IND vs SA Test 5th Day India Won: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 113 ರನ್‌ಗಳ ಐತಿಹಾಸಿಕ ಜಯ

ಭಾರತದ ಪುರುಷರ ಕ್ರಿಕೆಟ್ (Indian Cricket Team) ತಂಡಕ್ಕೆ ಇಂದು ಗುರುವಾರ (ಡಿಸೆಂಬರ್ 30) ಒಂದುಮಟ್ಟಿಗಿನ ಐತಿಹಾಸಿಕ ದಿನ. ದಕ್ಷಿಣ ಆಫ್ರಿಕಾ (South Africa Cricket Team) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯಗಳಿಸುವ ಮೂಲಕ ಭಾರತ ವಿಜಯದ ಕೇಕೆ ಹಾಕಿತು. ಟೆಸ್ಟ್ ಪಂದ್ಯದ ಕೊನೆಯ ಮತ್ತು ಐದನೇ ದಿನವಾಗಿದ್ದ ಇಂದು ಭಾರತ ಗೆಲ್ಲಲು ದಕ್ಷಿಣ ಆಫ್ರಿಕಾದ 6 ವಿಕೆಟ್‌ಗಳನ್ನು ಪಟಪಟನೆ ಕೆಡವಬೇಕಿತ್ತು. ಆದರೆ ದಕ್ಷಿಣ ಆಫ್ರಿಕನ್ನರ ಬ್ಯಾಟಿಂಗ್ ಪಡೆಯನ್ನು ಅಷ್ಟು ಸುಲಭಕ್ಕೆ ಬಗ್ಗು ಬಡಿಯುವುದು ಸುಲಭಧ ಮಾತಂತೂ ಆಗಿರಲಿಲ್ಲ. ಆದರೆ ಭಾರತದ ಬೌಲರ್‌ಗಳು ಈ ಟಾಸ್ಕ್ ಪೂರ್ಣಗೊಳಿಸಿ ಭಾರತಕ್ಕೆ ಗೆಲುವಿನ ಸಂತಸ (IND vs SA Test 5th Day India Won) ಮೂಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ  ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊನೆಯ ದಿನ ದಕ್ಷಿಣ ಆಫ್ರಿಕಾ ಗೆಲುವಿಗೆ 305 ರನ್‌ಗಳ ಅಗತ್ಯವಿತ್ತು. ಪಿಚ್‌ ಬೌಲರ್‌ಗಳಿಗೆ  ನೆರವು ನೀಡುತ್ತಿದ್ದದ್ದು ಭಾರತಕ್ಕೆ ವರದಾನವಾಯಿತು. ದಕ್ಷಿಣ ಆಫ್ರಿಕಾದ ಕೊನೆಯ ವಿಕೆಟ್ ಕೆಡಗಿ ಅಶ್ವಿನ್ ದಕ್ಷಿಣ ಆಫ್ರಿಕಾ ತಂಡವನ್ನು 191 ರನ್‌ಗಳಿಗೆ ಆಲೌಟ್ ಮಾಡಿದರು.

ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗಿಳಿದ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಹಾಗೂ ಟೆಂಬಾ ಬವುಮಾ ಅವರು ದಕ್ಷಿಣ ಆಫ್ರಿಕಾವನ್ನು ಗೆಲ್ಲಿಸುವ ಉತ್ಸಾಹದಲ್ಲಿದ್ದರು. ಆದರೆ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ದಾಳಿ ಈ ಉತ್ಸಾಹಕ್ಕೆ ತಣ್ಣೀರು ಎರಚಿತು. 51ನೇ ಓವರ್‌ನ ಐದನೇ ಎಸೆತದಲ್ಲಿ ಜಸ್ಪ್ರೀತ್  ಬುಮ್ರಾ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಅವರ ವಿಕೆಟ್ ಪಡೆದರು. ವಿಕೆಟ್‌ಕೀಪರ್ ಡಿ ಕಾಕ್ ಸಿರಾಜ್ ಅವರ ಎಸೆತಕ್ಕೆ 21 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ವಿಯಾನ್ ಮುಲ್ಡರ್ ಕೂಡ ಕೇವಲ 3 ಎಸೆತಗಳಲ್ಲಿ ಮೊಹಮ್ಮದ್ ಶಮಿಯ ಎಸೆತಕ್ಕೆ ಶರಣಾದರು.

ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ 50.3 ಓವರ್‌ಗಳ ಮುಕ್ತಾಯಕ್ಕೆ ಕೇವಲ 174 ರನ್‌ಗಳಿಗೆ ಆಲೌಟ್ ಆಗಿತ್ತು. ಈಮೂಲಕ ನಾಲ್ಕನೇಯ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 305 ರನ್‌ಗಳ ಗುರಿ ನೀಡಿತ್ತು. ಮುಂದುವರೆದು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತನ್ನ ಒಂದು ವಿಕೆಟ್ ನಷ್ಟಕ್ಕೆ 7 ರನ್ ಗಳಿಸಿತ್ತು. 327 ರನ್‌ಗಳಿಗೆ ಪ್ರತ್ಯುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇದನ್ನೂ ಓದಿ: Google Year in Search 2021 : 2021ರಲ್ಲಿ ಗೂಗಲ್​ನಲ್ಲಿ ಜನರು ಹುಡುಕಾಡಿದ್ದೇನು ?

ಇದನ್ನೂ ಓದಿ: Umran Malik : ಭಾರತಕ್ಕೊಬ್ಬ ವೇಗದ ಬೌಲರ್ : ತರಕಾರಿ ವ್ಯಾಪಾರಿಯ ಮಗನ ವೇಗಕ್ಕೆ ಬೆರಗಾಯ್ತು ಕ್ರಿಕೆಟ್‌ ಜಗತ್ತು

(India vs South Africa Live Score 1st Test Day 5 India win by 113 runs, IND vs SA Test)

Comments are closed.