(Semolina Choco Sweet Recipe)ಮನೆಯಲ್ಲಿ ವಿಶೇಷ ಸಂದರ್ಭದಲ್ಲಿ ಸಾಮಾನ್ಯವಾಗಿ ತಕ್ಷಣಕ್ಕೆ ಪಾಯಸ ಮಾಡುತ್ತಾರೆ ಇಲ್ಲವಾದಲ್ಲಿ ಅಂಗಡಿಯಿಂದ ಸ್ವೀಟ್ ಖರೀದಿಸಿ ತರುತ್ತಾರೆ. ಅಂಗಡಿಯಿಂದ ಖರೀದಿಸಿ ತಂದ ಸ್ವೀಟ್ ಆರೋಗ್ಯಕ್ಕೆ ಉತ್ತಮವಲ್ಲ ಹಾಗಾಗಿ ರವೆ ಸ್ವೀಟ್ ಮನೆಯಲ್ಲಿಯೇ ತಯಾರಿಸಿ ತಿನ್ನಬಹುದು. ರವೆಯಲ್ಲಿ ಕೇಸರಿಬಾತ್, ರವೆಲಡ್ಡು ಹಲವು ಬಗೆಯ ಸ್ವೀಟ್ ಮಾಡುತ್ತಾರೆ. ಇದನ್ನು ತಿಂದು ಮನೆಯವರಿಗೂ ಕೂಡ ಬೇಸರ ಬಂದಿರುತ್ತದೆ ಹಾಗಾಗಿ ರವೆ ಚಾಕೋ ಸ್ವೀಟ್ ಮಾಡುವುದರಿಂದ ಮನೆಯವರು ಇಷ್ಟ ಪಡುತ್ತಾರೆ.ರವೆ ಚಾಕೋ ಸ್ವೀಟ್ ಹೇಗೆ ಮಾಡುವುದು ಎನ್ನುವ ಮಾಹಿತಿಯನ್ನು ತಿಳಿಯೋಣ.
(Semolina Choco Sweet Recipe)ಬೇಕಾಗುವ ಸಾಮಾಗ್ರಿಗಳು:
- ತುಪ್ಪ
- ರವೆ
- ಹಾಲು
- ಸಕ್ಕರೆ
- ಕೊ ಕೊ ಪೌಡರ್
- ಎಣ್ಣೆ
- ಬಾದಾಮಿ
ಮಾಡುವ ವಿಧಾನ
ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಕಾಯಿಸಿಕೊಂಡು ರವೆ ಹಾಕಿ ಹುರಿದುಕೊಳ್ಳಬೇಕು ನಂತರ ಹಾಲು ಹಾಕಿ ದಪ್ಪ ಹದ ಬರುವವರೆಗೆ ಸೌಟು ಆಡಿಸಬೇಕು. ಬೌಲ್ ನಲ್ಲಿ ಕೊ ಕೊ ಪೌಡರ್ ಮತ್ತು ಹಾಲನ್ನು ಮಿಶ್ರಣ ಮಾಡಿಕೊಂಡು ಬಾಣಲೆಗೆ ಹಾಕಿ ಸೌಟು ಆಡಿಸಬೇಕು. ಬಟ್ಟಲು ತೆಗೆದುಕೊಂಡು ಎಣ್ಣೆ ಸವರಿ ಮಾಡಿಕೊಂಡ ಸ್ವೀಟ್ ಅನ್ನು ಅದಕ್ಕೆ ಹಾಕಿ ಚೌಕ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು. ನಂತರ ಅದರ ಮೇಲೆ ತುಂಡರಿಸಿದ ಬಾದಾಮಿ ಇಟ್ಟರೆ ರವೆ ಚಾಕೋ ಸ್ವೀಟ್ ರೆಡಿ.
ರವೆ ಹಾಲ್ಬಾಯಿ
ಬೇಕಾಗುವ ಸಾಮಾಗ್ರಿಗಳು:
- ರವೆ
- ತೆಂಗಿನ ತುರಿ
- ಬೆಲ್ಲ
- ತುಪ್ಪ
- ಏಲಕ್ಕಿ
- ನೀರು
ಇದನ್ನೂ ಓದಿ:Pomegranate Peel Tambuli:ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಮಾಡಿ ನೋಡಿ ರುಚಿ ರುಚಿ ತಂಬುಳಿ
ಇದನ್ನೂ ಓದಿ:Home Remedy For Period Pain: ಋತುಚಕ್ರದಲ್ಲಿ ಕಾಡುವ ಹೊಟ್ಟೆನೋವಿಗೆ ಇಲ್ಲಿದೆ ಮನೆಮದ್ದು
ಇದನ್ನೂ ಓದಿ:Dates Health Tips:ಖರ್ಜೂರ ಉಂಡೆ ತಿಂದು ಆರೋಗ್ಯ ಕಾಪಾಡಿಕೊಳ್ಳಿ
ಮಾಡುವ ವಿಧಾನ
ಮಿಕ್ಸಿ ಜಾರಿಯಲ್ಲಿ ತೆಂಗಿನ ತುರಿ,ರವೆ, ಏಲಕ್ಕಿ , ಒಂದು ಕಪ್ ನೀರು ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಒಂದು ಬೌಲ್ ನಲ್ಲಿ ನೀರು, ಬೆಲ್ಲ ಹಾಕಿಕೊಂಡು ಕರಗಲು ಬೀಡಬೇಕು ನಂತರ ಬಾಣಲೆಗೆ ರುಬ್ಬಿಕೊಂಡ ಪದಾರ್ಥ ಮತ್ತು ಬೆಲ್ಲದ ನೀರು ಹಾಕಿ ಸೌಟನ್ನು ಆಡಿಸಬೇಕು. ದಪ್ಪ ಹದಕ್ಕೆ ಬರುತ್ತಿದ್ದ ಹಾಗೆ ಸಣ್ಣ ಉರಿಯಲ್ಲಿ ಹದಿನೈದು ನಿಮಿಷ ಸೌಟು ಆಡಿಸಬೇಕು. ಸ್ವಲ್ಪ ಸಮಯದ ನಂತರ ತಳ ಬೀಡಲು ಪ್ರಾರಂಭಿಸುತ್ತದೆ ಆಗ ಬಟ್ಟಲಿಗೆ ಎಣ್ಣೆಯನ್ನು ಸವರಿ ಹಾಲ್ಬಾಯಿಯನ್ನು ಹಾಕಬೇಕು, ಬಿಸಿ ಆರಿದ ನಂತರ ಕತ್ತರಿಸಬೇಕು.
Semolina Choco Sweet Recipe Let’s know how to make semolina choco sweet