Custard Apple Kheer Recipe:ಸೀತಾಫಲ ಹಣ್ಣಿನ ಖೀರ್ ಮಾಡುವ ವಿಧಾನ

(Custard Apple Kheer Recipe)ಸೀತಾಫಲಗಳಲ್ಲಿ ವಿಟಮಿನ್‌ ಸಿ ಅಂಶ ಹೇರಳವಾಗಿ ಇರುವುದರಿಂದ ಹಲವು ಔಷಧೀಯ ಗುಣವನ್ನು ಹೊಂದಿದೆ. ಸೀತಾಫಲ ಹಣ್ಣಿನ ತಿರುಳು, ಎಲೆ, ಬೀಜಗಳಿಂದ ಕೂಡ ಹಲವು ಆರೋಗ್ಯದ ಪ್ರಯೋಜನವನ್ನು ಪಡೆಯಬಹುದು. ಕೆಲವರು ಹಣ್ಣನ್ನು ತಿನ್ನಲು ಇಷ್ಟಪಡುವುದಿಲ್ಲ ಇವರಿಗೆ ಸೀತಾಫಲದ‌ ಖೀರ್ ಮಾಡಿಕೊಡುವುದರಿಂದ ಇಷ್ಟಪಟ್ಟು ತಿನ್ನುತ್ತಾರೆ. ಸೀತಾಫಲ ಹಣ್ಣಿನ ಖೀರ್ ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Custard Apple Kheer Recipe)ಬೇಕಾಗುವ ಸಾಮಾಗ್ರಿಗಳು:

  • ಸೀತಾಫಲ
  • ಹಾಲು
  • ಸಕ್ಕರೆ
  • ಏಲಕ್ಕಿ
  • ಕೇಸರಿ

ಮಾಡುವ ವಿಧಾನ:
ಸೀತಾಫಲ ಹಣ್ಣಿನ ಒಳಬಾಗವನ್ನು ಮಿಕ್ಸಿಜಾರಿಯಲ್ಲಿ ಹಾಕಿ ರುಬ್ಬಿಕೊಂಡು ಇಟ್ಟುಕೊಳ್ಳಬೇಕು. ನಂತರ ಪಾತ್ರೆಯಲ್ಲಿ ನಾಲ್ಕು ಕಪ್‌ ಹಾಲು ಹಾಕಿ ಕಾಯಿಸಿಕೊಳ್ಳಬೇಕು. ಅದಕ್ಕೆ ಎರಡು ಕಪ್ ಸಕ್ಕರೆ,‌ ಮೂರರಿಂದ ನಾಲ್ಕು ಚಿಟಿಕೆ ಏಲಕ್ಕಿ, ಮೂರರಿಂದ ನಾಲ್ಕು ಕೇಸರಿ, ರುಬ್ಬಿಕೊಂಡ ಸೀತಾಫಲ ಹಾಕಿ ಮಿಶ್ರಣ ಮಾಡಿ ಸೌಟನ್ನು ಆಡಿಸಬೇಕು ನಂತರ ಬೌಲ್‌ ಗೆ ಹಾಕಿದರೆ ರುಚಿಯಾಗಿ ಸವಿಯಲು ಸೀತಾಫಲ ಖೀರ್ ರೆಡಿ.

ಇದನ್ನೂ ಓದಿ:Shankha Pushpa dosa recipe:ಶಂಖ ಪುಷ್ಪ ದೋಸೆಯಿಂದ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ

ಇದನ್ನೂ ಓದಿ:Amla Murabba Recipe:ನೆಲ್ಲಿಕಾಯಿ ಮುರಬ್ಬ ತಿಂದ್ರೆ ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ

ಸೀತಾಫಲ
ಸೀತಾಫಲ ಹಣ್ಣನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವು ಕಾಯಿಲೆಯ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ. ತೂಕವನ್ನು ಇಳಿಸಿಕೊಳ್ಳಲು ಡಯೆಟ್‌ ಮಾಡುತ್ತಿರುವರು ಸೀತಾಫಲ ಹಣ್ಣಿನ ಜ್ಯೂಸ್‌ ಕುಡಿದರೆ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು ಜೊತೆಗೆ ಆರೋಗ್ಯಕ್ಕೂ ಉತ್ತಮ. ಗರ್ಭಿಣಿಯರು ಸೀತಾಫಲವನ್ನು ತಿನ್ನುವುದರಿಂದ ಗರ್ಭಪಾತವನ್ನು ತಪ್ಪಿಸಬಹುದು. ಸೀತಾಫಲದಲ್ಲಿ ಕಬ್ಬಿಣಾಂಶ ಮತ್ತು ಫೈಬರ್‌ ಅಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಂಶ ರಕ್ತದೊತ್ತಡ ಮಟ್ಟವನ್ನು ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಪೋಷಕಾಂಶ ಅಂಶಗಳು ಮಧುಮೇಹ ಮತ್ತು ಕ್ಯಾನ್ಸರ್‌ ನಿವಾರಣೆ ಮಾಡುವ ಶಕ್ತಿ ಹೊಂದಿದೆ. ಸೀತಾಫಲ ಹಣ್ಣನ್ನು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಮತ್ತು ರಕ್ತದಲ್ಲಿರುವ ಹೀಮೋಗ್ಲೋಬಿನ್‌ ಮಟ್ಟವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಸೀತಾಫಲವನ್ನು ನೀಯಮಿತವಾಗಿ ಸೇವನೆ ಮಾಡುವುದರಿಂದ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಮುಖದಲ್ಲಿರುವ ನೆರಿಗೆ ಮತ್ತು ಮೊಡವೆಯನ್ನು ನಿವಾರಣೆ ಮಾಡುತ್ತದೆ. ಮುಖದಲ್ಲಿರುವ ಕಪ್ಪು ಕಲೆಯನ್ನು ಹೊಗಲಾಡಿಸಲು ಸೀತಾಫಲ ಹಣ್ಣನ್ನು ಸ್ಕ್ರಬ್‌ ರೀತಿಯಲ್ಲಿ ಬಳಕೆ ಮಾಡಬಹುದು. ಮನೆಯ ಹಿತ್ತಲಲ್ಲಿ ಒಂದು ಸೀತಾಫಲ ಹಣ್ಣಿನ ಗಿಡ ಬೆಳೆಸುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆಯಬಹುದು.

custard apple kheer recipe How to make custard apple kheer

Comments are closed.