ದಕ್ಷಿಣ ಭಾರತದ ಮಾಂಸ ಹಾರಿಗಳು ಹೆಚ್ಚು ಇಷ್ಟ ಪಡುವ ಆಹಾರ ಮೀನು. ಅದರಲ್ಲೂ ಕರಾವಳಿಗರ ಯಾವತ್ತೂ ಇಷ್ಟ ಪಡುವ ಮೀನಿನ ಖಾದ್ಯಗಳಲ್ಲಿ ಬಂಗುಡೆ ಫ್ರೈ ಕೂಡ ಒಂದು. ಇದರ ಮಸಾಲವನ್ನುಮನೆಯಲ್ಲಿತುಂಬಾ ರುಚಿಯಾಗಿ ಸುಲಭವಾಗಿಯೂ ಮಾಡಬಹುದು.

ಬಂಗುಡೆ ಫ್ರೈ ಬೇಕಾಗುವ ಸಾಮಗ್ರಿಗಳು : ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹುಣಸೆ ರಸ, ತೆಂಗಿನ ಎಣ್ಣೆ, ಉಪ್ಪು ಇಷ್ಟನ್ನು ಮೊದಲು ರೆಡಿಮಾಡಿ ಇಟ್ಟು ಕೊಳ್ಳಬೇಕು.

ಇದನ್ನೂ ಓದಿ: vegitable cutlet : ಸುಲಭವಾಗಿ ಮಾಡಬಹುದು ವೆಜಿಟೆಬಲ್ ಕಟ್ಲೆಟ್
ಮಾಡುವ ವಿಧಾನ: ಈ ಮೇಲಿನ ಎಲ್ಲ ಸಾಮಗ್ರಿಗಳನ್ನು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಬಂಗುಡೆ ಮೀನನ್ನು ಸೇರಿಸಿ ಅರ್ಧ ಗಂಟೆ ಬಿಡಿ. ಇದೀಗ ಕಾದ ಎಣ್ಣೆಗೆ ರವ ಲೇಪಿಸಿದ ಬಂಗುಡೆ ಮೀನನ್ನು ಬಿಡಿ. ಎರಡು ಬದಿ ಚೆನ್ನಾಗಿ ಬೇಯಲಿ. ಇದೀಗ ರುಚಿಕರವಾದ ಬಂಗುಡೆ ಫ್ರೈ ಸವಿಯಲು ಸಿದ್ದ.

ಈ ಮಿಶ್ರಣದಲ್ಲೇ ಬಂಗುಡೆ ಮೀನಿನ ತವಾ ಫ್ರೈಯನ್ನು ಮಾಡಬಹುದು. ಅಲ್ಲದೇ ಈ ಮಿಶ್ರಣವನ್ನು ಉಪಯೋಗಿಸಿಕೊಂಡು ಹಲವು ಬಗೆ ಬಗೆಯ ಮೀನಿನ ಫ್ರೈ ಅನ್ನು ಮಾಡಬಹುದು.
ಇದನ್ನೂ ಓದಿ: Paneer Tikka : ಮನೆಯಲ್ಲೂ ಮಾಡಿ ಪನ್ನೀರ್ ಟಿಕ್ಕಾ
(Coastal Favorit Mackerel Fry: Easy to prepare)