Chinese Pakoda: ಫ್ರೀ ಟೈಂನಲ್ಲಿ ಮಾಡಿ ನೋಡಿ ಚೈನೀಸ್ ಪಕೋಡಾ

(Chinese Pakoda) ರಸ್ತೆ ಬದಿಯಲ್ಲಿ ಸಿಗುವ ಚೈನೀಸ್ ಖಾದ್ಯಗಳಿಗೆ ಮನಸೋತವರೇ ಇಲ್ಲ. ನೂಡಲ್ಸ್, ಮಂಚೂರಿಯನ್ ಸೇರಿದಂತೆ ಹಲವು ರೋಡ್ ಸೈಡ್ ತಿಂಡಿಗಳಿಗಾಗಿ ಯುವಕ-ಯುವತಿಯರು ಮುಗಿಬೀಳುತ್ತಾರೆ. ನಾನಿಂದು ಅಂತಹದೇ ಒಂದು ಖಾದ್ಯವನ್ನು ಮನೆಯಲ್ಲಿ ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇನೆ. ಬಾಯಲ್ಲಿ ನೀರೂರಿಸುವ ಚೈನೀಸ್ ಪಕೋಡಾ ಒಮ್ಮೆ ನೀವು ಕೂಡಾ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು (Chinese Pakoda):
ಸಣ್ಣಗೆ ಕತ್ತರಿಸಿದ ಎಲೆಕೋಸು – ಒಂದೂವರೆ ಕಪ್
ತುರಿದ ಕ್ಯಾರೆಟ್ – 1
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – ಕಾಲು ಭಾಗ
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ಚಿಲ್ಲಿ ಸಾಸ್ – 1 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಮೈದಾ – ಅರ್ಧ ಕಪ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಕೆಂಪು ಆಹಾರ ಬಣ್ಣ (ಫುಡ್ ಕಲರಿಂಗ್) – ಅರ್ಧ ಟೀಸ್ಪೂನ್ (ಐಚ್ಛಿಕ)
ಎಣ್ಣೆ – ಹುರಿಯಲು

ಮಾಡುವ ವಿಧಾನ:
ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಮ್, ಸ್ಪ್ರಿಂಗ್ ಆನಿಯನ್, ಮತ್ತು ಈರುಳ್ಳಿ ತೆಗೆದುಕೊಳ್ಳಿ. ನಂತರ ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಮೈದಾ, ಕಾರ್ನ್ ಫ್ಲೋರ್, ಕೆಂಪು ಫುಡ್‌ ಕಲರ್ ಸೇರಿಸಿ. ಮಿಶ್ರಣ ಹಿಟ್ಟಿನಂತಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಎಣ್ಣೆಯನ್ನು ಕಾಯಲು ಒಲೆಯ ಮೇಲೆ ಇಡಿ. ಎ‍ಣ್ಣೆ ಕಾದ ಮೇಲೆ ಕೈಗೆ ಎಣ್ಣೆ ಸವರಿ, ಒಂದೊಂದು ಟೀಸ್ಪೂನ್ ಮಿಶ್ರಣವನ್ನು ತೆಗೆದುಕೊಂಡು, ಪಕೋಡಾ ರೀತಿಯಲ್ಲಿ ಉಂಡೆ ಮಾಡಿಕೊಂಡು ಎಣ್ಣೆಯಲ್ಲಿ ಪಕೋಡಾಗಳನ್ನು ಡೀಪ್ ಫ್ರೈ ಮಾಡಿ. ಪಕೋಡಾ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಇದೀಗ ಪಕೋಡಾವನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹರಡಿ. ಚೈನೀಸ್ ಪಕೋಡಾ ಇದೀಗ ತಯಾರಾಗಿದ್ದು, ಟೊಮೆಟೊ ಸಾಸ್, ಹಸಿರು ಚಟ್ನಿಯೊಂದಿಗೆ ಸವಿಯಿರಿ.

ಇದನ್ನೂ ಓದಿ : Rice Kesri bath: ಅನ್ನದಿಂದ ತಯಾರಿಸಿ ರುಚಿಯಾದ ಕೇಸರಿ ಬಾತ್‌..!

ಇದನ್ನೂ ಓದಿ : Dates Health Tips:ಖರ್ಜೂರ ಉಂಡೆ ತಿಂದು ಆರೋಗ್ಯ ಕಾಪಾಡಿಕೊಳ್ಳಿ

(Chinese Pakoda) No one is disappointed with the Chinese dishes available on the roadside. Young men and women stop for many road side snacks including noodles, Manchurian. I will tell you how to make one such dish at home. Try the mouth-watering Chinese Pakoda once.

Comments are closed.