Date Seed Coffee : ಖರ್ಜೂರ ಬೀಜದ ಕಾಫಿ : ಒಮ್ಮೆ ಕುಡಿದ್ರೆ ಮತ್ತೆ ಬೇಕನಿಸುತ್ತೆ

ಕಾಫಿ, ಚಹಾ (Date Seed Coffee )ಕುಡಿದ್ರೆ ಮಾತ್ರ ಬಹುತೇಕರಿಗೆ ಬೆಳಕು ಹರಿಯೋದು. ಯಾವುದೇ ಕೆಲಸ ಆರಂಭಕ್ಕೂ ಮೊದಲು ಕಾಫಿ ಅಥವಾ ಚಹಾ ಇರಲೇ ಬೇಕು. ಕೆಲವರಿಗೆ ಕಾಫಿ ಇಷ್ಟವಾದರೆ, ಇನ್ನೂ ಕೆಲವರಿಗೆ ಚಹಾ ಇಷ್ಟವಾಗಿರುತ್ತದೆ. ಕಾಫಿಯನ್ನು ಸಾಮಾನ್ಯವಾಗಿ ಬಿಸಿಯಾಗಿ ಅಥವಾ ತಣ್ಣಗೆ ಸಹ ಕುಡಿಯುತ್ತಾರೆ. ಚಹಾ ಹಾಗೂ ಕಾಫಿಯನ್ನು ಕುಡಿಯದಿದ್ದರೆ ಏನನ್ನೋ ಕಳೆದುಕೊಂಡ ಭಾವನೆ.

ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಒಂದು ಕಾಫಿ ಕುಡಿದರೆ ಒಂದು ತರಹದ ಖುಷಿಯ ಅನುಭವಾಗುತ್ತದೆ. ಅಷ್ಟೇ ಅಲ್ಲದೇ ಕಾಫಿಯನ್ನು ಹಲವು ರೀತಿಯಲ್ಲಿ ತಯಾರಿಸಿ ಕುಡಿಯಬಹುದಾಗಿದೆ. ಅದರಲ್ಲೂ ತಿಂದು ಎಸೆಯುವಂತಹ ಖರ್ಜೂರ ಬೀಜದಿಂದಲೂ ಕೂಡ ಕಾಫಿಯನ್ನು ತಯಾರಿಸಬಹುದಾಗಿದೆ.ಖರ್ಜೂರ ಬೀಜದಿಂದ ಮಾಡಿದ ಕಾಫಿಯನ್ನು ಒಮ್ಮೆ ಕುಡಿದರೆ ಮತ್ತೆ ಮತ್ತೆ ಮಾಡಿ ಕುಡಿಯಬೇಕು ಅನಿಸುತ್ತದೆ. ಖರ್ಜೂರ ಬೀಜದಿಂದ ಮಾಡಿದ ಕಾಫಿ ಅಷ್ಟು ರುಚಿಯಾಗಿರುತ್ತದೆ.ಹಾಗಾದರೆ ಅದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :
ಖರ್ಜೂರದ ಬೀಜ
ಹಾಲು
ಬೆಲ್ಲ

ತಯಾರಿಸುವ ವಿಧಾನ :
ಖರ್ಜೂರ ಬೀಜವನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಬೇಕು. ಬಿಸಿಲಿನಲ್ಲಿ ಚೆನ್ನಾಗಿ ಒಣಗಿದ ಖರ್ಜೂರ ಬೀಜವನ್ನು ಮಧ್ಯಮ ಉರಿಯಲ್ಲಿ ಒಂದು ಬಾಣಲೆ ಬಿಸಿ ಆದ ಮೇಲೆ ಬೀಜವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಖರ್ಜೂರ ಬೀಜವನ್ನು ಹುರಿದುಕೊಳ್ಳುವಾಗಲೇ ಒಳ್ಳೆಯ ಪರಿಮಳ ಬರಲು ಪ್ರಾರಂಭವಾಗುತ್ತದೆ. ಬಣ್ಣ ಬದಲಾಗುವವರೆಗೂ ಹುರಿದ ಖರ್ಜೂರ ಬೀಜವನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಡಬೇಕು. ತಣ್ಣಗಾದ ಬೀಜವನ್ನು ಮೊದಲಿಗೆ ಒಂದು ಕುಟ್ಟಾಣಿಯಲ್ಲಿ ಅರ್ಧದಷ್ಟು ಪುಡಿ ಮಾಡಿಕೊಳ್ಳಬೇಕು.

