ಸೋಮವಾರ, ಏಪ್ರಿಲ್ 28, 2025
HomeSpecial StoryCucumber And Coriander Smoothie : ತೂಕ ಇಳಿಸಲು ಸೂಕ್ತವಾದ ಆಹಾರ ಹುಡುಕುತ್ತಿದ್ದೀರಾ? ಸವತೆಕಾಯಿ–ಕೊತ್ತಂಬರಿ ಸೊಪ್ಪಿನ...

Cucumber And Coriander Smoothie : ತೂಕ ಇಳಿಸಲು ಸೂಕ್ತವಾದ ಆಹಾರ ಹುಡುಕುತ್ತಿದ್ದೀರಾ? ಸವತೆಕಾಯಿ–ಕೊತ್ತಂಬರಿ ಸೊಪ್ಪಿನ ಸ್ಮೂಥಿ ಸೇವಿಸಿ

- Advertisement -

ನೀವು ತೂಕ ಇಳಿಸುವ ಪ್ರಯಾಣದಲ್ಲಿದ್ದರೆ, ಆಗ ಬಹಳಷ್ಟು ಜನರು ಆರೋಗ್ಯಕರ ಸ್ಮೋಥಿಯ(Cucumber And Coriander Smoothie) ಸೇವನೆಯ ಬಗ್ಗೆ ನಿಮಗೆ ಸಲಹೆ ನೀಡಿರುತ್ತಾರೆ. ಈ ವಿಚಾರ ಉತ್ತಮವಾದದ್ದು. ಆದರೆ ಸ್ಮೂಥಿ ತಯಾರಿಸಲು ಬೇಕಾಗಿರುವ ಪದಾರ್ಥಗಳನ್ನು ಸೇರಿಸುವುದು ಸ್ವಲ್ಪ ಕಷ್ಟ. ಅದಲ್ಲದೆ ಹಲವಾರು ವ್ಯಂಜನಗಳಿಗೆ ಬೇರೆ ಬೇರೆ ತರಕಾರಿಗಳು, ಹಣ್ಣುಗಳು, ಸೊಪ್ಪುಗಳು, ಡ್ರೈ ಫ್ರೂಟ್ಸ್‌ಗಳು ಬೇಕಾಗುತ್ತವೆ. ಪ್ರತಿದಿನ ಈ ಎಲ್ಲಾ ವಸ್ತುಗಳನ್ನು ಜೋಡಿಸುವುದೇ ಒಂದು ದೊಡ್ಡ ತಲೆನೋವು. ಹಾಗೆ ಒಂದು ದಿನ ನೀವು ಆ ಎಲ್ಲಾ ಉದ್ದದ ಪ್ರಕ್ರಿಯೆಗಳನ್ನು ಬಿಟ್ಟು ಬಿಡುತ್ತೀರಿ ಮತ್ತು ಸ್ಮೂಥಿಯನ್ನೂ ಒಟ್ಟಾರೆಯಾಗಿ ನಿಲ್ಲಿಸಿಬಿಡುತ್ತೀರಿ. ಅದನ್ನು ತಡೆಯುವ ಸಲುವಾಗಿಯೇ ನಾವು ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಸ್ಮೂಥಿಯನ್ನು ಹೇಳುತ್ತಿದ್ದೇವೆ.

ಇದನ್ನೂ ಓದಿ :Cucumber For Skin: ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಸೌತೆಕಾಯಿ ಪಾತ್ರ ಎಂತದ್ದು ಗೊತ್ತಾ..?

