SIMS Shivamogga Recruitment 2021 : ಶಿವಮೊಗ್ಗ : ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಸೈಂಟಿಸ್ಟ್ ಬಿ, ಲ್ಯಾಬ್ ಟೆಕ್ನಿಷಿಯನ್, ಡಿಇಓ ಹಾಗೂ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಎಸ್ಐಎಂಎಸ್ನಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 2022ರ ಜನವರಿ 15 ಕೊನೆಯ ದಿನಾಂಕವಾಗಿದೆ. ಅಧಿಕೃತ ವೆಬ್ಸೈಟ್ನಲ್ಲಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಅಲ್ಲಿ ವಿವರಗಳನ್ನು ಭರ್ತಿ ಮಾಡಿ ಕೇಳಲಾದ ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಕಚೇರಿಗೆ ತಲುಪಿಸುವಂತೆ ಸೂಚನೆ ನೀಡಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ:
ಡಾಟಾ ಎಂಟ್ರಿ ಆಪರೇಟರ್ – 1 ಹುದ್ದೆ
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 1 ಹುದ್ದೆ
ಸೈಂಟಿಸ್ಟ್-ಬಿ – 1 ಹುದ್ದೆ
ಲ್ಯಾಬ್ ಟೆಕ್ನೀಶಿಯನ್ – 1 ಹುದ್ದೆ
ಒಟ್ಟು 4 ಹುದ್ದೆಗಳು
ವಿದ್ಯಾರ್ಹತೆ : ಸೈಂಟಿಸ್ಟ್ ಬಿ, ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಎಂಡಿ/ಎಂಎಸ್/ಡಿಎನ್‌ಬಿ/ಎಂಡಿಎಸ್/ಎಂ.ವಿ.ಎಸ್ಸಿ ಮತ್ತು ಎಹೆಚ್, ಬಿ.ಎಸ್ಸಿ, ಪದವಿ, ಮೆಟ್ರಿಕ್ ಪದವಿಯನ್ನು ಪಡೆದಿರಬೇಕು ಎಂದು ಸೂಚಿಸಲಾಗಿದೆ.
ವಯಸ್ಸಿನ ಮಿತಿ :
ಸೈಂಟಿಸ್ಟ್-ಬಿ, ಲ್ಯಾಬ್ ಟೆಕ್ನೀಶಿಯನ್, ಡಿಇಒ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 35 ವರ್ಷ ಒಳಗಿನವರಾಗಿರಬೇಕು. ಆಯ್ದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಾಹಿತಿ ನೀಡಿದೆ.
ವೇತನ ಶ್ರೇಣಿ
ಸೈಂಟಿಸ್ಟ್ ಬಿ – 56,000 ರೂ,(ಮಾಸಿಕ)
ಲ್ಯಾಬ್ ಟೆಕ್ನಿಷಿಯನ್ – 20,000 ರೂ.(ಮಾಸಿಕ)
ಡಿಇಓ – 20,000 ರೂ((ಮಾಸಿಕ)
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 18,000 ರೂ.(ಮಾಸಿಕ)
ಅರ್ಜಿ ಶುಲ್ಕ :
ಸಂಬಂಧಪಟ್ಟ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000 ರೂಪಾಯಿಗಳನ್ನು ಡಿಡಿ ಮೂಲಕ ಪಾವತಿ ಮಾಡುವಂತೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೇಳಿದೆ.
SIIMS shivmogga recruitment for various posts
ಇದನ್ನು ಓದಿ : KMF BAMUL Recruitment: ಇಲ್ಲಿದೆ ಉದ್ಯೋಗಾವಕಾಶ, 97,100 ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : Job Alert in Flipkart Bengaluru: ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗಾವಕಾಶ; ಜವಾಬ್ದಾರಿಯು ಹುದ್ದೆ, ಓರ್ವ ಅಭ್ಯರ್ಥಿಗೆ ಮಾತ್ರ ಅವಕಾಶ