ್ಯಸ್ಥರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ : Central Railway Recruitment 2022:10ನೇ ತರಗತಿ, ಪಿಯುಸಿ ಓದಿದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ
ಇದನ್ನೂ ಓದಿ : UAS Dharwad Recruitment 2022 : ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ಸಂದರ್ಶನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 01-11-2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 22-11-2022
Sainik School Bijapur Recruitment 2022 : Application Invitation for Accountant and Various Posts