SBI Recruitment 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಬ್ಯಾಂಕ್‌ ಅಧಿಕಾರಿಗಳಿಗೆ ಉದ್ಯೋಗಾವಕಾಶ

(SBI Recruitment 2023)ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 1438 ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 10, 2023 ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

(SBI Recruitment 2023)ಹುದ್ದೆಯ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಯ ಹೆಸರು : ಕಲೆಕ್ಷನ್ ಫೆಸಿಲಿಟೇಟರ್ (ನಿವೃತ್ತ ಬ್ಯಾಂಕ್ ಅಧಿಕಾರಿಗಳು/ಸಿಬ್ಬಂದಿ)
ಹುದ್ದೆಗಳ ಸಂಖ್ಯೆ: 1438
ಉದ್ಯೋಗ ಸ್ಥಳ : ಭಾರತದಾಂದ್ಯಂತ
ವೇತನ:.25000 ರಿಂದ 40000ರೂ ಪ್ರತಿ ತಿಂಗಳು

ಹುದ್ದೆಗಳ ಸಂಖ್ಯೆಯ ವಿವರ:
ಕಲೆಕ್ಷನ್ ಫೆಸಿಲಿಟೇಟರ್ (JMGS-I) 291
ಕಲೆಕ್ಷನ್ ಫೆಸಿಲಿಟೇಟರ್ (MMGS-II) 507
ಕಲೆಕ್ಷನ್ ಫೆಸಿಲಿಟೇಟರ್ (MMGS-III) 142
ಕಲೆಕ್ಷನ್ ಫೆಸಿಲಿಟೇಟರ್ (ಕ್ಲೇರಿಕಲ್ ಸ್ಟಾಫ್) 498

ಅರ್ಹತೆ
ಈ ಸಂಸ್ಥೆಯೊಂದಿಗೆ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು. ಈ ಸಂಸ್ಥೆಗೆ ಸಂಬಂಧಪಟ್ಟ ಹುದ್ದೆಗಳಲ್ಲಿ ಅನುಭವ ಇರುವವರಿಗೆ ಮೊದಲ ಆದ್ಯತೆ.

ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ

ಇದನ್ನೂ ಓದಿ:CBI Recruitment 2023: ಕೇಂದ್ರೀಯ ತನಿಖಾ ದಳದಲ್ಲಿ ಸಲಹೆಗಾರರ ಹುದ್ದೆ : ವೇತನ 40000 ರೂ

ಇದನ್ನೂ ಓದಿ:KHPT Recruitment 2023:ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ಪದವೀಧರರ ನೇಮಕಾತಿ

ಅರ್ಜಿ ಸಲ್ಲಿಸುವ ವಿಧಾನ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್‌ ಹಾಗೂ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ)22-12-2022 ರಿಂದ10-1-2023 ರವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಆದ sbi.co.in‌ ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-ಡಿಸೆಂಬರ್-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  10-ಜನವರಿ-2023

SBI Recruitment 2023 State Bank of India Job Vacancy for Retired Bank Officers

Comments are closed.