Krishna Kumar Pandey died : ಭಾರತ್‌ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್‌ ಸೇವಾದಳ ನಾಯಕ ನಿಧನ

ಗುರುದ್ವಾರ : (Krishna Kumar Pandey died)ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ನಾಯಕ ಕೃಷ್ಣ ಕುಮಾರ್‌ ಪಾಂಡೆ ಅವರು ಮಂಗಳವಾರ ಗುರುದ್ವಾರದಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಯುವ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ) .

ಮಹಾರಾಷ್ಟ್ರದ ಸೇವಾದಳದ ಪ್ರಧಾನ ಕಾರ್ಯದರ್ಶಿಯಾದ ಪಾಂಡೆ ಅವರು 62ನೇ ದಿನದ ಭಾರತ್‌ ಜೋಡೋ ಯಾತ್ರೆಯಲ್ಲಿ ಬೆಳಿಗ್ಗೆ ರಾಷ್ಟ್ರದ್ವಜವನ್ನು ಹಿಡಿದು ಗುರುದ್ವಾರದಿಂದ ನಾಂದೇಡ್‌ ನ ಬಿಲೋಲಿ ಜಿಲ್ಲೆಯ ಅಟ್ಕಾಲಿ ಕಡೆ ನಡೆಯುತ್ತಿದ್ದರು . ಕೆಲ ನಿಮಿಷಗಳ ನಂತರ ತನ್ನ ಸಹೋದ್ಯೋಗಿಗೆ ದ್ವಜವನ್ನು ನೀಡಿ ಹಿಂದೆ ಸರಿದು ನಂತರ ಕುಸಿದು ಬಿದ್ದರು(Krishna Kumar Pandey died) . ಕೂಡಲೆ ಅಲ್ಲಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ .

ಇದನ್ನೂ ಓದಿ : By Election Result  : 7 ವಿಧಾನಸಭೆಗೆ ನಡೆದ ಉಪಚುನಾವಣೆ ಫಲಿತಾಂಶ.. ನಾಲ್ಕು ಕಡೆ ಬಿಜೆಪಿ ಗೆಲುವು

ಇದನ್ನೂ ಓದಿ : Congress candidate application: ಟಿಕೇಟ್ ಆಕಾಂಕ್ಷಿತರಿಗೆ ಡಿಕೆಶಿ ಶಾಕ್ : ಅಭ್ಯರ್ಥಿ ಅರ್ಜಿಗೆ 5 ಸಾವಿರ, ಶುಲ್ಕ 2 ಲಕ್ಷ ಕಡ್ಡಾಯ

ಇದನ್ನೂ ಓದಿ : Congress candidates list: 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಯಾರೆಲ್ಲಾ ಕಣದಲ್ಲಿ..?

“ಅವರು ಕಟ್ಟಾ ಕಾಂಗ್ರೆಸ್ಸಿಗರಾಗಿದ್ದರು . ನಾಗ್ಪುರದಲ್ಲಿ ಆರ್‌ ಎಸ್‌ ಎಸ್‌ ವಿರುದ್ದ ದನಿಯೆತ್ತಿದ್ದರು. ಎಲ್ಲಾ ಯಾತ್ರಿಗಳಿಗೆ ಇದು ಅತ್ಯಂತ ದುಃಖದ ಕ್ಷಣವಾಗಿದೆ .” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ಉಸ್ತುವಾರಿ ಜೈರಾಮ್‌ ರಮೇಶ್‌ ಹೇಳಿದ್ದಾರೆ

ಕೃಷ್ಣ ಕುಮಾರ್‌ ಪಾಂಡೆ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ , ನಾಯಕನ ಸಮರ್ಪಣೆ ಸ್ಪೂರ್ತಿದಾಯಕವಾಗಿದೆ ಎಂದು ಟ್ವಿಟ್ಟರ್‌ ಮೂಲಕ ಹೇಳಿದ್ದಾರೆ.

Congress leader Krishna Kumar Pandey, who was participating in the Bharat Jodo Yatra, collapsed and died during the Bharat Jodo Yatra at the Gurdwara on Tuesday.

Comments are closed.