Aishwarya Rai Bachchan: ನಟಿ ಐಶ್ವರ್ಯಾ ರೈ ಬಚ್ಚನ್‌ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಉಲ್ಲಂನೆಯ ಆರೋಪದ ಮೇಲೆ ಬಾಲಿವುಡ್​ ನಟಿ, ಬಿಗ್​ ಬಿ ಕುಟುಂಬದ ಸೊಸೆ ಐಶ್ವರ್ಯಾ ರೈ ಬಚ್ಚನ್​ ಅವರನ್ನು ಜಾರಿ ನಿರ್ದೇಶನಾಲಯ (ED) ಸೋಮವಾರ ವಿಚಾರಣೆ ನಡೆಸಿದೆ. ಪನಾಮಾ ಪೇಪರ್ಸ್​ 2016ರಲ್ಲಿ (Panama Papers) ಬಹಿರಂಗ ಪಡಿಸಿದ ಹಣಕಾಸು ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಭಾರತೀಯರ ಕುರಿತ ಜಾರಿ ನಿರ್ದೇಶನಾಲಯ (ಇಡಿ)ತನಿಖೆ ನಡೆಸುತ್ತಿದ್ದು, ಇದರ ಭಾಗವಾಗಿ ಬಾಲಿವುಡ್​ ನಟಿ, ಬಿಗ್​ ಬಿ (Big B) ಕುಟುಂಬದ ಸೊಸೆ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan)​ ಅವರನ್ನು ಸೋಮವಾರ ವಿಚಾರಣೆ ನಡೆಸಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಉಲ್ಲಂಘಿಸಿ ವಿದೇಶದಲ್ಲಿ ಸಂಪತ್ತು ಸಂಗ್ರಹಿಸಲಾಗಿದೆ ಎಂಬ ಬಗ್ಗೆ 48 ವರ್ಷದ ನಟಿಯ ಹೇಳಿಕೆಯನ್ನು ಇಡಿ ದಾಖಲಿಸಿಕೊಂಡಿದೆ.ಈ ಹಿಂದೆ ಇಡಿ ಎರಡು ಸಾರಿ ಸಮನ್ಸ್​ ನೀಡಿದ್ದಾಗ ಐಶ್ವರ್ಯಾ ರೈ ಕಾಲಾವಕಾಶ ಪಡೆದಿದ್ದರು. 2004ರಿಂದ ವಿದೇಶಿ ಹೂಡಿಕೆ ಮತ್ತು ಅದರಿಂದ ಬಂದ ಹಣದ ಬಗ್ಗೆ ವಿವರಣೆ ನೀಡುವಂತೆ ಐಶ್ವರ್ಯಾ ರೈ ತವರು ಕುಟುಂಬಕ್ಕೆ ಇಡಿ ನೋಟಿಸ್​ ನೀಡಿತ್ತು.

ಜಾಗತಿಕವಾಗಿ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಸೆಲಬ್ರೆಟಿಗಳು ವಿದೇಶಗಳಲ್ಲಿ ಹೂಡಿಕೆ ಮಾಡಿರುವ ಆಸ್ತಿ ಅಥವಾ ತೆರಿಗೆ ತಪ್ಪಿಸಿರುವ ವಿವರವನ್ನು ಪನಾಮಾ ಪೇಪರ್ಸ್​ 2016ರಲ್ಲಿ ಬಯಲು ಮಾಡಿತ್ತು. ಇದನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಜೆಐ) ಪ್ರಕಟಿಸಿತ್ತು. ಇದರಲ್ಲಿ ಭಾರತ 300 ಗಣ್ಯರ ಹೆಸರಿದೆ. ಐಶ್ವರ್ಯಾ ರೈ ಕುಟುಂಬವು ಬ್ರಿಟಿಷ್​ ವಿಜಿರ್ನ್​ ದ್ವೀಪದ ಅಮಿಕ್​ ಪಾರ್ಟನರ್ಸ್​ ಲಿಮಿಟೆಡ್​ನಲ್ಲಿ ಹೂಡಿಕೆ ಮಾಡಿದೆ ಎಂದು ಆರೋಪಿಸಲಾಗಿದೆ. ಪನಾಮಾದ ಮೊಸಾಕ್​ಫೋನ್ಸೆಕಾ (ಎಂಎಫ್) ಬಳಿ ಇರುವ ದಾಖಲೆಗಳ ಪ್ರಕಾರ, ಐಶ್ವರ್ಯಾ ರೈ ಮತ್ತು ಅವರ ತಂದೆ ಕೆ. ರಮಣ ರೈ ಕೃಷ್ಣ ರೈ, ತಾಯಿ ವೃಂದಾ ಕೃಷ್ಣ ರಾಜ್​ ರೈ, ಸೋದರ ಆದಿತ್ಯ ರೈ ಅಮಿಕ್​ ಪಾರ್ಟನರ್ಸ್​ನ ನಿರ್ದೇಶಕರಾಗಿ ನೇಮಕ ಆಗಿದ್ದರು. ಇವರು ಹೂಡಿದ ಬಂಡವಾಳ 50 ಸಾವಿರ ಡಾಲರ್​ ಆಗಿತ್ತು.

2005ರ ಜೂನ್​ 18ರಂದು ರೈ ಕುಟುಂಬದವರನ್ನು ನಿರ್ದೇಶಕ ಸ್ಥಾನದಿಂದ ಕೈಬಿಟ್ಟು, ಷೇರುದಾರರೆಂದು ಅಮಿಕ್​ ಪಾರ್ಟನರ್ಸ್​ ಆಡಳಿತ ಮಂಡಳಿ ಠರಾವು ಕೈಗೊಂಡಿತು. 2008ರಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ ವಿವಾಹವಾದರು. ಇದಾದ ಒಂದು ವರ್ಷದ ಬಳಿಕ ಈ ಕಂಪನಿಯನ್ನು ಮುಚ್ಚುವ ಪ್ರಕ್ರಿಯೆ ಶುರುವಾಯಿತು.

ಇನ್ನಷ್ಟು ಸುದ್ದಿಗಳು: Esha Gupta bathroom video : ಬಾತ್ ರೂಂನಲ್ಲಿ ಸೆಲ್ಪಿ ವಿಡಿಯೋ : ನಟಿಯ ಹುಚ್ಚಾಟಕ್ಕೆ ಅಭಿಮಾನಿಗಳು ಶಾಕ್

(Actress Aishwarya Rai Bachchan Questioned For Alleged Foreign Exchange Violations)

Comments are closed.