BJP Congress Tweet War : ಎಂಇಎಸ್ ಪುಂಡಾಟಕ್ಕೆ ಕಾಂಗ್ರೆಸ್ ಶ್ರೀರಕ್ಷೆ: ಸರಣಿ ಟ್ವೀಟ್ ನಲ್ಲಿ ಬಿಜೆಪಿ ವಾರ್

ಬೆಂಗಳೂರು : ರಾಜ್ಯದಲ್ಲಿ ನಾಡು‌ನುಡಿಯ ವಿಚಾರಕ್ಕೆ ಮತ್ತೊಮ್ಮೆ ಹೋರಾಟ ಮುಗಿಲು ಮುಟ್ಟಿದೆ. ಕನ್ನಡದ ಬಾವುಟಕ್ಕೆ ಬೆಂಕಿ‌ಇಟ್ಟ, ನಾಡು ನುಡಿಯ ವಿಚಾರದಲ್ಲಿ ಉದ್ಧಟತನ ತೋರಿದ ಎಂಇಎಸ್ ಸಂಘಟನೆಯನ್ನು ನಿರ್ಭಂದಿಸುವಂತೆ ಹೋರಾಟ ತೀವ್ರಗೊಂಡಿದೆ. ಸರ್ಕಾರ ನಿಷ್ಕ್ರಿಯವಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಇಂತಹ ಹೊತ್ತಿನಲ್ಲಿ ಎಂಇಎಸ್ಹಿಂ ( MES )ದಿನ ಶಕ್ತಿ ಕಾಂಗ್ರೆಸ್ ಎನ್ನುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದು ಸರಣಿ ಟ್ವೀಟ್ ಗಳ (BJP Congress Tweet War) ಮೂಲಕ ಕಾಂಗ್ರೆಸ್ ಈ ನಾಡವಿರೋಧಿ ಕೃತ್ಯಗಳಿಗೆ ಪ್ರೇರಣೆ ಎಂದು ಆರೋಪಿಸಿದೆ.

ಬಿಜೆಪಿ ಕರ್ನಾಟಕ ಟ್ವೀಟರ್ ಖಾತೆಯಿಂದ ಸರಣಿ ಟ್ವೀಟ್ ಮಾಡಲಾಗಿದ್ದು, ಈ ಎಲ್ಲ ಹೋರಾಟಗಳು,ದುಷ್ಕ್ರತ್ಯಗಳ ಮೂಲ ಪ್ರೇರಣೆ ಕಾಂಗ್ರೆಸ್. ಇದು ಕೆಪಿಸಿಸಿಯಿಂದ ಹೊರಟ ಆಜ್ಞೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ಧರಾಮಯ್ಯ ಹಾಗೂ ಡಿಕೆಶಿಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಟ್ವೀಟ್ ಸರಣಿಯನ್ನು ಮುಂದುವರೆಸಿದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಾವುಟಕ್ಕೆ ಬೆಂಕಿ‌ಹಚ್ಚಿದ್ದು ಕಾಂಗ್ರೆಸ್ ಕಾರ್ಯಕರ್ತರು. ಕನ್ನಡಿಗರ ವಾಹನ ಪುಡಿ ಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತರು. ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದು ಕಾಂಗ್ರೆಸ್ ಕಾರ್ಯಕರ್ತರು.ಮೂರೂ ಘಟನೆಗಳ ಸೂತ್ರದಾರರು ಈಗ ಘಟನೆಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ ನಾಡದ್ರೋಹಿ ಕಾಂಗ್ರೆಸ್ ಎಂದು ಆರೋಪಿಸಿರುವ ಬಿಜೆಪಿ ಸಿದ್ಧರಾಮಯ್ಯನವರನ್ನು ಉಲ್ಲೇಖಿಸಿ, ಸಿದ್ಧರಾಮಯ್ಯನವರೇ ಪ್ರತಿಮೆ ಭಗ್ನಗೊಳಿಸುವವರು ನೀವೆ. ಗೌರವ ಸಲ್ಲಿಸುವವರು ನೀವೇ.ಇದೆಲ್ಲ ಹೇಗೆ ಸಾದ್ಯ ಎಂದು ಪ್ರಶ್ನಿಸಿದೆ. ಮಹಾರಾಷ್ಟ್ರದಲ್ಲಿರುವ ಆಡಳಿತ ಪಕ್ಷ ಕನ್ನಡ ಬಾವುಟ ಸುಡುತ್ತದೆ. ಕನ್ನಡಿಗರ ವಾಹನ‌ಧ್ವಂಸ ಮಾಡುತ್ತದೆ.ಕರ್ನಾಟಕದ ವಿರೋಧ ಪಕ್ಷ ಶಿವಾಜಿ ಪ್ರತಿಮೆಗೆ ಮಸಿ ಬಳಿಯುತ್ತಿದೆ. ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ಕೆಪಿಸಿಸಿ ಕಚೇರಿಯಿಂದ ಹೊರಟ ಆಜ್ಞೆ ಎಂದು ಬಿಜೆಪಿ ನೇರವಾಗಿ ಆರೋಪಿಸಿದೆ.

ಅಲ್ಲದೇ ಬೆಳಗಾವಿ ಅನಗೋಳದಲ್ಲಿ ಎಂಇಎಸ್ ಪುಂಡರಿಂದ ಹಾನಿಗೊಳಗಾದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಇರುವ ಸ್ಥಳಕ್ಕೆ ಸಿದ್ಧರಾಮಯ್ಯ ಭೇಟಿ ನೀಡಿದ್ದು ಹಾಗೂ ಗೌರವ ಸಲ್ಲಿಸಿದ ಪೋಟೋವನ್ನು ಸಿದ್ಧ ರಾಮಯ್ಯ ನವರ ಸೋಷಿಯಲ್ ಮೀಡಿಯಾದ ಪೋಸ್ಟ್ ನೊಂದಿಗೆ ಹಾಕಿಕೊಂಡು ವ್ಯಂಗ್ಯವಾಡಿದೆ. ಇದಕ್ಕೂ ಮುನ್ನವೂ ಕಾಂಗ್ರೆಸ್ ಭಾಷೆ ಮತ್ತು ಭಾವನೆ ನಡುವೆ ಬೆಂಕಿ‌ಹಚ್ಚಿ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿತ್ತು. ಈಗ ಮತ್ತೊಮ್ಮೆ ಸರಣಿ ಟ್ವೀಟ್ ಗಳ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದ್ದು ಎರಡು ಪಕ್ಷಗಳ ಈ ಸೋಷಿಯಲ್ ಮೀಡಿಯಾ ವಾರ್ ಯಾವ ಹಂತಕ್ಕೆ ತಲುಪುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ :  ಸ್ವ ಕ್ಷೇತ್ರದಲ್ಲಿ ಸಿಎಂ ಕಣ್ಣೀರು: ವಿದಾಯ ಭಾಷಣ ಮಾಡಿದ್ರಾ ಬೊಮ್ಮಾಯಿ ?!

ಇದನ್ನೂ ಓದಿ : ನಿಷ್ಕ್ರೀಯ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರಿಗೆ ಕೆಪಿಸಿಸಿ ಬಿಗ್‌ ಶಾಕ್‌ : ಮೂಡಬಿದ್ರೆ, ಬಂಟ್ವಾಳ, ಸುಳ್ಯ ಬ್ಲಾಕ್‌ಗೆ ಹೊಸ ಅಧ್ಯಕ್ಷರು !

( BJP Congress Tweet War About MES Uproar)

Comments are closed.