ಶನಿವಾರ, ಏಪ್ರಿಲ್ 26, 2025
HomeSpecial StorySpinach Kofta Curry : ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ ಪಾಲಕ್‌ ಸೊಪ್ಪಿನ ಕೋಫ್ತಾ ಕರಿ

Spinach Kofta Curry : ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ ಪಾಲಕ್‌ ಸೊಪ್ಪಿನ ಕೋಫ್ತಾ ಕರಿ

- Advertisement -

ಉತ್ತರ ಭಾರತದಲ್ಲಿ (North India) ಪಾಲಕ್ ಸೊಪ್ಪು (Spinach) ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಮಾನ್ಯವಾಗಿ ಪಾರ್ಟಿ, ಫ್ಯಾಮಿಲಿ ಪಾರ್ಟಿ, ಬರ್ತ್ ಡೇ ಪಾರ್ಟಿಗಳಲ್ಲಿ ಪಾಲಕ್ ಪನೀರ್, ಆಲೂ ಪಾಲಕ್‌, ಆಲೂ–ಮಟರ್‌ ಪಾಲಕ್‌ ಹೀಗೆ ಯಾವುದಾದರೂ ಒಂದು ಪಾಲಕ್‌ಸೊಪ್ಪಿನಿಂದ ತಯಾರಿಸು ಅಡುಗೆ ಇರಲೇಬೇಕು. ಪಾಲಕ್‌ ಸೊಪ್ಪಿನಿಂದ ಪಾಲಕ್‌ ಪರೋಟಾ, ಪಾಲಕ್‌ ಬಜ್ಜಿಗಳನ್ನು ತಯಾರಿಸುತ್ತಾರೆ. ದೇಹಕ್ಕೆ ಉತ್ತಮವಾದ ಪಾಲಕ್‌ ಸೊಪ್ಪಿನಿಂದ ಅನೇಕ ಅಡುಗೆಗಳನ್ನು ತಯಾರಿಸಿಬಹುದು. ಪಾಲಕ್‌ ಸೊಪ್ಪಿನ ಕೋಫ್ತಾ ಕರಿ (Spinach Kofta Curry) ಎಂದಾದರೂ ಟ್ರೈ ಮಾಡಿದ್ದೀರಾ? ಇಲ್ಲಿದೆ ನೋಡಿ ರುಚಿಯಾದ ಪಾಲಕ್‌ ಸೊಪ್ಪಿನ ಕೋಫ್ತಾ ಕರಿ ತಯಾರಿಸುವ ವಿಧಾನ.

ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, 1 ಗ್ರಾಂ ಕಪ್ಪು ಜೀರಿಗೆ ಸೇರಿಸಿ ಮತ್ತು ಗರಿಗರಿಯಾಗಲು ಬಿಡಿ, ಈಗ 3 ಗ್ರಾಂ ಕತ್ತರಿಸಿದ ಶುಂಠಿ ಮತ್ತು ಹಸಿಮೆಣಸು ಸೇರಿಸಿ. ಈಗ ಸಣ್ಣಗೆ ಹೆಚ್ಚಿದ ಎರಡು ಬಟ್ಟಲು ಪಾಲಕ್ ಸೊಪ್ಪನ್ನು ಹಾಕಿ 3 ನಿಮಿಷ ಫ್ರೈ ಮಾಡಿ ಮತ್ತು ಉರಿಯನ್ನು ಆಫ್ ಮಾಡಿ. ಅದಕ್ಕೆ ಒಣ ಹಣ್ಣುಗಳನ್ನು (ಕತ್ತರಿಸಿದ ಏಪ್ರಿಕಾಟ್, ಬಾದಾಮಿ, ಗೋಡಂಬಿ) ಹಾಕಿ ಸ್ಟಫಿಂಗ್‌ ರೆಡಿ ಮಾಡಿಕೊಳ್ಳಿ.

ಒಂದು ಬಟ್ಟಲನ್ನು ತೆಗೆದುಕೊಂಡು, ಪನೀರ್, ಆಲೂಗಡ್ಡೆ, ಏಲಕ್ಕಿ ಪುಡಿ, ಜಾಯಕಾಯಿ ಪುಡಿ ಮತ್ತು ಜೋಳದ ಹಿಟ್ಟು ಮಿಶ್ರಣ ಮಾಡಿ. ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಮತ್ತು ಪ್ರತಿ ಉಂಡೆಗಳಲ್ಲಿ ಮೇಲೆ ಹೇಳಿರುವ ಸ್ಟಫಿಂಗ್‌ ನ್ನು ತುಂಬಿಸಿ. ಕೋಫ್ತಾಗಳನ್ನು ತಿಳಿ ಗೋಲ್ಡನ್ ಬಣ್ಣ ಆಗುವವರೆಗೆ ಎಣ್ಣೆಯಲ್ಲಿ ಕರಿಯಿರಿ.

ಮಿಕ್ಸಿಯಲ್ಲಿ ಶೇಂಗಾ, ಎಳ್ಳು, ಕೊತ್ತಂಬರಿ ಕಾಳು, ಜೀರಿಗೆ, ಮೆಣಸಿನಕಾಯಿ, ಗೋಡಂಬಿ, ಅರಿಶಿನ ಮತ್ತು ತೆಂಗಿನಕಾಯಿ ಸೇರಿಸಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಕತ್ತರಿಸಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ ಮತ್ತು ಈರುಳ್ಳಿ ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಕತ್ತರಿಸಿದ ಶುಂಠಿ ಮತ್ತು ಹುರಿದ ಮಸಾಲೆ ಪೇಸ್ಟ್ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ. ಈಗ ಅದಕ್ಕೆ 500 ಮಿಲಿ ನೀರು ಹಾಕಿ 25 ನಿಮಿಷ ಕುದಿಯಲು ಬಿಡಿ. ಅದಕ್ಕೆ ಕರಿದ ಕೋಫ್ತಾಗಳನ್ನು ಈ ಗ್ರೇವಿಗೆ ಹಾಕಿ ಬಿಸಿಯಾಗಿ ಬಡಿಸಿ.

ಇದನ್ನೂ ಓದಿ : ಬೇಸಿಗೆಯ ವಿಪರೀತ ದಾಹಕ್ಕೆ ಈ ಪಾನೀಯ ಬೆಸ್ಟ್

ಇದನ್ನೂ ಓದಿ : Watermelon : ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳೇನು ಎಂಬುದು ಗೊತ್ತೇ?

(How to make Spinach Kofta Curry at home. Easy and tasty recipe.)

RELATED ARTICLES

Most Popular