SSC CGL exam ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು ಹಾಗೂ ಇಲಾಖೆಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಸಿಬ್ಬಂದಿ ನೇಮಕಾತಿ ಆಯೋಗವು ಶುಭ ಸುದ್ದಿಯನ್ನು ನೀಡಿದೆ. ಕಂಬೈನ್ಡ್ ಗ್ರ್ಯಾಜುವೇಟ್ ಲೆವೆಲ್ ಪರೀಕ್ಷೆಯ 1ನೇ ಶ್ರೇಣಿಯನ್ನು ಏಪ್ರಿಲ್ 2022ರಲ್ಲಿ ನಡೆಸಲಾಗುವುದು ಎಂದು ಘೋಷಣೆ ಮಾಡಿದೆ.
ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗೆ ನೋಂದಣಿಯು ಇದೇ ತಿಂಗಳ 23ನೇ ತಾರೀಖಿನಿಂದ ಆರಂಭಗೊಳ್ಳಲಿದೆ ಎಂದು ಸಿಬ್ಬಂದಿ ನೇಮಕಾತಿ ಆಯೋಗವು ಮಾಹಿತಿ ನೀಡಿದೆ. ಎಸ್ಎಸ್ಸಿ ಸಿಜಿಎಲ್ ದೇಶದಲ್ಲಿ ನಡೆಯುವ ಅತೀದೊಡ್ಡ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಗೆ ಹಾಜರಾಗಬಯಸುವ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಯು ಕನಿಷ್ಟ ವಿದ್ಯಾರ್ಹತೆಯಾಗಿದೆ.
ಎಸ್ಎಸ್ಸಿ ಸಿಜಿಎಲ್ ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳು, ಸಚಿವಾಲಯ ಹಾಗೂ ಇಲಾಖೆಗಳಲ್ಲಿ ವಿವಿಧ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹದ್ದೆಗಳಿಗೆ ನೇಮಕಾತಿ ನಡೆಸಲು ಮುಂದಾಗಿದೆ. ದಾಖಲೆಗಳ ಪರಿಶೀಲನೆಗೆ ಕರೆಯಲಾಗುವ ಎಲ್ಲಾ ಅಭ್ಯರ್ಥಿಗಳು ಕನಿಷ್ಟ ಶೈಕ್ಷಣಿಕ ಅರ್ಹತೆಯನ್ನು ಪುರಾವೆಯಾಗಿ ತೋರಿಸುವ ಸಲುವಾಗಿ ಮೂರು ವರ್ಷಗಳ ಪದವಿ ಅಂಕಪಟ್ಟಿಯನ್ನು ಹಾಜರುಪಡಿಸಬೇಕಾಗುತ್ತದೆ. ಈ ಪುರಾವೆಗಳನ್ನು ತೋರಿಸಲು ವಿಫಲರಾಗುವ ಅಭ್ಯರ್ಥಿಗಳನ್ನು ಆಯೋಗವು ರದ್ದುಪಡಿಸಲಿದೆ.
ಎಸ್ಎಸ್ಸಿ ಸಿಜಿಎಲ್ ಹುದ್ದೆಗಳಿಗೆ ಎರಡು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಿದ ಅದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಿವರಣಾತ್ಮಕ ಪೇಪರ್ ಮತ್ತು ಕಂಪ್ಯೂಟರ್ ಪ್ರಾವೀಣ್ಯತೆಯ ಪರೀಕ್ಷೆ / ಡೇಟಾ ಎಂಟ್ರಿ ಕೌಶಲ್ಯ ಪರೀಕ್ಷೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ತಾತ್ಕಾಲಿಕ ಉತ್ತರ ಕೀಗಳನ್ನು ಪರೀಕ್ಷೆಯ ನಂತರ ಆಯೋಗದ ವೆಬ್‌ಸೈಟ್‌ನಲ್ಲಿ ಇರಿಸಲಾಗುತ್ತದೆ
ಇದನ್ನು ಓದಿ : SBI Recruitment 2021 : ಪದವೀಧರರಿಗೆ ಎಸ್‌ಬಿಐನಲ್ಲಿದೆ 1,200 CBO ಹುದ್ದೆ, 36,000 ರೂ. ವೇತನ
ಇದನ್ನು ಓದಿ : Aishwarya Rai Bachchan: ನಟಿ ಐಶ್ವರ್ಯಾ ರೈ ಬಚ್ಚನ್ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ
ಇದನ್ನೂ ಓದಿ : Mumbai Indians IPL 2022: ಹಾರ್ದಿಕ್ ಪಾಂಡ್ಯ, ಟ್ರೆಂಟ್ ಬೌಲ್ಟ್ ಅವರನ್ನು ಕರೆತರಲಿದೆ ಮುಂಬೈ ಇಂಡಿಯನ್ಸ್
SSC CGL exam in April, registration begins on December 23 at ssc.nic.in portal