Kantara Movie in English : ಇಂಗ್ಲೀಷ್‌ ಭಾಷೆಗೆ ಡಬ್‌ ಆಗಲಿದೆ ರಿಷಬ್‌ ಶೆಟ್ಟಿ ನಟನೆಯ “ಕಾಂತಾರ”

ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಇದೀಗ ಪ್ಯಾನ್‌ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ತೆರೆ ಕಂಡ “ಕಾಂತಾರ” ಸಿನಿಮಾ ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗಿ ಕಮಾಲ್‌ ಮಾಡುತ್ತಿದೆ. ಸದ್ಯ ಸಿನಿಮಂದಿರ ಹಾಗೂ ಓಟಿಟಿಯಲ್ಲಿ ಸದ್ದು ಮಾಡುತ್ತಿರುವ “ಕಾಂತಾರ” ಇದೀಗ ಹೊಸ ಹೆಜ್ಜೆ (Kantara Movie in English) ಇಡುತ್ತಿದೆ. ಅಂತರಾಷ್ಟ್ರೀಯ ಸಿನಿಪ್ರೇಕ್ಷಕರನ್ನು ಗಮನ ಸೆಳೆಯಲು ಸಿನಿತಂಡ, ವಿದೇಶಿ ಭಾಷೆಗೆ ಡಬ್‌ ಮಾಡಿ ತೆರೆಗೆ ತರುತ್ತಿದೆ.

ಈಗಾಗಲೇ ಕನ್ನಡದ “ಕಾಂತಾರ” ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು ಭಾಷೆಯಲ್ಲಿ ಡಬ್‌ ಆಗಿ ತೆರೆ ಕಂಡಿದೆ. ಇದೀಗ “ಕಾಂತಾರ” ಇಂಗ್ಲೀಷ್‌ ಭಾಷೆಗೆ ಡಬ್‌ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಡಬ್‌ ಆಗಿ ಸ್ಟ್ರೀಮಿಂಗ್‌ ಆಗಲಿದೆ. ಎಲ್ಲಾ ಭಾಷೆಯ ಸಿನಿಪ್ರೇಕ್ಷಕರನ್ನು ಸೆಳೆಯುತ್ತಿರುವ ಕಾಂತಾರ ಈಗ ವಿದೇಶಿಗರ ಗಮನ ಸೆಳೆಯಲು ಸಿನಿ ತಂಡ ರೆಡಿಯಾಗಿದೆ.

“ಕಾಂತಾರ” ಸಿನಿಮಾ ಸೆಪ್ಟೆಂಬರ್‌ 30ರಂದು ಬಿಡುಗಡೆ ಆಗಿದ್ದು, ರೂ.400 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಬಾಕ್ಸ್‌ಆಫೀಸ್‌ ಕಲೆಕ್ಷನ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಎರಡು ವಾರಗಳ ನಂತರ ಬೇರೆ ಭಾಷೆಗಳಿಗೂ ಡಬ್‌ ಆಗಿ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಈ ಸಿನಿಮಾ ಹಿಂದಿಗೆ ಡಬ್‌ ಆಗಿ ಅದ್ಭುತ ಯಶಸ್ಸನ್ನು ಕಂಡಿತ್ತು. “ಕಾಂತಾರ” ಬಾಲಿವುಡ್‌ನಲ್ಲಿ 50 ದಿನ ಪೂರೈಸಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇಂತಹ ಸಮಯದಲ್ಲೇ “ಕಾಂತಾರ” ಸಿನಿಮಾ ಓಟಿಟಿ ಫ್ಲಾರ್ಟ್‌ಫಾರ್ಮಾಗೆ ಲಗ್ಗೆ ಇಟ್ಟು ಕಮಾಲ್‌ ಮಾಡಲು ಶುರು ಮಾಡಿದೆ.

ಈಗಾಗಲೇ “ಕಾಂತಾರ” ನಾಲ್ಕು ಭಾಷೆಗಳಲ್ಲಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಆದರೆ ಹಿಂದಿಯಲ್ಲಿ ಡಿಸೆಂಬರ್‌ 9ಕ್ಕೆ ನೆಟ್‌ಫ್ಲಿಕ್ಸ್‌ಗೆ ಸ್ಟ್ರೀಮಿಂಗ್‌ ಆಗಲಿದೆ. ಹಿಂದಿಗೆ ಡಬ್‌ ಆಗಿ ನೆಟ್‌ಫ್ಲಿಕ್ಸ್‌ ಲಗ್ಗೆ ಕೊಡುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ “ಕಾಂತಾರ” ಸಿನಿಮಾ ಪಾತ್ರವಾಗಿದೆ. ನೆಟ್‌ಫ್ಲಿಕ್ಸ್‌ ಮೂಲಕ ಪ್ರಪಂಚದ ಮೂಲೆ ಮೂಲೆಗೆ ಕರಾವಳಿ ಸೊಗಡು ತಲುಪಲಿದೆ. “ಕಾಂತಾರ” ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿಗೆ ಸ್ಟ್ರೀಮಿಂಗ್‌ ಆಗುವ ಬೆನ್ನಲ್ಲೇ ಇಂಗ್ಲೀಷ್‌ ವರ್ಷನ್‌ನಲ್ಲಿ ಕೂಡ ಬರಲಿದೆ.

ಇದನ್ನೂ ಓದಿ : Krishna G Rao: ಕೆಜಿಎಫ್ ತಾತ ಕೃಷ್ಣ ಜಿ ರಾವ್ ಇನ್ನಿಲ್ಲ; ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರು

ಇದನ್ನೂ ಓದಿ : Tanuja Movie Trailer Release : ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಬಿ.ಎಸ್ ಯಡಿಯೂರಪ್ಪ : ಸಚಿವ ಸುಧಾಕರ್‌ ಪಾತ್ರ ಏನು ಗೊತ್ತಾ ?

ಇದನ್ನೂ ಓದಿ : Akshay Kumar : ಛತ್ರಪತಿ ಶಿವಾಜಿ ಕಾಲದಲ್ಲಿ ಬಲ್ಬ್‌ ಕಂಡು ಹಿಡಿದಿದ್ಯಾರು ? ಅಕ್ಷಯ್‌ ಕುಮಾರ್‌ ವಿರುದ್ಧ ನೆಟ್ಟಿಗರು ಗರಂ

ಜನವರಿಯಿಂದ “ಕಾಂತಾರ” ಇಂಗ್ಲೀಷ್‌ ವರ್ಷನ್‌ ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಾಣಲಿದೆ. ಕರಾವಳಿಯ ನೆಲ, ಸಂಸ್ಕೃತಿಯನ್ನು ಇಂಗ್ಲೀಷ್‌ ಭಾಷೆಗೆ ಹೇಗೆ ಡಬ್‌ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ. ಗಗ್ಗರ, ಕಂಬಳ, ಭೂತಕೋಲ, ಕಾರ್ಣೀಕ, ನೇಮ ಎನ್ನುವುದನ್ನು ವಿದೇಶಿ ಭಾಷೆಗೆ ಹೇಗೆ ಡಬ್‌ ಮಾಡುತ್ತಾರೆ ಎನ್ನುವುದು ಅನೇಕರಿಗೆ ಇದರ ಬಗ್ಗೆ ಕುತೂಹಲವನ್ನು ಕೆರಳಿಸಿದೆ.

Kantara Movie in English : Rishabh Shetty starrer “Kantara” will be dubbed in English.

Comments are closed.