ಈ ಬೀಜವನ್ನು ಸೀದಾ ಮಿಕ್ಸಿ ಜಾರಿಗೆ ಹಾಕಿದರೆ ಮಿಕ್ಸಿ ಹಾಳಾಗುತ್ತದೆ. ಅದರ ಬದಲು ಕುಟ್ಟಾಣಿಯಲ್ಲಿ ಪುಡಿ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕುವುದರಿಂದ ನುಣ್ಣಗೆ ಪುಡಿಯನ್ನು ತಯಾರಿಸಿಕೊಳ್ಳಬಹುದಾಗಿದೆ. ಖರ್ಜೂರ ಬೀಜವನ್ನು ನುಣ್ಣಗೆ ಪುಡಿ ಮಾಡಿಕೊಂಡ ಮೇಲೆ ಒಂದು ಬಾಟಲಿಗೆ ಹಾಕಿ ಶೇಖರಿಸಿ ಇಟ್ಟುಕೊಳ್ಳಬೇಕು. ಇದನ್ನು ತುಂಬಾ ಸಮಯದವರೆಗೆ ಉಪಯೋಗಿಸಬಹುದಾಗಿದ್ದರಿಂದ ಪೌಡರನ್ನು ಮಾಡಿ ಶೇಖರಿಸಿ ಇಟ್ಟುಕೊಳ್ಳಬಹುದಾಗಿದೆ. ಇದರಲ್ಲಿ ಕಾಫಿ ತಯಾರಿಸುವಾಗ ಎರಡು ಲೋಟ ಹಾಲನ್ನು ಒಂದು ಪಾತ್ರೆಗೆ ಹಾಕಿ ಕಾಯಿಸಿಕೊಳ್ಳಬೇಕು.

ಇದನ್ನೂ ಓದಿ : Hariyali Egg Curry : ಒಮ್ಮೆ ಟ್ರೈ ಮಾಡಿ ರುಚಿಯಾದ ಹರಿಯಾಲಿ ಎಗ್ ಕರಿ

ಇದನ್ನೂ ಓದಿ : Curd Chatney : ಬಿಸಿ ಬಿಸಿ ಅನ್ನದ ಜೊತೆ ಸವಿಯಿರಿ ಸೂಪರ್‌ ಮೊಸರು ಚಟ್ನಿ

ಇದನ್ನೂ ಓದಿ : Soya Chunks Dosa : ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ ರೆಸಿಪಿ

ನಂತರ ಅದಕ್ಕೆ ಎರಡು ಚಮಚ ಬೆಲ್ಲವನ್ನು ಹಾಕಿ ಕುದಿಸಿಕೊಳ್ಳಬೇಕು. ಆಮೇಲೆ ಒಂದು ಚಮಚ ಖರ್ಜೂರ ಬೀಜದ ಪೌಡರ್‌ನ್ನು ಹಾಕಿ ಕುದಿಸಿಕೊಳ್ಳಬೇಕು. ನಂತರ ಒಂದು ಲೋಟಕ್ಕೆ ಸೊಸಿಕೊಂಡರೆ ರುಚಿ ರುಚಿಯಾದ ಖರ್ಜೂರದ ಕಾಫಿ ತಯಾರಾಗಿರುತ್ತದೆ. ಈ ಕಾಫಿಯನ್ನು ಕುಡಿಯುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಈ ಕಾಫಿ ಸಕ್ಕರೆ ಕಾಯಿಲೆಯವರಿಗೆ ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲದೇ ಈ ಕಾಫಿಯನ್ನು ಕುಡಿಯುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗೆ ಕೂದಲು ಉದರುವುದನ್ನು ನಿಲ್ಲಿಸಿ, ಸೊಂಪಾಗಿ ಬೆಳೆಯನ್ನು ಸಹಾಯ ಮಾಡುತ್ತದೆ. ಕಾಫಿ ಪೌಡರನ್ನು ಬಳಸದೇ ಈ ಕಾಫಿಯನ್ನು ತಯಾರಿಸಬಹುದಾಗಿದೆ.

Date seed coffee: Once you drink it, you want it again

Comments are closed.