ಹುರುಳಿ ಕಾಳು (Horse Gram) ಅತಿ ಹೆಚ್ಚಿನ ಪೌಷ್ಟಿಕಾಂಶ ಹೊಂದಿದ್ದು ದೇಹಕ್ಕೆ ಉತ್ತಮವಾಗಿದೆ. ಇದು ಪ್ರೋಟೀನ್ ನ ಆಗರವಾಗಿದೆ. ಹುರುಳಿ ಕಾಳು ಅನೇಕ ರೋಗಗಳಿಂದ ದೂರವಿರಲು ಸಹಾಯಮಾಡುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಕೊಲೆಸ್ಟ್ರಾಲ್ ಮತ್ತು ಡಯಾಬಿಟೀಸ್ ಅನ್ನು ಕಂಟ್ರೋಲ್ ಮಾಡಲು ಉತ್ತಮವಾಗಿದೆ. ದೇಹದ ತೂಕ ಇಳಿಸಲು ಹುರಳಿಯನ್ನು ನಿಮ್ಮ ಡಯಟ್‌ನಲ್ಲಿಯೂ ಸೇರಿಸಿಕೊಳ್ಳಬಹುದು.
ಇಷ್ಟೆಲ್ಲಾ ಪ್ರಯೋಜನಗಳಿರುವ ಹುರುಳಿಕಾಳನ್ನು ನಿಮ್ಮ ಆಹಾರದ ಭಾಗವಾಗಿಸಿಕೊಳ್ಳಬಹುದಲ್ಲವೇ? ಹುರುಳಿಯಿಂದ ಅನೇಕ ಬಗೆಯ ವ್ಯಂಜನಗಳನ್ನು ತಯಾರಿಸುತ್ತಾರೆ. ಪಲ್ಯ, ಮೊಳಕೆ ತರಿಸಿದ ಕಾಳಿನ ಸಾರು, ಸಿಹಿ ಕಿಚಡಿ ಮುಂತಾದವುಗಳನ್ನು ತಯಾರಿಸುತ್ತಾರೆ. ಆದರೆ ಎಂದಾದರೂ ದಿಢೀರ್ ಸಾರು ಅಥವಾ ರಸಮ್ ಮಾಡೀದ್ದೀರಾ? ಒಮ್ಮೆ ಹುರುಳಿ ಕಾಳು ಸಾರಿನ ಪೌಡರ್ ಮಾಡಿಕೊಟ್ಟುಕೊಂಡರೆ ಆಯಿತು. ನಿಮಗೆ ಯಾವಾಗ ಬೇಕೋ ಆಗ ಧಿಡೀರ್ ಎಂದು ಸಾರು ತಯಾರಿಸಬಹುದು. ಹಾಗಾದರೆ, ಈ ಸಾರಿನ ಪೌಡರ್ ತಯಾರಿಸುವುದು ಹೇಗೆ ಎಂದು ನೋಡೋಣ.
ಹುರುಳಿ ಕಾಳು ಸಾರಿನ ಪೌಡರ್ (Horse Gram Rasam Powder) ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
ಹುರುಳಿ ಕಾಳು 1 ಕಪ್
ತೊಗರಿ ಬೇಳೆ , ಉದ್ದಿನ ಬೇಳೆ 1 ಚಮಚ
ಜೀರಿಗೆ 1/2 ಚಮಚ
ಬೆಳ್ಳುಳ್ಳಿ 10 ರಿಂದ 12
ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ, ತಣ್ಣಗಾದ ಮೇಲೆ ಮಿಕ್ಸರ್‌ಗೆ ಹಾಕಿ ಪುಡಿ ಮಾಡಿ. ಏರ್ ಟೈಟ್ ಡಬ್ಬಿಯಲ್ಲಿ ಶೇಖರಸಿಟ್ಟುಕೊಳ್ಳಿ. ಬೇಕೆಂದಾಗ ಉಪಯೋಗಿಸಬಹುದು.
ಹುರುಳಿ ಕಾಳು ಸಾರು (Horse Gram Rasam) ಮಾಡುವುದು ಹೇಗೆ?
- ಮೊದಲು ಒಂದು ಪಾತ್ರೆಗೆ 2 ಚಮಚ ಅಡುಗೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ.
- ಅದಕ್ಕೆ ಸಾಸಿವೆ, ಕೆಂಪು ಮೆಣಸಿನ ಕಾಯಿ, ಮತ್ತು ಕರಿಬೇವು ಹಾಕಿ.
- ಒಂದು ನಿಮಿಷ ಹುರಿಯಿರಿ ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ ಹಾಕಿ 2 ರಿಂದ 3 ನಿಮಿಷಗಳವರೆಗೆ ಹುರಿಯಿರಿ.
- ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಒಂದು ಟೊಮೆಟೋ ಸೇರಿಸಿ.
- ಎರಡು ಚಮಚ ಹುರುಳಿ ಕಾಳು ಸಾರಿನ ಪೌಡರ್ ಅನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸೇರಿಸಿ.
- ನೀರು ಬೇಕೆಂದರೆ ಸ್ವಲ್ಪ ಸೇರಿಸಿ (ರಸಮ್ ತೆಳುವಾಗಿರಲಿ)
- ಅದಕ್ಕೆ ಉಪ್ಪು, ಖಾರದ ಪುಡಿ, ಬೆಲ್ಲ ಸೇರಿಸಿ.
- ಕೊನೆಯಲ್ಲಿ ಕೊತ್ತುಂಬರಿ ಸೊಪ್ಪು ಸೇರಿಸಿ.
ಈಗ ರುಚಿಯಾದ ಹುರಳಿ ಕಾಳು ದಿಢೀರ್ ಸಾರು ತಯಾರಾಯಿತು. ಅನ್ನ ಮತ್ತು ಮುದ್ದೆಯ ಜೊತೆ ಒಳ್ಳೆ ಕಾಂಬಿನೇಷನ್!
ಇದನ್ನೂ ಓದಿ : Potato Health Benefits : ಆಲೂಗಡ್ಡೆ ಎಂದು ದೂರುವ ಮುನ್ನ ಇದನ್ನೊಮ್ಮೆ ಓದಿ
(Horse Gram rasam How to make horse gram rasam instantly)