ಹೆಸರೇ ಹೇಳುವಂತೆ , ಈ ಸ್ಮೂಥಿಯನ್ನು ಕೇವಲ ಎರಡು ವಸ್ತುಗಳಾದ ಸವತೆಕಾಯಿ ಮತ್ತು ಕೊತ್ತಂಬರಿ ಸೊಪ್ಪು ಉಪಯೋಗಿಸಿ ಮಾಡಬಹುದಾಗಿದೆ. ಬೇಸಿಗೆಯಲ್ಲಿ ದೇಹಕ್ಕೆ ಸವತೆಕಾಯಿ ಬಹಳ ಉತ್ತಮವಾದ ತರಕಾರಿ. ಇದು ನಿರ್ಜಲೀಕರಣವನ್ನು ತಪ್ಪಿಸುತ್ತದೆ. ಇದು ಎಲ್ಲಾ ಪೋಷಕಾಂಶಗಳಿಂದ ಕೂಡಿದೆ. ವಿಟಾಮಿನ್‌ ಕೆ, ಸಿ ಮತ್ತು ಬಿ6, ರೈಬೋಫ್ಲಾವಿನ್‌, ಫೋಲೇಟ್‌, ಮ್ಯಾಗ್ನಾಸಿಯಂ, ಕ್ಯಾಲ್ಸಿಯಂ, ಕಬ್ಬಿಣ, ಫಾಸ್ಪರಸ್‌, ಝಿಂಕ್‌ ಮತ್ತು ಮೊದಲಾದ ಪೋಷಕಾಂಶಗಳು ಹೇರಳವಾಗಿದೆ. ಬಹುಮುಖ ಪ್ರಯೋಜನಗಳಿರುವ ತರಕಾರಿ ನೈಸರ್ಗಿಕವಾಗಿಯೇ ಶೇಕಡಾ 95 ಪ್ರತಿಶತ ನೀರಿನಾಂಶದಿಂದ ಕೂಡಿದ್ದು, ಇದು ಸ್ವಾಭಾವಿಕವಾಗಿಯೇ, ಕ್ಯಾಲೋರಿಗಳನ್ನು, ಕೊಬ್ಬು ಮತ್ತು ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ. ನೀವು ನಿಜವಾಗಿಯೂ ತೂಕ ಇಳಿಸುತ್ತಿದ್ದರೆ ನಿಮ್ಮ ಡಯಟ್‌ನಲ್ಲಿ ಸವತೆಕಾಯಿ ಸೇರಿಸಿ. ಬೇಸಿಗೆಯಲ್ಲಿ ಸ್ಮೂಥಿಯನ್ನು ಸೇವಿಸುವುದು ಒಂದು ಉತ್ತಮ ಆಯ್ಕೆಯಾಗಿದೆ.

ಸವತೆಕಾಯಿ– ಕೊತ್ತಂಬರಿ ಸೊಪ್ಪಿನ ಸ್ಮೂಥಿ ಮಡುವುದು ಹೇಗೆ?

ಒಂದು ಸವತೆಕಾಯಿಯನ್ನು ತೊಳೆದು ಕತ್ತರಿಸಿ. ಒಂದು ಕಪ್‌ ಚೆನ್ನಾಗಿ ತೊಳೆದ ಕೊತ್ತಂಬರಿ ಸೊಪ್ಪು. ಇವೆರಡೂ ಸೇರಿಸಿ ಕಡಿಮೆ ನೀರು ಹಾಕಿ ಜ್ಯೂಸ್‌ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಗ್ಲಾಸ್‌ಗೆ ಪಿಂಕ್‌ ಸಾಲ್ಟ್‌ ಮತ್ತು ಪೆಪ್ಪರ್‌ ಪುಡಿ ಹಾಕಿ. ಅದರ ಜೊತೆ ಐಸ್‌ ಕ್ಯೂಬ್‌ ಸೇರಿಸಿ. ಇಷ್ಟು ಮಾಡಿದರೆ ಸವತೆಕಾಯಿ–ಕೊತ್ತಂಬರಿ ಸ್ಮೂಥಿ ರೆಡಿಯಾಯಿತು. ನೀವೂ ಟ್ರೈ ಮಾಡಿ. ನೆನಪಿಡಿ ಈ ಪಾನೀಯವನ್ನು ಫ್ರಿಡ್ಜನಲ್ಲಿಟ್ಟು ಕುಡಿಯುವ ಅವಶ್ಯಕತೆಯಿಲ್ಲ. ಫ್ರೆಶ್‌ ಇದ್ದಾಗಲೇ ಸ್ಮೂಥಿಯನ್ನು ಕುಡಿಯಿರಿ.

ಇದನ್ನೂ ಓದಿ : Dragon Fruit : ಡ್ರಾಗನ್‌ ಹಣ್ಣು! ಅದ್ಭುತ ಪ್ರಯೋಜನಗಳಿರುವ ಹಣ್ಣನ್ನು ಈ ಬೇಸಿಗೆ ಕಾಲದಲ್ಲಿ ತಿನ್ನಿ

(Cucumber And Coriander Smoothie Ideal diet for your weight loss)

RELATED ARTICLES

Most Popular