ಬೆಂಗಳೂರಿನಲ್ಲಿ ಇಂಟರ್ನ್‌ಶಿಪ್ ಅವಕಾಶ: SION Semiconductors ನಿಂದ 200ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ!
SION Semiconductors VLSI Internship: Semiconductors ಸಂಸ್ಥೆಯು ತನ್ನ ವಿವಿಧ ಸಂಶೋಧನಾ ಕೇಂದ್ರಗಳಿಗಾಗಿ 200ಕ್ಕೂ ಹೆಚ್ಚು VLSI ಇಂಟರ್ನ್‌ಶಿಪ್ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಸೇರಿದಂತೆ ಹೈದರಾಬಾದ್, ಸಿಂಗಾಪುರ, ಪೆನಾಂಗ್ ಮತ್ತು ಅಮೆರಿಕದ ಸ್ಯಾನ್ ಜೋಸ್‌ನಲ್ಲಿರುವ ಆರ್ ಅಂಡ್ ಡಿ (R&D) ಕೇಂದ್ರಗಳಲ್ಲಿ ಈ ಅವಕಾಶಗಳು ಲಭ್ಯವಿವೆ.
ಬೆಂಗಳೂರು ಕೇಂದ್ರವೊಂದರಲ್ಲೇ ಒಟ್ಟು 85 ಸ್ಥಾನಗಳಿದ್ದು, ಅದರಲ್ಲಿ ಎಸ್‌ಒಸಿ ವೆರಿಫಿಕೇಶನ್ (SOC Verification) ವಿಭಾಗಕ್ಕೆ 25, ಎಫ್‌ಪಿಜಿಎ ಡಿಸೈನ್ (FPGA Design) ವಿಭಾಗಕ್ಕೆ 20, ಫರ್ಮ್‌ವೇರ್ (Firmware) ವಿಭಾಗಕ್ಕೆ 20 ಹಾಗೂ ಫಿಸಿಕಲ್ ಡಿಸೈನ್ (Physical Design) ವಿಭಾಗಕ್ಕೆ 20 ಸ್ಥಾನಗಳನ್ನು ಮೀಸಲಿಡಲಾಗಿದೆ.
ಲಭ್ಯವಿರುವ ಹುದ್ದೆಗಳ ವಿವರ (ಬೆಂಗಳೂರು ಕೇಂದ್ರಕ್ಕಾಗಿ):
- SOC Verification: 25 ಸ್ಥಾನಗಳು
- FPGA Design: 20 ಸ್ಥಾನಗಳು
- Firmware: 20 ಸ್ಥಾನಗಳು
- Physical Design: 20 ಸ್ಥಾನಗಳು
ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ: - ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಾನಿಕ್ಸ್ ವಿಭಾಗದ ಯಾವುದೇ ಸ್ಟ್ರೀಮ್‌ನಲ್ಲಿ M.Tech ಅಥವಾ B.Tech ಮಾಡುತ್ತಿರುವ ಅಭ್ಯರ್ಥಿಗಳು (2025/2026ರಲ್ಲಿ ತೇರ್ಗಡೆಯಾಗುವವರು).
- ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ಇಂಟರ್ನ್‌ಶಿಪ್ ಮಾದರಿ: ಹೈಬ್ರಿಡ್ ಮೋಡ್ (Hybrid mode).
- ಕೆಲಸದ ಕ್ಷೇತ್ರಗಳು: AI, ವೈರ್‌ಲೆಸ್/ವೈರ್ಡ್ ಕಮ್ಯುನಿಕೇಷನ್ಸ್ ಮತ್ತು ಪ್ರೊಸೆಸರ್ ರಿಸರ್ಚ್.
ಪ್ರಮುಖ ವೈಶಿಷ್ಟ್ಯಗಳು: - ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ತಿಂಗಳುಗಳಲ್ಲಿ ವ್ಯವಸ್ಥಿತ ತರಬೇತಿ ನೀಡಿ, ನಂತರ ಪ್ರಾಯೋಗಿಕ ಜ್ಞಾನಕ್ಕಾಗಿ ಕ್ಲೈಂಟ್ ಪ್ರಾಜೆಕ್ಟ್‌ಗಳಲ್ಲಿ ನಿಯೋಜಿಸಲಾಗುತ್ತದೆ.
- ಉತ್ತಮ ಪ್ರದರ್ಶನ ನೀಡುವ ಇಂಟರ್ನ್‌ಗಳನ್ನು ಸಂಸ್ಥೆಯಲ್ಲೇ ಖಾಯಂ ಹುದ್ದೆಗಳಿಗೆ ತೆಗೆದುಕೊಳ್ಳುವ ಅಥವಾ ಇತರ ಸೆಮಿಕಂಡಕ್ಟರ್ ಕಂಪನಿಗಳಿಗೆ ಶಿಫಾರಸು ಮಾಡುವ ಸಾಧ್ಯತೆ ಇರುತ್ತದೆ.
ಚಿಕ್ಕಬಳ್ಳಾಪುರದಲ್ಲಿ ಚಿನ್ನದ ನಿಕ್ಷೇಪದ ಸುಳಿವು : 3 ದಿನಗಳಿಂದ ವೈಮಾನಿಕ ಸಮೀಕ್ಷೆ
ಗಮನಿಸಬೇಕಾದ ಅಂಶಗಳು: - ಸ್ಟೈಫಂಡ್ (Stipend): ಇಂಟರ್ನ್‌ಶಿಪ್ ಅವಧಿಯಲ್ಲಿ ಯಾವುದೇ ಸ್ಟೈಫಂಡ್ ನೀಡಲಾಗುವುದಿಲ್ಲ.
- ಅರ್ಜಿ ಸಲ್ಲಿಸಲು ವೆಬ್‌ಸೈಟ್: https://www.sionsemi.com/internships/.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಬೆಂಗಳೂರು ಕೇಂದ್ರದ ವಿಚಾರಣೆಗಳಿಗಾಗಿ: sahil@sionsemi.com.



