2021 Maruti Suzuki Celerio : ಶೀಘ್ರದಲ್ಲೇ ಬಿಡುಗಡೆಯಾಗುತ್ತೆ ಮಾರುತಿ ಸೆಲೆರಿಯೋ ಹೊಸ ಕಾರ್‌

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಗ್ರಾಹಕರ ಮನ ಗೆದ್ದಿದೆ. ಇದೀಗ ಹೊಸ ಮಾದರಿಯ ಮಾರುತಿ ಸೆಲೆರಿಯೋ (2021 Maruti Suzuki Celerio) ಅನ್ನೋ ಹೊಸ ಕಾರ್‌ ಅನ್ನು ಮಾರುತಿ ಸುಜುಕಿ (Maruti Suzuki ) ಕಂಪೆನಿಯು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಿದೆ.

ಮಾರುತಿ ಸುಜುಕಿ ಸೆಲೆರಿಯೋ ಸಾಕಷ್ಟು ವೈಶಿಷ್ಯತೆಗಳನ್ನು ಹೊಂದಿದೆ. ಪ್ರಮುಖವಾಗಿ ಪವರ್ ಫುಲ್ ಇಂಜಿನ್ ಹೊಂದಿದೆ. ಇಂಜಿನ್ ಜೊತೆಗೆ ಇದರ ಇಂಟೀರಿಯರ್ ಹಾಗೂ ಎಕ್ಸ್ಟೀರಿಯರ್ ನಲ್ಲಿಯೂ ಕೂಡ ನೀವು ಹಲವು ಬದಲಾವಣೆಗಳನ್ನು ಹೊಂದಿದೆ.

ಇದನ್ನೂ ಓದಿ: Rapid Matte Edition ಭಾರತದಲ್ಲಿ ಬಿಡುಗಡೆ ಮಾಡಿದ Skoda India

Maruti Suzuki 2021 Celerio ನ ಹೊಸ ರೂಪಾಂತರ ನವೆಂಬರ್‌ 10 ರಂದು ಬಿಡುಗಡೆಯಾಗಲಿದೆ ಎಂದು ಕಂಪೆನಿ ಘೋಷಣೆಯನ್ನು ಮಾಡಿದೆ. ಈ ಹೊಸ ರೂಪಾಂತರದಲ್ಲಿ ಎರಡು ಇಂಜಿನ್ ಆಯ್ಕೆಗಳಲ್ಲಿ ಸಿಗಲಿದೆ. ಮೊದಲ ಆಯ್ಕೆಯಲ್ಲಿ 1 ಲೀಟರ್, 3 ಸಿಲಿಂಡರ್ ಪೆಟ್ರೋಲ ಇಂಜಿನ್ ಇರಲಿದೆ. ಇದು 68 bhp ಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ.

ಎರಡನೇ ಆಯ್ಕೆಯಲ್ಲಿ 1.2 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಇಂಜಿನ್ ಹೊಂದಿರಲಿದ್ದು, ಈ ಕಾರ್ 83 bhp ಪವರ್ ಜನರೇಟ್ ಮಾಡಲಿದೆ. ನೂತನ 2021 Celerio 5 ಸ್ಪೀಡ್ ಮ್ಯಾನುಯೆಲ್ ಗಿಯರ್ ಬಾಕ್ಸ್ ಜೊತೆಗೆ ಬರಲಿದೆ. ಇದರಲ್ಲಿ AMT ಗಿಯರ್ ಬಾಕ್ಸ್ ಆಯ್ಕೆ ನೀಡಲಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸುರಕ್ಷತ ದೃಷ್ಟಿಯಿಂದ ಹೊಸ ಮಾದರಿಯ ಮಾರುತಿ ಸೆಲೆರಿಯೋ ಕಾರ್‌ ಗೆ ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಸ್ಪೀಡ್ ಅಲರ್ಟ್ ಸಿಸ್ಟಮ್ ಹಾಗೂ ಸೀಟ್-ಬೆಲ್ಟ್ ಹಾಕಲು ಜ್ಞಾಪಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ಬರಲಿದೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು

2021ರ ಮಾರುತಿ ಸುಜುಕಿ ಸೇಲೆರಿಯೋನಿಂದ ಹಳೆ ಪ್ಲಾಟ್ ಫಾರ್ಮ್ ಅನ್ನು ತೆಗೆದುಹಾಕಲಾಗಿದೆ. ಇದರಲ್ಲಿ ಹೊಸ ಹಾರ್ಟೆಕ್ಟ್ ಪ್ಲಾಟ್ ಫಾರ್ಮ್ ಆರ್ಕಿಟೆಕ್ಚರ್ ಬಳಸಲಾಗಿದೆ. ಕಂಪನಿ ಈಗಾಗಲೇ ತನ್ನ ಈ ಹೊಸ ಪ್ಲಾಟ್ ಫಾರ್ಮ್ ಅನ್ನು ಇತರೆ ಕಾರುಗಳಲ್ಲಿಯೂ ಕೂಡ ಅಳವಡಿಸುತ್ತಿದೆ. Maruti Suzuki Celerio 2021ಗೆ ‘YMC’ ಕೋಡ್ ವರ್ಡ್ ನೀಡಲಾಗಿದೆ.

(The soon to be launched Maruti Celerio is the new car)

Comments are closed.