ಮಲೆನಾಡ ಒಡಲು ತೀರ್ಥಹಳ್ಳಿಯಲ್ಲಿವೆ ಪ್ರವಾಸಿಗರ ನೆಚ್ಚಿನ ತಾಣಗಳು

ಮಲೆನಾಡು ಎಂದರೆ ಸಾಕು ಹಸಿರು, ಮಳೆ, ಗಾಳಿ, ಬೆಟ್ಟ, ಜಲಪಾತಗಳು ಕಣ್ಣೆದುರು ಬರುತ್ತವೆ. ಮಲೆನಾಡಿಗೆ ಹತ್ತಿರದ ಊರು ತೀರ್ಥಹಳ್ಳಿ. ಶಿವಮೊಗ್ಗದಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿರುವ ತೀರ್ಥಹಳ್ಳಿ ತುಂಗಾನದಿ ದಡದಲ್ಲಿದೆ. ಮಲೆನಾಡಿನ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವ ತೀರ್ಥಹಳ್ಳಿ ಸುತ್ತಮುತ್ತ ಅನೇಕ ಪ್ರವಾಸಿ ಸ್ಥಳಗಳಿವೆ.

ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿ ಬಾಳಿ ಬದುಕಿದ ಊರು ಕುಪ್ಪಳ್ಳಿ. ಇಲ್ಲಿ ಕುವೆಂಪು ಅವರ ಮನೆ ಇದೆ. ಇದನ್ನು ಪ್ರವಾಸಿಗರಿಗೆ ನೋಡಲು ಅನುಮತಿಯು ಇದೆ. ಕುಪ್ಪಳಿಗೆ ಭೇಟಿ ಕೊಡಬಹುದು. ಕವಿಮನೆ, ಕವಿಶೈಲದ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Manjarabad Fort : ನಕ್ಷತ್ರಾಕಾರದ ಮಂಜರಾಬಾದ್ ಕೋಟೆ

ಅಲ್ಲದೇ ಅಲ್ಲೇ ಪಕ್ಕದಲ್ಲಿ ಕವಲೇ ದುರ್ಗ ಎನ್ನುವ ಪುರಾತನ ದೇವಸ್ಥನ ಹಾಗೂ ದೊಡ್ಡ ಕೊಟೆ ಇದೆ ಇಷ್ಟೇ ಅಲ್ಲದೇ ಅಲ್ಲಿ ಪ್ರಾಚೀನ ಅರಮನೆಯ ಕುರುಹುಗಳನ್ನು ಕಾಣಬಹುದು. ರಾಣಿಯರ ಈಜು ಕೊಳ ಹಾಗು ಸ್ನಾನ ಗ್ರಹ ಎಲ್ಲವೂ ಇದೆ. ಇನ್ನೂ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧವಾದುದು. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಳ್ಳುತ್ತಾರೆ.

ತೀರ್ಥಹಳ್ಳಿ ತಾಲ್ಲೂಕಿನ ಪ್ರಮುಖ ಸ್ಥಳಗಳಲ್ಲಿ ಆಗುಂಬೆಯೂ ಒಂದಾಗಿದೆ. ಸೂರ್ಯಾಸ್ತಮಾನದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥ ತೀರ್ಥಹಳ್ಳಿಗೆ ಸಮೀಪದಲ್ಲಿದೆ. ಇನ್ನೂ ಹಲವಾರು ಪ್ರವಾಸಿ ತಾಣಗಳು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇದೆ.

ಇದನ್ನೂ ಓದಿ: Mirjan Fort : ಮಿರ್ಜಾನ್ ಕೋಟೆ’ಯ ಐತಿಹಾಸಿಕ ವೈಶಿಷ್ಟತೆಯನ್ನು ನೀವು ತಿಳಿಯಲೇ ಬೇಕು

(Tourist places in and around Theerthahalli)

Comments are closed.