ಭಾನುವಾರ, ಏಪ್ರಿಲ್ 27, 2025
HomeSpecial StoryBread Pakoda : ರುಚಿ ರುಚಿ ಬ್ರೆಡ್ ಪಕೋಡಾ ನೀವೂ ಟ್ರೈ ಮಾಡಿ

Bread Pakoda : ರುಚಿ ರುಚಿ ಬ್ರೆಡ್ ಪಕೋಡಾ ನೀವೂ ಟ್ರೈ ಮಾಡಿ

- Advertisement -

ಸಂಜೆ ಹೊತ್ತು ಟಿ ಜೊತೆ ಏನಾದ್ರು ಬಿಸಿ ಬಿಸಿ ಕರಿದಿರೊ ತಿಂಡಿ ಇದ್ರೇ ಏನ್‌ ಮಜವಾಗಿರುತ್ತೆ ಅಲ್ವಾ? ಮನೆಯಲ್ಲಿ ನಾಲ್ಕು ಪೀಸ್ ಬ್ರೆಡ್ ಇದ್ದರೆ ಸಂಜೆಯ ಸ್ನ್ಯಾಕ್ಸ್ ಗೆ ರುಚಿಕರವಾದ ಬ್ರೆಡ್ ಪಕೋಡ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಬಹುದು. ಟೀ ಜತೆಗೆ ಇದು ಸಖತ್ ಆಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.

ಬ್ರೆಡ್ ಪಕೋಡ ಮಾಡಲು ಬೇಕಾಗುವ ಸಾಮಾಗ್ರಿಗಳು : 3 ಆಲೂಗಡ್ಡೆ ಬೇಯಿಸಿದ್ದು, 1-ಹಸಿಮೆಣಸು, 1 ಇಂಚು-ಶುಂಠಿ, ¼ ಟೀ ಸ್ಪೂನ್-ಖಾರದಪುಡಿ, 2 ಟೇಬಲ್ ಸ್ಪೂನ್-ಕೊತ್ತಂಬರಿ ಪುಡಿ, ½ ಟೀ ಸ್ಪೂನ್-ಚಾಟ್ ಮಸಾಲ, ¼ ಟೀ ಸ್ಪೂನ್- ಉಪ್ಪು, 1 ಕಪ್-ಕಡಲೇಹಿಟ್ಟು, 2 ಟೇಬಲ್ ಸ್ಪೂನ್-ಅಕ್ಕಿ ಹಿಟ್ಟು, ¼ ಟೀ ಸ್ಪೂನ್-ಖಾರದಪುಡಿ, ½ ಟೀ ಸ್ಪೂನ್-ಉಪ್ಪು, ಚಿಟಿಕೆ-ಸೋಡಾ, ½ ಕಪ್- ನೀರು, 4 ಪೀಸ್ ಬ್ರೆಡ್, 4 ಟೀ ಸ್ಪೂನ್-ಗ್ರೀನ್ ಚಟ್ನಿ.

ಇದನ್ನೂ ಓದಿ: vegitable cutlet : ಸುಲಭವಾಗಿ ಮಾಡಬಹುದು ವೆಜಿಟೆಬಲ್ ಕಟ್ಲೆಟ್‌

ಬ್ರೆಡ್ ಪಕೋಡ ಮಾಡವ ವಿಧಾನ : ಒಂದು ದೊಡ್ಡ ಬೌಲ್ ತೆಗೆದುಕೊಂಡು ಬೇಯಿಸಿದ ಆಲೂಗಡ್ಡೆ ತೆಗೆದುಕೊಂಡು ಅದಕ್ಕೆ ಹಸಿಮೆಣಸು, ಶುಂಠಿ, ಕೊತ್ತಂಬರಿಪುಡಿ, ¼ ಟೀ ಸ್ಪೂನ್ ಖಾರದಪುಡಿ, ಚಾಟ್ ಮಸಾಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ವನಂತರ ಬ್ರೆಡ್ ಗೆ ಗ್ರೀನ್ ಚಟ್ನಿ ಸವರಿ ಅದನ್ನು ಅರ್ಧ ಪೀಸ್ ಮಾಡಿ.

ನಂತರ ಅರ್ಧ ಪೀಸ್ ಬ್ರೆಡ್ ಮೇಲೆ ಆಲೂಗಡ್ಡೆ ಮಿಶ್ರಣವನ್ನು ಹಾಕಿ ಉಳಿದ ಅರ್ಧ ಪೀಸ್ ಬ್ರೆಡ್ ಅನ್ನು ಇದರ ಮೇಲೆ ಇಡಿ. ನಂತರ ಒಂದು ಬೌಲ್ ಗೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಖಾರದಪುಡಿ, ಉಪ್ಪು, ಸೋಡಾ, ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬ್ರೆಡ್ ಅನ್ನು ಈ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಇದನ್ನು ಬಿಡಿ. ಬ್ರೆಡ್ ಪಕೋಡ ಈಗ ಸವಿಯಲು ಸಿದ್ಧ.

ಇದನ್ನೂ ಓದಿ: Paneer Tikka : ಮನೆಯಲ್ಲೂ ಮಾಡಿ ಪನ್ನೀರ್ ಟಿಕ್ಕಾ

(Bread Pakoda)

RELATED ARTICLES

Most Popular